ಭೂಮಿಯ ಮೇಲೆ ಇರುವ ಜಗತ್ತಿನ ಅತ್ಯಂತ 10 ವಿಚಿತ್ರವಾದ ಜೀವಿಗಳು| ಈ ಜೀವಿಗಳಿಗೆ ಅಂತಹ ಶಕ್ತಿ ಏನಿದೆ ಗೊತ್ತಾ,? Most Unique And Rarest Animals in The World
“ನಂಬರ್ 10 ಆಕ್ಸಲೋಟಲ್ ಈ ಜೀವಿ” ತನ್ನ ವಿಶೇಷವಾದ ರೂಪದಿಂದ ತುಂಬಾನೇ ಫೇಮಸ್ ಆಗಿದೆ ಈ ಜೀವಿಗಳು ಮೆಕ್ಸಿಕೋದಲ್ಲಿ ಹೆಚ್ಚಾಗಿ ಕಂಡುಬರುತ್ತವೆ, ಯಾವುದಾದರೂ ಕಾರಣದಿಂದ ನಿಮ್ಮ ಬಾಡಿ ಪಾರ್ಟ್ ಒಂದು ಕಟ್ ಆದ್ರೆ, ಸಮಯದ ಜೊತೆ ಜೊತೆಗೆ ಅಲ್ಲಿ ಪೂರ್ತಿಯಾಗಿ ಹೊಸ ಚರ್ಮ ಬರುತ್ತೆ, ಬದಲಿಗೆ ಆ ಬಾಡಿ ಪಾರ್ಟ್ ಮತ್ತೆ ಬೆಳೆಯುವುದಿಲ್ಲ, ಆಲ್ಮೋಸ್ಟ್ ಭೂಮಿಯಲ್ಲಿರುವ ಎಲ್ಲಾ ಜೀವರಾಶಿಗಳಿಗೂ ಕೂಡ ಇದು ಅನ್ವಯಿಸುತ್ತೆ, ಆದರೆ ಈ ಪ್ರಕೃತಿ ಕೆಲವು ಜೀವಿಗಳಿಗೆ ಒಂದು ಅದ್ಭುತವಾದ ವರ ಕೊಟ್ಟಿದೆ, ಅದರಲ್ಲಿ ಈ ಆಕ್ಸೋಲೋಟಲ್ ಜೀವಿ ಕೂಡ ಒಂದು, ಅಂದ್ರೆ ಈ ಆಕ್ಸೋಲೋಟಲ್ನ ಬಾಡಿ ಪಾರ್ಟ್ ಏನಾದ್ರು ಕಟ್ ಆದ್ರೆ ಕೇವಲ 90 ದಿನಗಳಲ್ಲಿ ಮತ್ತೆ ಅದು ಬೆಳೆಯುತ್ತೆ,

ನಂಬುವುದಕ್ಕೆ ಸ್ವಲ್ಪ ಕಷ್ಟವಾದರೂ ಕೂಡ ಇದು ನಿಜ, ಇದರ ಬಾಡಿ ಪಾರ್ಟ್ ಕಟ್ ಆದ ತಕ್ಷಣ ಇನ್ಫೆಕ್ಷನ್ ಇಂದ ತಪ್ಪಿಸಿಕೊಳ್ಳಲು ಆ ಪಾರ್ಟ್ ಈ ರೀತಿ ತಕ್ಷಣ ಮುಚ್ಚಿಕೊಳ್ಳುತ್ತೆ, ನಂತರ ಸ್ವಲ್ಪ ಸಮಯದಲ್ಲೇ ಆ ಭಾಗದಲ್ಲಿ ಸೆಲ್ಸ್ ಹುಟ್ಟುವುದಕ್ಕೆ ಸ್ಟಾರ್ಟ್ ಆಗುತ್ತೆ, ಆ ಸೆಲ್ಸ್ ಅನ್ನ ಬ್ಲಾಸ್ಟಿಮಾ ಅಂತ ಕರೀತಾರೆ ಹೆಚ್ಚು ಪ್ರಮಾಣದಲ್ಲಿ ಈ ಸೆಲ್ಸ್ ಇಲ್ಲಿ ಕ್ರಿಯೇಟ್ ಆಗ್ತವೆ ನಿಧಾನವಾಗಿ ಈ ಸೆಲ್ಸ್ ಬೆಳೆಯುತ್ತಾ ಹೋದಂತೆ ಅವು ಬೋನ್ ನರ್ವ್ ಸ್ಕಿನ್ ರೂಪಕ್ಕೆ ಬದಲಾಗುತ್ತವೆ, ಈ ರೀತಿ ಕೇವಲ 90 ದಿನಗಳಲ್ಲಿ ಗಳಲ್ಲಿ ಈ ಆಕ್ಸೋಲೋಟಲ್ನ ಬಾಡಿ ಪಾರ್ಟ್ ಮತ್ತೆ ಬೆಳೆಯುತ್ತೆ,
ಅದೇ ರೀತಿ “ಸಾಲಮಂಡರ್” ಅನ್ನುವ ಜೀವಿಗೂ ಕೂಡ ಈ ಅದ್ಭುತವಾದ ಶಕ್ತಿ ಇದೆ, ಈ ಜೀವಿಗಳ ಮೇಲೆ ವಿಜ್ಞಾನಿಗಳು ತುಂಬಾನೇ ರಿಸರ್ಚ್ ಮಾಡ್ತಿದ್ದಾರೆ, ಇವುಗಳ ಈ ಸೀಕ್ರೆಟ್ ಅನ್ನ ಡಿಕೋಡ್ ಮಾಡಿ ಮನುಷ್ಯರಿಗೆ ಕಟ್ ಆಗಿರುವ ಬಾಡಿ ಪಾರ್ಟ್ಸ್ ಅನ್ನ ಮತ್ತೆ ಬೆಳೆಯುವ ತರ ವಿಜ್ಞಾನಿಗಳು ಮಾಡ್ತಾರಾ? ಇದರ ಬಗ್ಗೆ ನಿಮಗೇನು ಅನ್ಸುತ್ತೆ ಅಂತ ಕಾಮೆಂಟ್ ಮಾಡಿ?

“ನಂಬರ್ 9 “ಸ್ಟಾರ್ ನೋಸ್ಡ್ ಮೊಲೆ” ಇದು ಉತ್ತರ ಅಮೇರಿಕಾದಲ್ಲಿ ಕಂಡುಬರುವ ಒಂದು ಅದ್ಭುತವಾದ ಜೀವಿ, ಇದರಲ್ಲಿರುವ ವಿಶೇಷತೆ ಬಂದು ಇದರ ಮೂಗು, ಹೌದು ಇದರ ಮೂಗು ತುಂಬಾನೇ ವಿಚಿತ್ರವಾಗಿ ಒಂದು ನಕ್ಷತ್ರದ ತರ ಇರುತ್ತೆ ಇದರ ಮೂಗಿನಲ್ಲಿ 22 ಕ್ಕಿಂತ ಹೆಚ್ಚು ಚಿಕ್ಕ ಚಿಕ್ಕ ಟೆಂಟಿಕಲ್ಸ್ ಇರುತ್ತವೆ ಅವುಗಳ ಮೂಲಕ ತನ್ನ ಸುತ್ತಮುತ್ತ ಇರುವ ವಾತಾವರಣವನ್ನ ತುಂಬಾ ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲದು, ಆದರೆ ಇದೊಂದು ಮಾಂಸಾಹಾರಿ ಜೀವಿ ಆಗಿದೆ.
