Breaking News
6 Aug 2025, Wed

Digital ID Card | ಮನೆ, ಅಂಗಡಿ, ಕಚೇರಿಗೂ ಹೊಸ ಕಾರ್ಡ್‌ ಮಾಡಲು ಕೇಂದ್ರ ಸ’ರ್ಜರಿ | ಇನ್ನು PIN ಕೋಡ್ ಇರಲ್ಲ! ಪ್ರತಿ ಮನೆಗೂ Digital ID ಕಾರ್ಡ್ ಮಾತ್ರವೇ..!

Digital ID Card | ಮನೆ, ಅಂಗಡಿ, ಕಚೇರಿಗೂ ಹೊಸ ಕಾರ್ಡ್‌ ಮಾಡಲು ಕೇಂದ್ರ ಸ'ರ್ಜರಿ | ಇನ್ನು PIN ಕೋಡ್ ಇರಲ್ಲ! ಪ್ರತಿ ಮನೆಗೂ Digital ID ಕಾರ್ಡ್ ಮಾತ್ರವೇ..! 1

Digital ID Card || ನಮಸ್ತೆ ಸ್ನೇಹಿತರೆ, “ಭಾರತದಲ್ಲಿ ಡಿಜಿಟಲ್ ಕ್ರಾಂತಿಯಾಗಿದೆ ಅನ್ನೋದರಲ್ಲಿ ಯಾವುದೇ ಅನುಮಾನ ಬೇಡ ಅದರಲ್ಲೂ ಕಳೆದ ನಾಲ್ಕೈದು ವರ್ಷಗಳಿಂದ ಭಾರತದಲ್ಲಿ ಯಾವ ಮಟ್ಟಿಗೆ ಬದಲಾವಣೆ ಆಗಿದೆ ಅನ್ನೋದನ್ನ ನೀವೆಲ್ಲ ಕಣ್ಣಾರೆ ನೋಡಿದ್ದೀರಿ, UPI ಅನ್ನೋದು ಭಾರತದ ಹಳ್ಳಿ ಹಳ್ಳಿಗೂ ತಲುಪಿದೆ ಶಾಪಿಂಗ್ ಮಾಲ್ಗಳಿಂದ ಹಿಡಿದು ಬೀದಿಬದಿ ವ್ಯಾಪಾರಸ್ಥರವರೆಗೂ ಈಗ UPI ತಲುಪಿದೆ, ಇದು ಭಾರತದ ಡಿಜಿಟಲ್ ಕ್ರಾಂತಿಗೆ ಸಾಕ್ಷಿ, ಆಧಾರ್ ಕಾರ್ಡ್ ನಿಂದ ಆರಂಭವಾಗಿ UPI ವರೆಗೆ ಭಾರತ ಎಷ್ಟು ವೇಗವಾಗಿ ಬೆಳಿತು ಅನ್ನೋದು ನಿಮಗೆಲ್ಲ ಗೊತ್ತಿದೆ, ಇದೀಗ ಡಿಜಿಟಲ್ ವಿಚಾರದಲ್ಲಿ ಮತ್ತೊಂದು ಹೆಜ್ಜೆ ಮುಂದಕ್ಕೆ ಹೋಗೋದಕ್ಕೆ ಭಾರತ ಸಜ್ಜಾಗಿದೆ, ಹೌದು ಆಧಾರ್ ಕಾರ್ಡ್ ಅನ್ನೋದು ಈಗ ಪ್ರತಿಯೊಬ್ಬರ ಐಡೆಂಟಿಟಿ ಆಗಿದೆ, ಇಲ್ಲಿವರೆಗೆ ಆಧಾರ್ ಕಾರ್ಡ್ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿತ್ತು, ಆದರೆ ಇನ್ನ ಮುಂದೆ ಪ್ರತಿಯೊಂದು ಅಡ್ರೆಸ್ಗೂ ವಿಶೇಷವಾದ ಯುನಿಕ್ ಕಾರ್ಡ್ ಜಾರಿಯಾಗಲಿಕ್ಕಿದೆ,

