ಗಣಪತಿ ಪೂಜೆ ಮಾಡಿ ಹೋದಳು ಬದುಕಿ ಬಂದಳು.! ಪೂರ್ತಿ ವಿಮಾನ ಸುಟ್ಟರು ಪವಾಡದಂತೆ ಬದುಕಿದ್ದು ಹೇಗೆ? | Air India Plane updates
Air India Plane updates ನಿಜಕ್ಕೂ ಇಡೀ ದೇಶದಲ್ಲಿ ಶೋ’ಕ ಆವರಿಸಿದೆ, ಅಹಮದಾಬಾದ್ ವಿಮಾನ ದು’ರಂತ ನಡೆದು 24 ಗಂಟೆಗಳಾದರೂ ದೇಶದಾದ್ಯಂತ ಸೂ’ತಕದ ವಾತಾವರಣ ಇದೆ ವಿಮಾನದಲ್ಲಿದ್ದ ಒಬ್ಬ ವ್ಯಕ್ತಿಯನ್ನ ಬಿಟ್ಟು ಉಳಿದೆಲ್ಲ ಪ್ರಯಾಣಿಕರು ಸುಟ್ಟು ಭ’ಸ್ಮವಾಗಿದ್ದಾರೆ’ ವಿಮಾನ ಪತನವಾಗುವ ದೃಶ್ಯಗಳನ್ನ ನೋಡಿದರೆ ವಿಮಾನದಲ್ಲಿದ್ದ ಯಾವುದೇ ಒಬ್ಬ ವ್ಯಕ್ತಿ ಬದುಕಿ ಬರೋದಕ್ಕೆ ಸಾಧ್ಯವೇ ಇಲ್ಲ ಅಂತ ಎಲ್ಲರಿಗೂ ಅನಿಸಿತ್ತು’ ಆದರೆ 40 ವರ್ಷದ ವಿಶ್ವಾಸ್ ಕುಮಾರ್ ಅನ್ನುವ ವ್ಯಕ್ತಿ ಮೃ’ತ್ಯುಂಜಯನ ರೀತಿಯಲ್ಲಿ ಬದುಕಿ ಬಂದಿದ್ದಾರೆ, ವಿಮಾನದ ಎಮರ್ಜೆನ್ಸಿ ಎಕ್ಸಿಟ್ನ ಗೇಟ್ ಮೂಲಕ ಹೊರಗೆ ಹಾರಿದ ವಿಶ್ವಾಸ್ ಕುಮಾರ್ ಸಣ್ಣ ಪುಟ್ಟ ಗಾಯಿಗಳೊಂದಿಗೆ ಜೀವ ಉಳಿಸಿಕೊಂಡಿದ್ದಾರೆ, ಹೀಗೆ
ವಿಶ್ವಾಸ್ ಕುಮಾರ್ ವಿಮಾನದಿಂದ ಹಾರಿ ಜೀವ ಉಳಿಸಿಕೊಂಡಿದ್ದರೆ, ಭೂಮಿ ಚೌಹಾಣ್ ಅನ್ನುವ ಯುವತಿ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡು ವಿಮಾನ ನಿಲ್ದಾಣಕ್ಕೆ ಬರುವಾಗ 10 ನಿಮಿಷ ಲೇಟಾಗಿ ಜೀವ ಉಳಿಸಿಕೊಂಡಿದ್ದಾರೆ, ಒಮ್ಮೊಮ್ಮೆ ಆಗೋದೆಲ್ಲ ಒಳ್ಳೆದಕ್ಕೆ ಅನ್ನೋದು ಇದಕ್ಕೆ ಅಲ್ವಾ, ಒಂದು ವೇಳೆ ಟ್ರಾಫಿಕ್ ಇಲ್ಲದೆ ಇದ್ರೆ ಭೂಮಿ ಕೂಡ ವಿಮಾನದಲ್ಲಿ ಬರುತ್ತಿದ್ದರು, ಸಾವು ಯಾವ ರೂಪದಲ್ಲಿ ಬರುತ್ತೆ ಅನ್ನೋದನ್ನ ಹೇಳೋದಕ್ಕೆ ಸಾಧ್ಯವಿಲ್ಲ, ಅದೇ ರೀತಿ ಟೈಮ್ ಬಾರದೆ ಇದ್ದರೆ ಯಾವ ರೀತಿ ಕೂಡ ಸಾವಿನಿಂದ ಬಚಾವು ಆಗಬಹುದು ಅನ್ನೋದಕ್ಕೆ ಈ ಇಬ್ಬರು ಸಾಕ್ಷಿಯಾಗಿದ್ದಾರೆ, ಅಷ್ಟಕ್ಕೂ ಮೃ’ತ್ಯುಂಜಯ ವಿಶ್ವಾಸ್ ಕುಮಾರ್ ಬದುಕಿ ಬಂದಿದ್ದು
ಹೇಗೆ 242 ಮಂದಿ ಪ್ರಯಾಣಿಕರಲ್ಲಿ ಒಬ್ಬನೇ ಒಬ್ಬ ಒಬ್ಬ ವ್ಯಕ್ತಿ ಬದುಕಿ ಬರುದಕ್ಕೆ ಸಾಧ್ಯವಾಗಿದ್ದು ಹೇಗೆ ಭೂಮಿ 10 ನಿಮಿಷ ಲೇಟ್ಆಗಿ ಬರೋದಕ್ಕೆ ಕಾರಣವೇನು ತೋರಿಸ್ತೀವಿ ನೋಡಿ, ಜೀವನ ಅನ್ನೋದು ಯಾವತ್ತೂ ಶಾಶ್ವತ ಅಲ್ಲ ಯಾವಾಗ ಏನು ಬೇಕಾದರೂ ಆಗಬಹುದು, ಇವತ್ತು ಇದ್ದವರು ನಾಳೆ ಇರ್ತಾರೆ ಅನ್ನೋದಕ್ಕೆ ಗ್ಯಾರೆಂಟಿ ಇಲ್ಲ, ಇದೇ ರೀತಿ ಖುಷಿ ಖುಷಿಯಿಂದ ಲಂಡನ್ಗೆ ಹೊರಟವರು ವಿಮಾನ ಟೇಕ್ ಆಫ್ ಆದ ಕೆಲವೇ ಕೆಲವು ಸೆಕೆಂಡ್ನಲ್ಲಿ ಸುಟ್ಟು ಬೂದಿಯಾಗಿದ್ದಾರೆ, ಏನಾಗ್ತಿದೆ ಅನ್ನುವಷ್ಟರಲ್ಲಿ ವಿಮಾನ ಬಾಂಬ್ ಸ್ಪೋಟಿಸಿದಂತೆ ಸ್ಪೋಟಗೊಂಡಿತ್ತು, ಲಂಡನ್ಗೆ ಹೋಗ್ತಾ ಇದ್ದ ವಿಮಾನವಾಗಿದ್ದರಿಂದ ಇಂಧನವನ್ನ ಫುಲ್ ಮಾಡಲಾಗಿತ್ತು ಒಂದು ಲಕ್ಷ ಲೀಟರ್ ಇಂಧನ
ಹೊತ್ತಕೊಂಡು ವಿಮಾನ ಆಕಾಶಕ್ಕೆ ನೆಗೆದಿತ್ತು, ಈಗ ಇದೇ ಇಂಧನದಿಂದಾಗಿ ವಿಮಾನ ಪತನವಾಗಿ ಬೆಂಕಿ ಹೊತ್ಕೊಂಡಿದೆ, ಇಷ್ಟು ಪ್ರಮಾಣ ಇಂಧನ ಇದ್ದಿದ್ದರಿಂದಲೇ ಅಷ್ಟು ದೊಡ್ಡ ಪ್ರಮಾಣದ ಬೆಂಕಿ ಕಾಣಿಸಿಕೊಂಡಿತ್ತು, ಹೀಗಾಗಿ ವಿಮಾನದಲ್ಲಿ ಒಬ್ಬ ವ್ಯಕ್ತಿ ಯನ್ನ ಬಿಟ್ಟು ಉಳಿದೆಲ್ಲ ಪ್ರಯಾಣಿಕರು ಗುರುತೆ ಸಿಗದ ರೀತಿಯಲ್ಲಿ ಸುಟ್ಟು