ಈ ಜೀವಿ ತನ್ನ ಬೇಟೆಯನ್ನು ಹುಡುಕುವುದಕ್ಕೆ ತನ್ನ ಮೂಗಿನ ಸಹಾಯವನ್ನು ತೆಗೆದುಕೊಳ್ಳುತ್ತೆ, ಇದರ ಮುಖ್ಯವಾದ ಆಹಾರ ಬಂದು ಕ್ರಿಮಿ ಕೀಟಗಳು ಮತ್ತು ಸಮುದ್ರದ ಚಿಕ್ಕಪುಟ್ಟ ಜೀವಿಗಳ ಮೇಲೆ ಕೂಡ ಇದು ಡಿಪೆಂಡ್ ಆಗಿರುತ್ತೆ, ಈ ಜೀವಿಯ ಕಣ್ಣುಗಳು ತುಂಬಾನೇ ಚಿಕ್ಕದಾಗಿರುತ್ತವೆ ಇದರಿಂದ ಈ ಜೀವಿಗೆ ಸರಿಯಾಗಿ ಕಣ್ಣುಗಳು ಕಾಣೋದಿಲ್ಲ ಆದರೂ ಕೂಡ ತನ್ನ ಸುತ್ತಮುತ್ತ ಇರುವ ವಾತಾವರಣವನ್ನ ಅರ್ಥಮಾಡಿಕೊಂಡು ಇದು ಜೀವಿಸುತ್ತೆ, ಇದರ ವಿಚಿತ್ರವಾದ ರೂಪ ಮತ್ತು ಬಿಹೇವಿಯರ್ ಇಂದ ಇದನ್ನ ನಮ್ಮ ಜಗತ್ತಿನಲ್ಲಿರುವ ವಿಸ್ಮಯವಾದ ಜೀವಿ ಅಂತ ಕರೆಯಲಾಗುತ್ತೆ.

“ನಂಬರ್ 8 “ವ್ಯಾಂಪೈರ್ ಸ್ಕ್ವಿಡ್” ಈ ಜೀವಿ ನೋಡೋದಕ್ಕೆ ತುಂಬಾನೇ ಭಯಂಕರವಾಗಿದೆ ಅಲ್ವಾ, ಈ ಭಯಾನಕವಾದ ರೂಪದಿಂದಾನೆ ಈ ಜೀವಿಗೆ Vampire squid ಅನ್ನುವ ಹೆಸರನ್ನ ಇಡಲಾಗಿದೆ, ಹೆಚ್ಚು ಕಡಿಮೆ ಈ ಸ್ಕ್ವಿಡ್ 30 cm ಉದ್ದ ಮತ್ತು 0.9 kg ಅಷ್ಟು ತೂಕವನ್ನು ಹೊಂದಿರುತ್ತೆ, ಹಾಗೂ 600 ರಿಂದ 900 m ಆಳವಾದ ಸಮುದ್ರದಲ್ಲಿ ಈ ಜೀವಿ ಜೀವನ ಮಾಡುತ್ತೆ, ಇದು ಎಷ್ಟೊಂದು ಅಪಾಯಕಾರಿಯಾದ ಪ್ರದೇಶ ಅಂದ್ರೆ ಒಂದು ಅಡ್ವಾನ್ಸ್ಡ್ ಸಬ್ಮೆರಿನ್ ನ ಸಹಾಯವಿಲ್ಲದೆ ಈ ಪ್ರದೇಶಕ್ಕೆ ಮನುಷ್ಯರು ಹೋಗುವುದು ಇಂಪಾಸಿಬಲ್, ನಿಮಗೆ ಗೊತ್ತಿರಬಹುದು ಸಮುದ್ರದಲ್ಲಿ ಮುಳುಗಿರುವ ಟೈಟಾನಿಕ್ ಶಿಪ್ ಅನ್ನ ನೋಡಲು ಐದು ಜನ ವ್ಯಕ್ತಿಗಳು ಈ ಟೈಟಾನ್ ಸಬ್ಮೆರಿಸಿಬಲ್ ನಲ್ಲಿ ಹೋದಾಗ ಸಮುದ್ರದಲ್ಲಿರುವ ಪ್ರೆಷರ್ ಅನ್ನ ತಡೆದುಕೊಳ್ಳಲು ಸಾಧ್ಯವಾಗದೆ ಅದು ಬ್ಲಾಸ್ಟ್ ಆಗಿತ್ತು, ಅದರಲ್ಲಿದ್ದ ಐದು ಜನರ ಡೆಡ್ ಬಾಡಿಸ್ ಕೂಡ ಸಿಗಲಿಲ್ಲ .