ಇನ್ನು ಮುಂದೆ ನಿಮ್ಮ ಅಡ್ರೆಸ್ ಗಳು ಕೂಡ ಡಿಜಿಟಲ್ ಆಗಲಿದೆ ಇಲ್ಲಿವರೆಗೆ ಅಡ್ರೆಸ್ ಅನ್ನ ನೀವು ಬರೀತಾ ಇದ್ರಿ ಅಡ್ರೆಸ್ ಗೆ ಒಂದು ಪಿನ್ ಕೋಡ್ ಅನ್ನೋದು ಇರುತ್ತೆ ಅದು ಯುನಿಕ್ ಆಗಿರುತ್ತೆ, ಆದರೆ ಇನ್ಮುಂದೆ ಒಂದು ಅಡ್ರೆಸ್ ಗೆ ಡಿಜಿಟಲ್ ಐಡಿ ನಿರ್ಮಾಣವಾಗುತ್ತೆ ಜನರಿಗೆ ಯಾವ ರೀತಿ ಡಿಜಿಟಲ್ ಐಡಿಗಳು ಇರುತ್ತವೋ ಅದೇ ರೀತಿ ಒಂದು ಜಾಗಕ್ಕೂ ಕೂಡ ಇನ್ಮುಂದೆ ಡಿಜಿಟಲ್ ಐಡಿ ನಿರ್ಮಾಣವಾಗಲಿದೆ, ಅಷ್ಟಕ್ಕೂ ಏನಿದುಟ ಡಿಜಿಟಲ್ ಐಡಿ ಅಡ್ರೆಸ್ಗೆ ಡಿಜಿಟಲ್ ಐಡಿಯನ್ನ ನಿರ್ಮಾಣ ಮಾಡೋದು ಹೇಗೆ ಈ ಡಿಜಿಟಲ್ ಐಡಿ ನಿರ್ಮಾಣ ಮಾಡುದರ ಹಿಂದಿನ ಉದ್ದೇಶವೇನು.? ಆಧಾರ್ ಹಾಗೂ UPI ಬಳಿಕ ಈಗ ಭಾರತ ಮತ್ತೊಂದು ಐತಿಹಾಸಿಕ ಹೆಜ್ಜೆ ಇಡೋದಕ್ಕೆ ಮುಂದಾಗಿದೆ, ಇನ್ನುಮುಂದೆ ನಿಮ್ಮ ಅಡ್ರೆಸ್ ಗಳು ಕೂಡ ಡಿಜಿಟಲ್ ಆಗಲಿದೆ, ಇನ್ಮುಂದೆ ನಿಮ್ಮ ಮನೆಯ ಡಿಜಿಟಲ್ ಐಡಿ ಆಗುತ್ತೆ, ನಿಮ್ಮ ಅಂಗಡಿಯ ಡಿಜಿಟಲ್ ID ಆಗುತ್ತೆ, ಪಬ್ಲಿಕ್ ಪ್ಲೇಸ್ಗಳ ಡಿಜಿಟಲ್ ಐಡಿ ಆಗುತ್ತೆ, ಸರ್ಕಾರಿ ಕಚೇರಿಗಳು ಡಿಜಿಟಲ್ ಐಡಿ ಆಗುತ್ತೆ, ಸರಿ ಇದು ಅರ್ಥ ಆಯ್ತು.! ಆದರೆ, ಇದನ್ನ ಡಿಜಿಟಲ್ ಐಡಿ ಮಾಡೋದು ಹೇಗೆ ಅಂತ ನೀವು ಕೇಳಬಹುದು ಸ್ನೇಹಿತರೆ,