ಕರಕಲಾಗಿದ್ದಾರೆ, ಆದರೆ ಬದುಕಿ ಬಂದ ವಿಶ್ವಾಸ್ ಕುಮಾರ್ಗೆ ಸಣ್ಣ ಪುಟ್ಟ ಗಾ’ಯಗಳಾಗಿದ್ದು ಬಿಟ್ಟರೆ ಬೇರೆನು ಆಗಿಲ್ಲ, ಈ ವ್ಯಕ್ತಿ ಬದುಕಿ ಬಂದಿದ್ದೆ ಪವಾಡ ಅಂದಹಾಗೆ ಮರುಜನ್ಮ ಪಡೆದ ಈ ವಿಶ್ವಾಸ್ ಕುಮಾರ್ ಭಾರತ ಮೂಲದ ಬ್ರಿಟನ್ ಪ್ರಜೆ, ಕಳೆದ 20 ವರ್ಷದಿಂದಲೂ ಅವರು ಬ್ರಿಟನ್ ನಲ್ಲೇ ವಾಸವಿದ್ದರು ತಮ್ಮ ಕುಟುಂಬವನ್ನ ಭೇಟಿಯಾಗುವುದಕ್ಕೆ ಭಾರತಕ್ಕೆ
ಬಂದಿದ್ರು ಹೀಗೆ ಭಾರತಕ್ಕೆ ಬಂದಿದ್ದ ವಿಶ್ವಾಸ್ ಕುಮಾರ್ ಅವರ ಸಹೋದರನ ಜೊತೆ ಲಂಡನ್ ವಿಮಾನ ಹತ್ತಿದ್ರು ಆದರೆ ವಿಮಾನ ಟೇಕ್ ಆಫ್ ಆದ ಕೆಲವೇ ಕೆಲವು ಸೆಕೆಂಡ್ನಲ್ಲಿ ಬಿಜೆ ಮೆಡಿಕಲ್ ಕಾಲೇಜ್ನ ಹಾಸ್ಟೆಲ್ಗೆ ಹೋಗಿ ಅಪ್ಪಳಿಸಿದೆ ಹೀಗೆ ಇನ್ನೇನು ಪತನವಾಗುತ್ತೆ ಅನ್ನೋದು ಗೊತ್ತಾಗುತ್ತಿದ್ದಂತೆ ಸೀಟ್ ನಂಬರ್ 11A ನಲ್ಲಿ ಕುಳಿತಿದ್ದ ವಿಶ್ವಾಸ್ ಕುಮಾರ್ ಎಮರ್ಜೆನ್ಸಿ ಕಿಟಕಿಯನ್ನ ಒಡೆದು ಹೊರಗೆ ಹಾರಿದ್ದಾರೆ ಪ್ರತಿ ವಿಮಾನದಲ್ಲೂ ಕೂಡ ಎಮರ್ಜೆನ್ಸಿ ಎಕ್ಸಿಟ್ ಇರುತ್ತೆ ಇದರ ಬಗ್ಗೆ ಆರಂಭದಲ್ಲೇ ಗಗನ ಸಖಿಯರು ವಿವರಣೆ ಕೊಟ್ಟಿರುತ್ತಾರೆ, ತುರ್ತು ಸಂದರ್ಭದಲ್ಲಿ ಯಾವ ರೀತಿ ಈ ಬಾಗಿಲುಗಳನ್ನ ತೆಗೆಯಬೇಕು ಅನ್ನುವ ಬಗ್ಗೆ ವಿಮಾನ ಟೇಕ್ ಆಫ್ ಆಗುವ ಮುನ್ನವೇ ವಿವರಣೆ
ಕೊಡಲಾಗುತ್ತೆ, ಈ ಬಾಗಿಲುಗಳ ಮೇಲೆ ಕೂಡ ಅದನ್ನ ಓಪನ್ ಮಾಡುವ ವಿಧಾನವನ್ನ ಬರೆದಿರುತ್ತಾರೆ, ಅಲ್ಲಿರುವ ನಿಯಮಗಳನ್ನ ಪಾಲಿಸಿದ್ರೆ ಕೇವಲಹತ್ತೇ 10 ಸೆಕೆಂಡ್ನಲ್ಲಿ ಎಮರ್ಜೆನ್ಸಿ ಎಕ್ಸಿಟ್ನ ಬಾಗಿಲು ಓಪನ್ ಮಾಡಬಹುದು ವಿಶ್ವಾಸ್ ಕುಮಾರ್ ಕೂಡ ಇದೇ ರೀತಿ ಮಾಡಿದ್ದು ಎಮರ್ಜೆನ್ಸಿ ಎಕ್ಸಿಟ್ನ ಬಾಗಿಲು ತೆರೆದ ವಿಶ್ವಾಸ್ ಹಿಂದೆ ಮುಂದೆ ನೋಡದೆ ಅಲ್ಲಿಂದ ಕೆಳಗೆಹಾರಿದ್ದಾರೆ, ಅಷ್ಟೇ ಎದ್ದು ನೋಡಿದಾಗ ಅವರ ಸುತ್ತಮುತ್ತ ಬರಿ ಶವಗಳ ರಾಶಿಯೇ ಇತ್ತಂತೆ ವಿಮಾನದ ಅವಶೇಷಗಳು ಸುತ್ತಲು ಇತ್ತಂತೆ ಇದನ್ನೆಲ್ಲ ನೋಡಿದ ವಿಶ್ವಾಸ್ ಅಲ್ಲಿಂದ ಓಡೋದಕ್ಕೆ ಶುರು ಮಾಡಿದ್ದಾರೆ ಆಗ ಸ್ಥಳಿಯರು ಸಹಾಯಕ್ಕೆ ಬಂದಿದ್ದಾರೆ, ನಂತರ ಆಂಬುಲೆನ್ಸ್ ನಲ್ಲಿ ಕೂರಿಸಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ,
ಇದು ವಿಶ್ವಾಸ್ ಕುಮಾರ್ ಅವರ ಕಥೆಯಾದರೆ ಭೂಮಿ ಚೌಹಾಣ್ ಮಹಿಳೆಯದ್ದು ಇನ್ನೊಂದು ಕಥೆ ಇದೆ, ನಾವು ಎಲ್ಲಾದರೂ ಹೋಗಬೇಕಾದರೆ ಟ್ರಾಫಿಕ್ನಲ್ಲಿ ಸಿಲುಕಿಕೊಂಡರೆ ಎಷ್ಟೊಂದು ಶಾಪ ಹಾಕ್ತೀವಿ, ಇವತ್ತೇ ಹೀಗ ಆಗಬೇಕಿತ್ತಾ ಹಾಗೆ, ಹೀಗೆ ಅಂತ ಶಾಪ ಹಾಕ್ತಾ ಇರ್ತೀವಿ ಲಂಡನ್ ಗೆ ಹೋಗಬೇಕಿದ್ದ ಭೂಮಿ ಕೂಡ ಟ್ರಾಫಿಕ್ನಲ್ಲಿ ಸಿಕ್ಕಿ ಹಾಕಿಕೊಂಡಿದ್ದ, ಈ ಟ್ರಾಫಿಕ್ ಜಾಮ್ ನಿಂದಾಗಿ ಭೂಮಿ ವಿಮಾನ ನಿಲ್ದಾಣಕ್ಕೆ ಬರುವುದಕ್ಕೆ 10 ನಿಮಿಷ ಲೇಟ್ ಆಗುತ್ತೆ, ಅಷ್ಟರಲ್ಲೇ ಏರ್ ಇಂಡಿಯಾ ವಿಮಾನ ಭೂಮಿಯನ್ನ ಬಿಟ್ಟು ಆಕಾಶಕ್ಕೆ ಹಾರಿತ್ತು, ಆ ಸಂದರ್ಭದಲ್ಲಿ ಭೂಮಿ ಮನಸ್ಸಿನಲ್ಲೇ ಏನೆಲ್ಲ ಯೋಚನೆ ಮಾಡಿರಬಹುದು ಅಯ್ಯೋ ಒಂದು 10 ನಿಮಿಷ ಬೇಗ ಬಂದಿದ್ದರೆ ವಿಮಾನ ಮಿಸ್ ಆಗ್ತಾ ಇರಲಿಲ್ಲ,
ಈ ಟ್ರಾಫಿಕ್ ಜಾಮ್ ಇರಲಿಲ್ಲ ಅಂದಿದ್ರೆ ನಾನು ಕೂಡ ವಿಮಾನದಲ್ಲಿ ಹೋಗ್ತಾ ಇದ್ದೆ ಅನ್ನುವ ಯೋಚನೆಗಳು ಭೂಮಿಗೆ ಬಂದಿರಬಹುದು, ಹೀಗೆ ಯೋಚನೆ ಮಾಡ್ತಾ ಇದ್ದಾಗಲೇ ವಿಮಾನ ಪ’ತನವಾದ ಸುದ್ದಿ ಬರುತ್ತೆ, ಇದನ್ನ ಕೇಳಿದಂತಹ ಭೂಮಿಗೆ ಕೈ ಕಾಲುಗಳೇ ನಡುಗುವುದಕ್ಕೆ ಶುರುವಾಗಿತ್ತಂತೆ, ದೇವರು ಈ ರೂಪದಲ್ಲಿ ಕೂಡ ಬಂದು ಕಾಪಾಡುತಾನಾ ಅಂತ ಅನಿಸೋದಕ್ಕೆ ಶುರುವಾಗಿತ್ತಂತೆ, ನನ್ನ ಗಣಪನೆ ನನ್ನ ಜೀವ ಉಳಿಸಿದ್ದು ಅಂತ ಭೂಮಿ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ, ಹೀಗೆ ಇಬ್ಬರು ಪವಾಡದ ರೂಪದಲ್ಲಿ ಪಾರಾದರೆ ಅತ್ತ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಜೀವ ಕಳೆದುಕೊಂಡಿದ್ದಾರೆ ತಮ್ಮ ಹಾಸ್ಟೆಲ್ ನ ಮೇಲೆ ವಿಮಾನ ಬಂದು ಬೀಳುತ್ತೆ ಅಂತ ಯಾರಾದರೂ ಊಹೆ ಮಾಡೋದಕ್ಕೆ ಸಾಧ್ಯನ ಹೇಳಿ,?
ಅದು ಕೂಡ ಮಧ್ಯಾಹ್ನದ ಸಮಯವಾಗಿದ್ದರಿಂದ ಮೆಸ್ನಲ್ಲಿ ವಿದ್ಯಾರ್ಥಿಗಳು ಊಟ ಮಾಡ್ತಾ ಇದ್ರು, ಇದೇ ಸಂದರ್ಭದಲ್ಲಿ ವಿಮಾನ ಕಟ್ಟಡದ ಮೇಲೆ ಅಪ್ಪಳಿಸಿದೆ, ಒಂದು ಮಾಹಿತಿ ಪ್ರಕಾರ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಾ’ವನ್ನಪ್ಪಿರುವ ಸಾಧ್ಯತೆ ಇದೆ ಈ ಬಗ್ಗೆ ಯಾವುದೇ ಮಾಧ್ಯಮಗಳಲ್ಲ ಆಗಲಿ ಸುದ್ದಿ ಪ್ರಸಾರವಾಗ್ತಾ ಇಲ್ಲ ಇನ್ನು ಘ’ಟನಾ ಸ್ಥಳಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿ ಗಾ’ಯಾಳುಗಳ ಜೊತೆ ಮಾತನಾಡಿದ್ದಾರೆ, ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ ಇದೆಲ್ಲದರ ನಡುವೆ ವಿಮಾನ ಪತನಕ್ಕೆ ಕಾರಣವೇನು ಅನ್ನುವ ಬಗ್ಗೆ ಕೂಡ ಚರ್ಚೆಗಳು ನಡೆಯುವುದಕ್ಕೆ ಶುರುವಾಗಿದೆ, ಸ್ನೇಹಿತರೆ ವಿಮಾನ ನಿಲ್ದಾಣದಲ್ಲಿ ಲೊಕೇಶನ್ ಇದೆಯಲ್ಲ ಅದು ತುಂಬಾನೇ ಇಂಪಾರ್ಟೆಂಟ್ ಆಗುತ್ತದೆ,
ವಿಮಾನ ನಿಲ್ದಾಣಗಳು ಯಾವತ್ತೂ ಸಿಟಿಯಿಂದ ದೂರದಲ್ಲಿ ಇರಬೇಕು ವಿಮಾನ ನಿಲ್ದಾಣದ ಸುತ್ತಮುತ್ತ ಯಾವುದೇ ಕಟ್ಟಡಗಳು ಇರಬಾರದು ಆದರೆ ಅಹಮದಾಬಾದ್ನ ವಿಮಾನ ನಿಲ್ದಾಣ ಈ ಎಲ್ಲಾ ನಿಯಮಕ್ಕೆ ತದ್ವಿರುದ್ಧವಾಗಿದೆ, ವಿಮಾನ ನಿಲ್ದಾಣದ ಅಣತಿ ದೂರದಲ್ಲೇ ರೆಸಿಡೆನ್ಸಿಯಲ್ ಏರಿಯಾ ಇದೆ, ಇಲ್ಲೇ ಬಿಜೆ ಮೆಡಿಕಲ್ ಕಾಲೇಜ್ ಇರೋದು, ಎಲ್ಲದಕ್ಕಿಂತ ಹೆಚ್ಚಾಗಿ ವಿಮಾನ ನಿಲ್ದಾಣದ ಪಕ್ಕದಲ್ಲೇ ಸ್ಲ’ಮ್ ಇದೆ, ಸ್ಲ’ಮ್ ಇದೆ ಅಂದ್ರೆ ಅಲ್ಲಿ ಕೊಳಚೆ ನೀರು ಸಾಮಾನ್ಯವಾಗಿ ಇದ್ದೆ ಇರುತ್ತೆ, ಯಾಕೆ ಇಲ್ಲಿ ಸ್ಲ’ಮ್ ಅನ್ನ ಉಲ್ಲೇಖ ಮಾಡ್ತಾರೆ ಅಂತ ಕೇಳಿದ್ರೆ, ಅದಕ್ಕೂ ಕೂಡ ಕಾರಣ ಇದೆ ಕೊಳಚೆ ನೀರು ಇದ್ದರೆ ಅಲ್ಲಿ ಹಕ್ಕಿಗಳ ಸಂಖ್ಯೆ ಹೆಚ್ಚಾಗಿ ಇರುತ್ತೆ ಇದೆ ಹಕ್ಕಿಗಳು ವಿಮಾನಕ್ಕೆ ಯಮನ
ರೂಪದಲ್ಲಿ ಬಂದುಬಿಡುತ್ತಾವೆ, ಅಷ್ಟು ದೊಡ್ಡ ವಿಮಾನ ಪ’ತನವಾಗುವುದಕ್ಕೆ ಒಂದು ಕೂಡ ಕಾರಣವಾಗಬಹುದು ಒಂದುವೇಳೆ ವಿಮಾನದ ಇಂಜಿನ್ಗೆ ಬಂದು ಬಡೆದರೆ ಇಂಜಿನ್ ಫೇಲ್ ಆಗುವ ಸಾಧ್ಯತೆ ಇರುತ್ತೆ ಇಂಜಿನ್ ಫೇಲ್ ಆದರೆ ವಿಮಾನಕ್ಕೆ ಕಂಟ್ರೋಲ್ ಸಿಗೋದಿಲ್ಲ, ಆದರೆ ಇಲ್ಲಿ ಗಮನಿಸಬೇಕಾದ ಸಂಗತಿ ಅಂದರೆ ವಿಮಾನಕ್ಕೆ ಎರಡು ಇಂಜಿನ್ ಇರುತ್ತೆ ಏಕಕಾಲದಲ್ಲಿ ಎರಡು