ನಮ್ಮ ವ್ಯಾಂಪೈರ್ ಸ್ಕ್ವಿಡ್ ಬಗ್ಗೆ ಮಾತನಾಡಿದರೆ ಕೆಲವು ಮಿಲಿಯನ್ ವರ್ಷಗಳಿಂದ ಸನ್ ಲೈಟ್ ನ ಅವಶ್ಯಕತೆ ಬೀಳದೆ ಸಮುದ್ರದ ಆಳದಲ್ಲಿ ಜೀವಿಸ್ತಾ ಇದೆ ಇದು ನೋಡುವುದಕ್ಕೆ ಭಯಾನಕವಾಗಿರಬಹುದು, ಆದರೆ ಈ ಜೀವಿಯನ್ನ ನೋಡಿ ನೀವು ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಇದರ ಹೆಸರಲ್ಲಿ ವ್ಯಾಂಪೈರ್ ಇರಬಹುದು ಆದರೆ ಇದೊಂದು ಸಸ್ಯಹಾರಿ ಜೀವಿ ನಂಬುವುದಕ್ಕೆ ನಿಮಗೆ ಕಷ್ಟವಾದರೂ ಕೂಡ ಇದೇ ನಿಜ,

“ನಂಬರ್ 7: ಪ್ಲಾಟಿಪಸ್” ಒಂದು ಅದ್ಭುತವಾದ ಮತ್ತು ರಹಸ್ಯವಾದ ಜೀವಿ, ಹೆಚ್ಚಾಗಿ ಇವು ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತವೆ, ಇದೊಂದು ಮಾಂಸಾಹಾರಿ ಜೀವಿ, ಇದರ ವಿಚಿತ್ರವಾದ ಮೂತಿಯಿಂದ ಇದು ಪ್ರಪಂಚದಾದ್ಯಂತ ತುಂಬಾನೇ ಫೇಮಸ್ ಆಗಿದೆ, ಇದರ ದೇಹ ನೋಡೋದಕ್ಕೆ ಬೆಕ್ಕು ಮತ್ತು ಬಾತುಗಳಿಗೆ ಹೋಲುತ್ತೆ
ಇದು ಹೆಚ್ಚಾಗಿ ನೀರಿನಲ್ಲಿ ಜೀವಿಸುವ ಜೀವಿಗಳನ್ನೇ ಬೇಟೆಯಾಡಿ ತಿನ್ನುತ್ತೆ, ಈ ಜೀವಿಯ ಸೈಂಟಿಫಿಕ್ ನೇಮ್ ಬಂದು ಆರ್ನಿತೋರಿಯಂಚಸ್ ಅನಾಟಿನಸ್, ಇದರ ಅರ್ಥ ಬಂದು ಮೊಟ್ಟೆ ಇಡುವ ಮತ್ತು ಮೂಗಿನ ಜೀವಿ ಅಂತ, ಹೌದು ಇದೊಂದು ಮೊಟ್ಟೆಗಳನ್ನು ಇಡುವ ಜೀವಿ ಇದರ ವಿಚಿತ್ರವಾದ ರೂಪ ಮತ್ತು ಇದರ ದೇಹದಲ್ಲಿರುವ ವಿಶೇಷತೆಗಳಿಂದ ಇದರ ಮೇಲೆ ರಿಸರ್ಚ್ ಮಾಡೋಕೆ ವಿಜ್ಞಾನಿಗಳು ತುಂಬಾನೇ ಆಸಕ್ತಿ ತೋರಿಸುತ್ತಿದ್ದಾರೆ.