ಇಲ್ಲಿವರೆಗೆ ನೀವೆಲ್ಲ ಪಿನ್ ಕೋಡ್ನ್ನ ಬಳಕೆ ಮಾಡ್ತಾ ಇದ್ರಿ, ಇನ್ನ ಮುಂದೆ ಈ ಪಿನ್ ಕೋಡ್ನ ಬದಲಿಗೆ ಡಿಜಿ ಪಿನ್ ಬರಲಿದೆ, ಸ್ನೇಹಿತರೆ ಮೊದಲೇ ಪಿನ್ ಕೋಡ್ನ ಬಗ್ಗೆ ಹೇಳಿಬಿಡ್ತೀವ ಕೇಳಿ, ಭಾರತದಲ್ಲಿ ಒಟ್ಟು 19101 ಪಿನ್ ಕೋಡ್ಗಳಿದೆ, ಆದರೆ ಭಾರತದಲ್ಲಿರುವ ಪೋಸ್ಟ್ ಆಫೀಸ್ಗಳ ಸಂಖ್ಯೆ ಬರೊಬ್ಬರಿ 54754, ಈ ಪಿನ್ ಕೋಡ್ ಅನ್ನ ಶುರು ಮಾಡಿದ್ದು 1972 ರಲ್ಲಿ, ಪಿನ್ ಕೋಡ್ನಲ್ಲಿ ಆರು ಡಿಜಿಟ್ ಇರುತ್ತೆ ಅನ್ನೋದು ನಮಗೆಲ್ಲ ಗೊತ್ತಿದೆ, ಪಿನ್ ಕೋಡ್ ಒಂದು ಪ್ರದೇಶಕ್ಕೆ ಒಂದರಂತೆ ಇದೆ, ನಿಮ್ಮ ಮನೆಗೆ ಬೇರೆ ಪಿನ್ ಕೋಡ್ ಅನ್ನೋದು ಇರೋದಿಲ್ಲ, ನಿಮ್ಮ ಪ್ರದೇಶಕ್ಕೆ ಯಾವ ಪಿನ್ ಕೋಡ್ ಇದೆಯೋ ಅದೇ ಕೋಡ್ ನಿಮ್ಮ ಮನೆಗೂ ಅನ್ವಹಿಸುತ್ತೆ, ಆದರೆ ಈ ಡಿಜಿಟಲ್ ಕೋಡ್ನಲ್ಲಿ ಪ್ರತಿಯೊಂದು ಮನೆಗೂ ಬೇರೆ ಬೇರೆ ಕೋಡ್ ಇರುತ್ತೆ, ಯಾವ ರೀತಿ ಆಧಾರ್ ಕಾರ್ಡ್ ನಂಬರ್ ಪ್ರತಿಯೊಬ್ಬರಿಗೂ ಬೇರೆ ಬೇರೆ ಇರುತ್ತೋ ಅದೇ ರೀತಿ ಪ್ರತಿಯೊಂದು ಮನೆ, ಕಚೇರಿ, ಅಂಗಡಿ, ಹೀಗೆ ಪ್ರತಿಯೊಂದಕ್ಕೂ ಒಂದೊಂದು ಯುನಿಕ್ ಆದ ಡಿಜಿಟಲ್ ಕೋಡ್ ಸಿಗಲಿಕ್ಕಿದೆ, ಈ ಡಿಜಿಟ್ ಕೋಡ್ನಲ್ಲಿ ಒಟ್ಟು 10 ಅಂಕಿಗಳು ಇರಲಿದೆ,

ಇದೊಂದು ಆಲ್ಫಾನ್ಯುಮೆರಿಕ್ ಕೋಡ್ ಅಂದ್ರೆ ನಿಮ್ಮ ಪಾನ್ ಕಾರ್ಡ್ನಲ್ಲಿ ಕೋಡ್ ಇದೆಯಲ್ಲ ಹಾಗೆ, ಪಾನ್ ಕಾರ್ಡ್ನಲ್ಲಿ ನಂಬರ್‌ನ ಜೊತೆಗೆ ಇಂಗ್ಲೀಷ್ ಅಕ್ಷರಗಳು ಕೂಡ ಇರೋದನ್ನ ನಾವು ನೋಡಿದ್ದೇವೆ, ಅದೇ ರೀತಿ ಡಿಜಿ ಕೋಡ್ ಕೂಡ ನಿರ್ಮಾಣವಾಗಲಿಕ್ಕಿದೆ, ಇಷ್ಟೆಲ್ಲಾ ಆಗುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಅಂತೂ ಖಂಡಿತವಾಗಿಯೂ ಮೂಡುತ್ತೆ, ಈಗ ಇದರ ಅಗತ್ಯ ಏನಿದೆಯಪ್ಪ ಅಂತ.? ಈಗಾಗಲೇ ಪಿನ್ ಕೋಡ್ ಇದೆ ಸುಲಭದಲ್ಲೇ ಪಿನ್ ಕೋಡ್ ಮೂಲಕ ಅಡ್ರೆಸ್ ಗೊತ್ತಾಗುತ್ತೆ, ಅದರಲ್ಲೂ ಈಗ ಮ್ಯಾಪ್ಗಳ ಸಹಾಯ ಪಡೆದುಕೊಂಡು ಯಾವ ಅಡ್ರೆಸ್ ಅನ್ನ ಕೂಡ ಹುಡುಕಬಹುದು, ಹೀಗಿರುವಾಗ ಇದರ ಅಗತ್ಯ ಏನಿದೆ ಪ್ರತಿಯೊಂದು ಮನೆ ಮನೆಗೂ ಕೂಡ ಐಡಿ ರೆಡಿ ಆಗುತ್ತೆ ಅಂದ್ರೆ ಅದಕ್ಕೆ ಅಷ್ಟೇ ದೊಡ್ಡ ಪ್ರೋಸೆಸ್ ಕೂಡ ಇದೆ, ಯಾಕೆ ಬೇಕು ಎಲ್ಲ ಸರಿ ಇರುವಾಗ ಅಂತ ನೀವು ಕೇಳಬಹುದು, ಯಾವುದೇ ಒಂದು ಹೊಸ ವಿಚಾರಗಳು ಬಂದಾಗ ಈ ರೀತಿಯ ಪ್ರಶ್ನೆಗಳು ಮೂಡೋದು ಸಾಮಾನ್ಯ, ಒಮ್ಮೆ ನಮ್ಮ ಅಡ್ರೆಸ್ ಗಳನ್ನ ನೋಡಿಕೊಳ್ಳಿ, ಅದಕ್ಕೊಂದು ಫಾರ್ಮ್ಯಾಟ್ ಅಂತ ಇಲ್ಲ,

ಒಬ್ಬೊಬ್ಬರು ಒಂದೊಂದು ರೀತಿ ಅಡ್ರೆಸ್ ಬರೀತಾರೆ, ಸದ್ಯಕ್ಕೆ ಲ್ಯಾಂಡ್ ಮಾರ್ಕ್ನ ಆಧಾರದಲ್ಲಿ ನಾವು ನಮ್ಮ ಅಡ್ರೆಸ್ ಗಳನ್ನ ಬರೀತೀವಿ, ಯಾವುದೋ ಒಂದು ಶಾಲೆಯ ಪಕ್ಕದಲ್ಲಿದೆ, ಯಾವುದೋ ಒಂದು ಅಂಗಡಿಯ ಪಕ್ಕದಲ್ಲಿದೆ, ಅಥವಾ ಯಾವುದೋ ಒಂದು ರಸ್ತೆಯ ಪಕ್ಕದಲ್ಲಿದೆ, ಹೀಗೆ ಲ್ಯಾಂಡ್ ಮಾರ್ಕ್ ಆಧಾರದಲ್ಲಿ ಅಡ್ರೆಸ್ ಬರೀತೀವಿ, ಇದರ ಅರ್ಥ ನಮ್ಮ ಅಡ್ರೆಸ್ಗೆ ಸರಿಯಾದ ಐಡೆಂಟಿಟಿ ಇಲ್ಲ ಅಂತ ಬೇರೆ ಯಾವುದೋ ಒಂದು ಜಾಗವನ್ನ ಲ್ಯಾಂಡ್ ಮಾರ್ಕ್ ಆಗಿ ಇಟ್ಕೊಂಡು ನಮ್ಮ ಅಡ್ರೆಸ್ ಅನ್ನ ನಾವು ಬರೀತೀವಿ, ಈ ರೀತಿ ಆಗೋದರಿಂದ ಕೆಲವೊಂದು ತೊಂದರೆಗಳು ಸಾಮಾನ್ಯವಾಗಿ ಆಗೆ ಆಗುತ್ತೆ, ಈ ಲ್ಯಾಂಡ್ ಮಾರ್ಕ್ ಗಳೇ ಕೆಲವೊಮ್ಮೆ ಕನ್ಫ್ಯೂಸ್ ಮಾಡುತ್ತವೆ, ಸ್ವಲ್ಪ ಕನ್ಫ್ಯೂಸ್ ಆದರೆ ಏನು ಸಮಸ್ಯೆ ಆಗುತ್ತೆ ಅಂತ ನೀವು ಕೇಳಬಹುದು, ಕೆಲವೊಮ್ಮೆ ಎಮರ್ಜೆನ್ಸಿಯ ಸಿಚುವೇಷನ್ ಬರುತ್ತೆ, ಉದಾಹರಣೆಗೆ ಒಂದು ಪ್ರದೇಶದಲ್ಲಿ ಬೆಂಕಿ ಬಿತ್ತು ಅಂತ ಅಂದುಕೊಳ್ಳಿ ನೀವು ಅಗ್ನಿಶಾಮಕ ದಳಕ್ಕೆ ಅಡ್ರೆಸ್ ಕೊಟ್ಟು ಬರೋದಕ್ಕೆ ಹೇಳ್ತೀರಾ ಆದರೆ ಅಗ್ನಿಶಾಮಕ ದಳಕ್ಕೆ ಅಡ್ರೆಸ್ ಕನ್ಫ್ಯೂಸ್ ಆಗುತ್ತೆ ನೀವು ಯಾವುದೋ ಒಂದು ಲ್ಯಾಂಡ್ ಮಾರ್ಕ್ ಹೇಳಿರ್ತೀರಿ ಅವರು ಯಾವುದೋ ಇನ್ನೊಂದು ಲ್ಯಾಂಡ್ ಮಾರ್ಕ್ ನಲ್ಲಿ ಬಂದಿರ್ತಾರೆ,

ಇಂತಹ ಸಂದರ್ಭದಲ್ಲಿ ಯುನಿಕ್ ಆಗಿರುವ ಅಡ್ರೆಸ್ ತುಂಬಾನೇ ಮುಖ್ಯವಾಗುತ್ತೆ ಅಥವಾ ಮೆಡಿಕಲ್ ಎಮರ್ಜೆನ್ಸಿ ಇರುತ್ತೆ ಆಂಬುಲೆನ್ಸ್ ಬರೋದಕ್ಕೆ ಅಡ್ರೆಸ್ ಕೊಟ್ಟಿದ್ದೀರಿ, ಇಂತಹ ಸಂದರ್ಭದಲ್ಲಿ ಕೂಡ ಕೆಲವೊಂದು ತೊಂದರೆಗಳು ಆಗುತ್ತವೆ, ಹೀಗಂತೂ ಪ್ರತಿಯೊಂದು ಕೂಡ ಮನೆ ಬಾಗಿಲಿಗೆ ಬರಬೇಕು, ತರಕಾರಿ ತೆಗೆದುಕೊಳ್ಳೋದಕ್ಕೆ ಕೂಡ ಜನ ಮಾರ್ಕೆಟ್ಗೆ ಹೋಗೋದಿಲ್ಲ ಎಲ್ಲವನ್ನ ಆರ್ಡರ್ ಮಾಡ್ತಾರೆ, ಇನ್ನು ಮುಂದೆ ಈ ಆನ್ಲೈನ್ ಆರ್ಡರ್ ಕ್ಷೇತ್ರ ದೊಡ್ಡ ಮಟ್ಟಕ್ಕೆ ಬೆಳೆಯುತ್ತೆ, ಅಂತಹ ಸಂದರ್ಭದಲ್ಲಿ ಈ ಸಣ್ಣ ಪುಟ್ಟ ಸಮಸ್ಯೆ ದೊಡ್ಡ ರೀತಿಯಲ್ಲಿ ಕಾಡುವ ಸಾಧ್ಯತೆ ಇರುತ್ತೆ, ನಿಮಗೆಲ್ಲ ಇದೆಲ್ಲ ಸಿಲ್ಲಿ ಅಂತ ಅನ್ಸಿರಬಹುದು, ಆದರೆ ನಿಮಗೆ ಗೊತ್ತಿರಲಿ, ಕೇವಲ ಈ ಅಡ್ರೆಸ್ ಪ್ರಾಬ್ಲಮ್ ನಿಂದಲೇ ನಮ್ಮ ದೇಶಕ್ಕೆ ಪ್ರತಿ 10ರಿಂದ 14 ಬಿಲಿಯನ್ ಡಾಲರ್ ಲಾಸ್ ಆಗುತ್ತೆ. ಒಂದು ಅಡ್ರೆಸ್ ಹುಡುಕೋದಕ್ಕೆ 15 ನಿಮಿಷದ ಸಮಯ ತೆಗೆದುಕೊಂಡರು ಕೂಡ ಅದು ದೊಡ್ಡ ಪ್ರಮಾಣದ ನಷ್ಟವನ್ನ ಉಂಟುಮಾಡುತ್ತೆ,

ಒಂದು ಅರ್ಧ ಕಿಲೋಮೀಟರ್ ದೂರ ಹೋದ್ರು ಅಲ್ಲಿ ಪೆಟ್ರೋಲ್ ಖರ್ಚಾಗುತ್ತೆ ಸಮಯ ವೇಸ್ಟ್ ಆಗುತ್ತೆ, ಇದೆಲ್ಲವನ್ನ ಲೆಕ್ಕಾಚಾರ ಹಾಕಿದ್ರೆ ವರ್ಷಕ್ಕೆ 14 ಮಿಲಿಯನ್ ಡಾಲರ್ನವರೆಗೂ ನಮ್ಮ ದೇಶಕ್ಕೆ ನಷ್ಟವಾಗ್ತಾ ಇದೆ, ನಂಬುದಕ್ಕೆ ಕಷ್ಟವಾದರೂ ನೀವು ಇದನ್ನ ನಂಬಲೇಬೇಕು, ಈ ಮ್ಯಾಪ್ ದುನಿಯಾದಲ್ಲಿ ಸಮಸ್ಯೆ ಆಗೋದಕ್ಕೆ ಸಾಧ್ಯವೇ ಇಲ್ಲ ಅಂತ ನೀವೆಲ್ಲ ಅಂದುಕೊಂಡಿರಬಹುದು, ಎಲ್ಲವನ್ನೂ ಕೂಡ ಗೂಗಲ್ ಮ್ಯಾಪ್ ಅನ್ನೇ ನಂಬಿಕೊಂಡು ಮಾಡೋದಕ್ಕೆ ಆಗೋದಿಲ್ಲ. ಮ್ಯಾಪ್ ಅನ್ನ ನಂಬಿ ಪ್ರಯಾಣ ಮಾಡುವಾಗ ತುಂಬಾ ಜನ ಸರಿಯಾದ ಮಾರ್ಗ ಸಿಗದೆ ಸಂಕಷ್ಟ ಅನುಭವಿಸಿದವರು ಕೂಡ ಇದ್ದಾರೆ, ಹೀಗಾಗಿ ಇದಕ್ಕೊಂದು ಪರಿಹಾರ ಹುಡುಕೋದಕ್ಕೆ ಈಗ ಸರ್ಕಾರ ಹೊರಟಿದೆ, ಈ ಡಿಜಿಟಲ್ ಕೋಡ್ ಬಂದಮೇಲೆ ಮ್ಯಾಪ್ ಹಾಕಬೇಕು ಅನ್ನುವ ಅಗತ್ಯ ಬೀಳುವುದಿಲ್ಲ. ಬದಲಾಗಿ ನಿಮ್ಮ ಮನೆಯ ಕೋಡ್ ಕೊಟ್ಟರೆ ಸಾಕು ಎಕ್ಸಾಕ್ಟ್ ಆಗಿ ನಿಮ್ಮ ಮನೆಗೆ ಈ ಲೊಕೇಶನ್ ಬಂದು ತಲುಪುತ್ತೆ.