ಇಂಜಿನ್ಗಳು ಕೂಡ ಅಷ್ಟು ಸುಲಭದಲ್ಲಿ ಕೈ ಕೊಡೋದಿಲ್ಲ ಅಹಮದಾಬಾದ್ನಲ್ಲಿ ದು’ರಂತಕ್ಕೆ ಡಿಕ್ಕಿ ಕೂಡ ಕಾರಣವಾಗಿರಬಹುದು ಅಂತ ತಜ್ಞರು ಹೇಳ್ತಾ ಇದ್ದಾರೆ, ಇನ್ನು ಲ್ಯಾಂಡಿಂಗ್ ಗೇರ್ ಕೈ ಕೊಟ್ಟಿರಬಹುದು, ಅನ್ನುವ ಅನುಮಾನ ಕೂಡ ಮೂಡಿದೆ ಟೇಕ್ ಆಫ್ ಆದ ನಂತರ ಈ ಲ್ಯಾಂಡಿಂಗ್ ಗೇರ್ ಒಳಗೆ
ಹೋಗ್ತಾವೆ ಆದರೆ ಏರ್ ಇಂಡಿಯಾ ವಿಮಾನದ ಲ್ಯಾಂಡಿಂಗ್ ಗೇರ್ ಹೊರಗೆ ಇತ್ತಂತೆ ಹೀಗೆ ಲ್ಯಾಂಡಿಂಗ್ ಗೇರ್ ಹೊರಗೆ ಇದ್ದಿದ್ದರಿಂದ ಎರಡನೇ ಇಂಜಿನ್ ಮೇಲೆ ಅದು ಪರಿಣಾಮ ಬೀರಿರುವ ಸಾಧ್ಯತೆ ಇದೆ ಅನ್ನುವ ಮಾಹಿತಿ ಕೂಡ ಇದೆ ಇನ್ನು ಪೈಲಟ್ಗೆ ಸಾಕಷ್ಟು ಅನುಭವವಿದ್ದರು ಏನೋ ಸಣ್ಣ ತಪ್ಪು ಮಾಡಿದ್ರೂ ಕೂಡ ವಿಮಾನ ಪತನಕ್ಕೆ ಕಾರಣವಾಗಿರಬಹುದು, ತಪ್ಪಾದ ವಿಧಾನದಲ್ಲಿ ಟೇಕ್ ಆಫ್ ಮಾಡುವ ಪ್ರಯತ್ನ ಮಾಡಿದ್ರೆ ವಿಮಾನ ಪತನವಾಗುವ ಸಾಧ್ಯತೆ ಹೆಚ್ಚಾಗಿರುತ್ತೆ ಇನ್ನು ಗಾಳಿಯ ಒತ್ತಡ ಕೂಡ ವಿಮಾನವನ್ನ ಕಂಟ್ರೋಲ್ ತಪ್ಪುವಂತೆ ಮಾಡುವ ಸಾಧ್ಯತೆ ಇರುತ್ತಂತೆ, ಮತ್ತೊಂದು ಕಾರಣದ ಬಗ್ಗೆ ನಾವು ಆರಂಭದಲ್ಲೇ ಹೇಳಿದ್ವಿ ಲಂಡನ್ಗೆ ಹೋಗ್ತಾ ಇದ್ದ ವಿಮಾನವಾಗಿದ್ದರಿಂದ ಇಂಧನ ಟ್ಯಾಂಕ್ ಅನ್ನ ಭರ್ತಿ
ಮಾಡಲಾಗಿತ್ತು, ಈ ಇಂಧನ ಟ್ಯಾಂಕ್ ಕೂಡ ಸ್ಪೋಟಗೊಳ್ಳುವ ಸಾಧ್ಯತೆ ಇರು ಇರುತ್ತೆ ಹೀಗೆ ಹಲವು ಸಾಧ್ಯತೆಗಳ ಬಗ್ಗೆ ಚರ್ಚೆ ಆಗ್ತಾ ಇದೆ ನಿಜವಾದ ಕಾರಣ ಏನು ಅನ್ನೋದು ತನಿಕೆಯಾದ ನಂತರವೇ ಗೊತ್ತಾಗೋದು ವಿಮಾನದಲ್ಲಿ ಬ್ಲಾಕ್ ಬಾಕ್ಸ್ ಇರುತ್ತೆ ಅದರಲ್ಲಿ ಎಲ್ಲವೂ ರೆಕಾರ್ಡ್ ಆಗಿರುತ್ತೆ, ಕೊನೆ ಕ್ಷಣದಲ್ಲಿ ಏನಾಗಿತ್ತು, ಪೈಲೆಟ್ ಗಳ ನಡುವೆ ಯಾವ ರೀತಿ ಸಂಭಾಷಣೆ ಆಗಿತ್ತು ಅನ್ನೋದು ಈ ಬ್ಲಾಕ್ ಬಾಕ್ಸ್ ನಲ್ಲಿ ರೆಕಾರ್ಡ್ ಆಗಿರುತ್ತೆ, ಇದನ್ನ ತನಿಖೆ ಮಾಡಿದ ನಂತರ ನಿಜವಾದ ಕಾರಣ ಏನು ಅನ್ನೋದು ಗೊತ್ತಾಗುತ್ತೆ, ಅದೇನೇ ಇರಲಿ ದು’ರಂತ ಆಗಿಬಿಟ್ಟಿದೆ ಸಾ’ವು ಅನ್ನೋದು ಯಾವ ರೀತಿ ಕೂಡ ಬರಬಹುದು ಅನ್ನೋದಕ್ಕೆ ಈ ಘಟನೆ ಮತ್ತೊಮ್ಮೆ ಸಾಕ್ಷಿಯಾಗಿದೆ ಇಲ್ಲಿ ಯಾವುದು ಕೂಡ ಶಾಶ್ವತ
ಅಲ್ಲ ಇಲ್ಲ ಅಂದ್ರೆ ಊಟ ಮಾಡ್ತಾ ಇದ್ದ ಮಕ್ಕಳು ವಿಮಾನ ಬೀಳುತ್ತೆ ಅಂತ ಕನಸು ಕಂಡಿದ್ರ ಹೇಳಿ? ಗೆಳೆಯರೆ ಈ ದುರಂತದ ಬಗ್ಗೆ ನಿಮಗೆ ಏನು ಅನ್ಸುತ್ತೆ ಕಾಮೆಂಟ್ ಮಾಡಿ..!
- Air India Plane ಗಣಪತಿ ಪೂಜೆ ಮಾಡಿ ಹೋದಳು ಬದುಕಿ ಬಂದಳು.! ಪೂರ್ತಿ ವಿಮಾನ ಸುಟ್ಟರು ಪವಾಡದಂತೆ ಬದುಕಿದ್ದು ಹೇಗೆ? |
- ನಡುಕ ಹುಟ್ಟಿಸುವಂತಹ ವಿಮಾನ ಅ’ಪಘಾ’ತ ..! ಈ ಒಂದು ಚಿಕ್ಕ ಕಾರಣಕ್ಕೆ ನಡೆಯಿತು ನೋಡಿ | Ahmedabad Plane Crash LIVE |
- ತಮ್ಮನ ಹೊಲದಲ್ಲಿ ಅಣ್ಣನಿಗೆ ಸಿಕ್ತು ಚಿನ್ನದ ಭಂಡಾರ | ಆದ್ರೆ ಅಣ್ಣ ಮಾಡಿದ್ದು ಕೇಳಿದರೆ ನೀವು ಕೂಡ…! Gold News
- Kohli Cries After Winning IPL For 1st Time | 18ನೇ ಆವೃತ್ತಿ….18 ವರ್ಷಗಳ ನೆನಪು…ಒಮ್ಮೆಲೆ ನೆನೆದು ಮೈದಾನದಲ್ಲೇ ಕಣ್ಣಿರಿಟ್ಟ ಕೊಹ್ಲಿ!
- RCBಗೆ ಹೊಸ ನಾಯಕನೇ ಅದೃಷ್ಟ ತಂದುಕೊಟ್ಟನಾ? ಕ್ಯಾಪ್ಟನ್ ಆಗಿ ಸಕ್ಸಸ್ ಪ್ಲೇಯರ್ ಆಗಿ ಫೇಲ್.!