ನಂಬರ್ 6: “ಆಯೆ ಆಯೆ” ಮಡಗಾಸ್ಕರ್ ನಲ್ಲಿ ಕಂಡುಬರುವ ಒಂದು ರಹಸ್ಯವಾದ ಜೀವಿ ಬಗ್ಗೆ ಈಗ ನಿಮಗೆ ತಿಳಿಸಿಕೊಡ್ತೀನಿ, ಈ ಜೀವಿಗಳು ಹೆಚ್ಚಾಗಿ ರಾತ್ರಿ ಸಮಯದಲ್ಲಿ ಮಾತ್ರವೇ ಮರಗಳ ಮೇಲೆ ತಿರುಗಾಡುತ್ತವೆ, ಇದು ನೋಡುವುದಕ್ಕೆ ಬೆಕ್ಕುಗಳ ತರ ಕಾಣುತ್ತೆ ಇವುಗಳಲ್ಲಿರುವ ವಿಶೇಷತೆ ಬಂದು, ಇದರ ಉದ್ದವಾದ ಬೆರಳುಗಳು ಇವುಗಳನ್ನು ಬಳಸಿಕೊಂಡು ಸುಲಭವಾಗಿ ಮರಗಳ ಮೇಲೆ ನಡೆಯಬಲ್ಲವು, ಜೊತೆಗೆ ಇದರ ಮುಖ್ಯವಾದ ಆಹಾರ ಬಂದು ಮೆಕ್ಕೆಜೋಳ ತೆಂಗಿನಕಾಯಿ ಲಾರ್ವ ಹಾಗೂ ಕೆಲವು ಕೀಟಗಳನ್ನು ಕೂಡ ಇದು ಸೇವಿಸುತ್ತೆ ಇದರ ಉಗುರುಗಳಿಂದ ಮರಗಳ ಮೇಲೆ ರಂದ್ರವನ್ನ ಮಾಡಿ ಅದರಲ್ಲಿ ಬರುವ ಲಾರ್ವವನ್ನ ಇದು ಸೇವಿಸುತ್ತೆ, ಅಲ್ಲಿನ ಸ್ಥಳೀಯ ಜನರು ಈ ಜೀವಿಯನ್ನು ಒಂದು ಅಶುಭ ಎಂದು ನಂಬುತ್ತಾರೆ,

“ನಂಬರ್ 5: “ಬ್ಲಾಬ್ ಫಿಶ್” ಈ ರೀತಿಯ ಫಿಶ್ ಗಳು ಆಳವಾದ ಸಮುದ್ರದಲ್ಲಿ ಕಂಡುಬರುವ ಒಂದು ವಿಚಿತ್ರವಾದ ಜೀವಿ, ಅದರಲ್ಲೂ ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನ ಹತ್ತಿರದ ಸಮುದ್ರದಲ್ಲಿ ಈ ಜೀವಿ ಕಂಡುಬರುತ್ತೆ, ಈ ಮೀನು ತುಂಬಾನೇ ವಿಚಿತ್ರವಾದ ರೂಪವನ್ನ ಹೊಂದಿದೆ, ಈ ಮೀನು ಆಳವಾದ ಸಮುದ್ರದಲ್ಲಿ ಇದ್ದಾಗ ಅಷ್ಟೊಂದು ವಿಚಿತ್ರವಾಗಿ ಕಾಣಿಸೋದಿಲ್ಲ ಆದರೆ ಸಮುದ್ರದಿಂದ ಹೊರಗಡೆ ತೆಗೆದ ತಕ್ಷಣ ಇದು ವಿಚಿತ್ರ ರೂಪಕ್ಕೆ ಬದಲಾಗುತ್ತೆ,
ಇದಕ್ಕೆ ಕಾರಣವೇನು ಅಂದ್ರೆ? ಆಳವಾದ ಸಮುದ್ರದಲ್ಲಿ ತುಂಬಾನೇ ಹೆಚ್ಚು ಪ್ರೆಷರ್ ಇರುತ್ತೆ ಆ ವಾತಾವರಣಕ್ಕೆ ತಕ್ಕಂತೆ ಈ ಮೀನು ತನ್ನ ದೇಹವನ್ನ ರೂಪಿಸಿಕೊಂಡಿದೆ, ಆದರೆ ಸಮುದ್ರದಿಂದ ಹೊರಗಡೆ ತೆಗೆದಾಗ ಇಲ್ಲಿ ಅಷ್ಟೊಂದು ಪ್ರೆಷರ್ ಅನ್ನೋದು ಇರೋದಿಲ್ಲ ಇದರಿಂದ ಈ ಮೀನಿನ ದೇಹ ತುಂಬಾ ಲೂಸಾಗಿ ಬದಲಾಗುತ್ತೆ ಇದರಿಂದಾನೆ ಈ ಮೀನಿಗೆ “ಬ್ಲಾಬ್ ಫಿಶ್” ಎನ್ನುವ ಹೆಸರನ್ನ ಇಟ್ಟಿದ್ದಾರೆ, ಇದರ ಮುಖ್ಯವಾದ ಆಹಾರ ಬಂದು ಕ್ರಿಲ್ ಶ್ರಿಂಪ್ ಹಾಗೂ ಇನ್ನಿತರೆ ಸಮುದ್ರದ ಚಿಕ್ಕಪುಟ್ಟ ಜೀವಿಗಳನ್ನ ಇದು ಬೇಟೆಯಾಡಿ ತಿನ್ನುತ್ತೆ.

“ನಂಬರ್ 4: ಫಸಾ” ಈ ವಿಚಿತ್ರವಾದ ಜೀವಿಗಳು ನೋಡೋದಕ್ಕೆ ಬೆಕ್ಕು ಮತ್ತು ನಾಯಿಯ ತರ ಕಾಣುತ್ತೆ ಆದರೆ ಅವುಗಳಿಗೂ ಇದಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಇದೊಂದು ವಿಶೇಷವಾದ ಜೀವಿಯಾಗಿದೆ, ಈ ವಿಚಿತ್ರವಾದ ಜೀವಿಗಳು ಹೆಚ್ಚಾಗಿ ಮಡಗಾಸ್ಕರ್ ದ್ವೀಪದಲ್ಲಿ ಕಂಡುಬರುತ್ತವೆ, ಇದು ಒಂದು ಮಾಂಸಹಾರಿ ಜೀವಿ, ಇದರ ಮುಖ್ಯವಾದ ಆಹಾರ ಬಂದು ಚಿಕ್ಕಪುಟ್ಟ ಮ್ಯಾಮಲ್ಸ್ ಪಕ್ಷಿಗಳು ಮತ್ತು ಕಾಡು ಹಂದಿಯ ಮರಿಗಳು ಇದು ಹೆಚ್ಚಾಗಿ ರಾತ್ರಿಯ ಸಮಯದಲ್ಲಿ ಮಾತ್ರವೇ ಬೇಟೆಯಾಡುತ್ತೆ ಈ ಜೀವಿ ಒಬ್ಬಂಟಿಯಾಗಿ ಜೀವಿಸೋಕೆ ತುಂಬಾನೇ ಇಷ್ಟಪಡುತ್ತೆ, ಈ ಜೀವಿಯಲ್ಲಿರುವ ಬಲವಾದ ಹಲ್ಲುಗಳು ಮತ್ತು ವೇಗವಾಗಿ ಓಡಬಲ್ಲ ಶಕ್ತಿಯಿಂದ ತುಂಬಾನೇ
ಸುಲಭವಾಗಿ ಇದು ಬೇಟೆಯಾಡಬಲ್ಲದು, ಆದರೆ ಪ್ರಸ್ತುತ ಈ ಜೀವಿಗಳು ಹಳುವಿನಂಚಿಗೆ ತಲುಪಿವೆ ಇದರಿಂದ ಈ ಜೀವಿಗಳನ್ನ ಸಂರಕ್ಷಣೆ ಮಾಡುವುದು ತುಂಬಾನೇ ಮುಖ್ಯ ಇವು ಹುಳುವಿನ ತಲುಪುವುದಕ್ಕೆ ಕಾರಣ ಮನುಷ್ಯ ವೇಗವಾಗಿ ಪ್ರಕೃತಿಯನ್ನ ನಾಶ ಮಾಡುತ್ತಿರೋದು ಇದರಿಂದ ಕೇವಲ ಹೊಸ ಜೀವಿ ಅಷ್ಟೇ ನಾಶವಾಗುತ್ತಿಲ್ಲ ಆಲ್ರೆಡಿ ಹಲವಾರು ಜೀವಿಗಳು ಅಳಿದು ಹೋಗಿವೆ.

“ನಂಬರ್ 3 “ಡಂಬೋ ಆಕ್ಟೋಪಸ್ “ಆಳವಾದ ಸಮುದ್ರದಲ್ಲಿ ಕಂಡುಬರುವ ಮತ್ತೊಂದು ವಿಚಿತ್ರವಾದ ಚಿಕ್ಕ ಜೀವಿ ಇದು ಇದರ ಈ ಮುದ್ದಾದ ರೂಪದಿಂದನೇ ಇದಕ್ಕೆ ಡಂಬೋ ಅನ್ನುವ ಹೆಸರು ಇಟ್ಟಿದ್ದಾರೆ, ನೀವು ಸರಿಯಾಗಿ ನೋಡಿದ್ರೆ ಇದು ಆನೆಗಳ ಕಿವಿಯ ತರ ಕಾಣುತ್ತೆ, ಈ ಡಂಬೋ ಆಕ್ಟೋಪಸ್ ನ ಮುಖ್ಯ ಆಹಾರ ಬಂದು ಜೆಲ್ಲಿ ಫಿಶ್ ಬ್ರಿಸ್ಟಲ್
ವಾರ್ಮ್ ಆಂಪಿಬಾಟ್ಸ್ ಹಾಗೂ ಇನ್ನಿತರೆ ಸಮುದ್ರದ ಚಿಕ್ಕಪುಟ್ಟ ಜೀವಿಗಳನ್ನ ಇದು ಬೇಟೆಯಾಡಿ ತಿನ್ನುತ್ತೆ, ಈ ಡಂಬೋ ಆಕ್ಟೋಪಸ್ ಹೆಚ್ಚಾಗಿ ಸಮುದ್ರದ 4000 ಮೀಟರ್ ಆಳದಲ್ಲಿ ಕಂಡುಬರುತ್ತೆ, ಇಲ್ಲಿ ಆಶ್ಚರ್ಯಕರ ಸಂಗತಿ ಏನಂದ್ರೆ ಈ ಡಂಬೋ ಆಕ್ಟೋಪಸ್ ಗಳು ಕೇವಲ ಮೂರರಿಂದ ಐದು ವರ್ಷಗಳು ಮಾತ್ರ ಜೀವಿಸುತ್ತವೆ ಇದರಿಂದ ಜಗತ್ತಿನಲ್ಲಿ ಕಂಡುಬರುವ ಅತ್ಯಂತ ಅಪರೂಪದ ಆಕ್ಟೋಪಸ್ ಅಂತ ಇದನ್ನ ಕರೆಯಲಾಗುತ್ತೆ, ಜೊತೆಗೆ ರೆಡ್ ವೈಟ್ ಬ್ರೌನ್ ಮತ್ತು ಪಿಂಕ್ ಕಲರ್ ನಲ್ಲಿ ಕೂಡ ಈ ಡಂಬೋ ಆಕ್ಟೋಪಸ್ ಗಳು ಕಂಡುಬರುತ್ತವೆ,

“ನಂಬರ್ 2 “ಸನ್ ಬೇರ್” ಇದನ್ನ ಮಲಾಯನ್ ಬೇರ್ ಅಂತ ಕೂಡ ಕರೀತಾರೆ ಹೆಚ್ಚಾಗಿ ಸೌತ್ ಈಸ್ಟ್ ಏಷ್ಯಾದ ಕಾಡುಗಳಲ್ಲಿ ಈ ಕರಡಿಗಳು ಕಂಡುಬರುತ್ತವೆ ಈ ಕರಡಿಗಳು ಹೆಚ್ಚು ಕಡಿಮೆ 27 ರಿಂದ 68 kg ತೂಕವನ್ನು ಹೊಂದಿರುತ್ತೆ ಇದರ ಚೆಸ್ಟ್ ಮೇಲಿರುವ ಗೋಲ್ಡನ್ ಕ್ರೀಮ್ ಆರ್ ವೈಟ್ ಕಲರ್ ಅನ್ನೋದು ಸೂರ್ಯ ಉದಯಿಸುವುದನ್ನ ಇದು ಸೂಚಿಸುತ್ತೆ ಅಂತ ಅಲ್ಲಿನ ಸ್ಥಳೀಯ ಜನರ ನಂಬಿಕೆ ಇದರಿಂದಾನೆ ಈ ಕರಡಿಗೆ ಸನ್ಬೇರ್ ಅನ್ನುವ ಹೆಸರು ಬಂದಿದೆ

“ನಂಬರ್ 1 “ಸೈಗಾ” ಅಂಟೆಲೋಪ್ ಮಂಗೋಲಿಯಾ ಮತ್ತು ಕಜಿಕಿಸ್ತಾನಲ್ಲಿ ಈ ಜೀವಿಗಳು ಹೆಚ್ಚಾಗಿ ಕಂಡುಬರುತ್ತವೆ ಈ ಜೀವಿಯ ವಿಚಿತ್ರವಾದ ಮೂಗಿನಿಂದ ಇದು ಪ್ರಪಂಚದಾದ್ಯಂತ ಫೇಮಸ್ ಆಗಿದೆ ಜಿಂಕೆಗಳ ಒಂದು ಪುರಾತನವಾದ ಜೀವಿ ಇದು ಇದು ನೋಡೋದಕ್ಕೆ ಎಲ್ಲಾ ಜಿಂಕೆಗಳ ತರಾನೇ ಕಾಣುತ್ತೆ ಆದರೆ ಇದರ ಮೂಗು ಮಾತ್ರ ಮುಂದಕ್ಕೆ ಜೋತು ಇದ್ದಿರುತ್ತೆ ಇದರಿಂದಾನೆ ಬೇರೆ ಜಿಂಕೆಗಳಿಗಿಂತ ಇದು ತುಂಬಾನೇ
ವಿಭಿನ್ನವಾದ ಜಾತಿಯಾಗಿದೆ ಇವು ಯಾವಾಗಲೂ ಒಂದು ಗುಂಪಿನಲ್ಲಿ ಜೀವಿಸಲು ಇಷ್ಟಪಡುತ್ತವೆ ಆದರೆ ದುಃಖದ ಸಂಗತಿ ಏನಂದ್ರೆ ಈ ಜಿಂಕೆಗಳ ಜಾತಿ ಹಳುವಿನಂಚಿಗೆ ತಲುಪಿವೆ ಇದಕ್ಕೆ ಮುಖ್ಯ ಕಾರಣ ಅಲ್ಲಿನ ಸ್ಥಳೀಯ ಜನರು ಈ ಜಿಂಕೆಗಳನ್ನು ಹೆಚ್ಚಾಗಿ ಬೇಟೆಯಾಡುತ್ತಿದ್ದಾರೆ, ಅವರು ಬೇಟೆಯಾಡುವುದನ್ನ ನಿಲ್ಲಿಸಲಿಲ್ಲ ಅಂದ್ರೆ ಇನ್ನು ಕೆಲವೇ ವರ್ಷಗಳಲ್ಲಿ ಇವು ಸಂಪೂರ್ಣವಾಗಿ ನಾಶವಾಗುತ್ತವೆ.
ಗೆಳೆಯರೇ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಮಾಡಿ..!