ಈ ಒಂದು ನಂಬರ್ನಲ್ಲಿ ಎಲ್ಲವೂ ಇರುತ್ತೆ ಅನ್ನೋದು ಮತ್ತೊಂದು ಇಂಪಾರ್ಟೆಂಟ್ ವಿಷಯ. ಇಲ್ಲಿವರೆಗೆ ಮನೆ ನಂಬರ್ ಅಂತ ಒಂದು ಇತ್ತು ಈ ಮನೆ ನಂಬರ್ ಅನ್ನ ಕೂಡ ಡಿಜಿಟಲ್ ಪಿನ್ ರಿಪ್ಲೇಸ್ ಮಾಡಲಿದೆ, ಯಾವ ರೀತಿ ಆಧಾರ್ ನಂಬರ್ ಹಾಕಿ ನಿಮ್ಮ ಐಡೆಂಟಿಟಿಯನ್ನ ಸಾಬಿತು ಪಡಿಸಬಹುದು ಅದೇ ರೀತಿ ಈ ಪಿನ್ ಹಾಕಿ ನಿಮ್ಮ ಮನೆ ಹೌದಾ ಅಲ್ವಾ ಅನ್ನೋದನ್ನ ಸುಲಭದಲ್ಲೇ ತಿಳಿದುಕೊಳ್ಳಬಹುದು, ಕೆಲವೊಂದು ವಿಚಾರದಲ್ಲಿ ಮನೆ ವೆರಿಫಿಕೇಶನ್ ಅಂತ ಬಂದಾಗ ಈ ನಂಬರ್ ತುಂಬಾನೇ ಸಹಾಯಕವಾಗುತ್ತೆ, ಎಮರ್ಜೆನ್ಸಿ ಟೈಮ್ನಲ್ಲಿ ಜಸ್ಟ್ ಒಂದು ನಂಬರ್ ಕೊಟ್ಟರೆ ಸಾಕು ಎಕ್ಸಾಕ್ಟ್ ಲೊಕೇಶನ್ಗೆ ಯಾವುದೇ ರೀತಿಯ ಸೇವೆಗಳು ಕೂಡ ಸುಲಭದಲ್ಲಿ ಬಂದುಬಿಡುತ್ತೆ, ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲಿ ಕೂಡ ಈ ಪಿನ್ ರಕ್ಷಣಾ ಕಾರ್ಯದಲ್ಲಿ ಸಹಾಯಕ್ಕೆ ಬರುತ್ತೆ, ಎಲ್ಲಿ ಅಡ್ರೆಸ್ ಅಂತ ಹುಡುಕುವಷ್ಟು ಟೈಮ್ಗೆ ಕೆಲವೊಂದು ಸಲ ತುಂಬಾ ಸಮಯ ತೆಗೆದುಕೊಳ್ಳುತ್ತೆ,

ಆದರೆ ಈ ನಂಬರ್ನ ಮೂಲಕ ಸುಲಭದಲ್ಲೇ ಲೊಕೇಶನ್ಗೆ ತಲುಪಿ ರಕ್ಷಣಾ ಕಾರ್ಯವನ್ನ ಮಾಡಬಹುದು, ಆನ್ಲೈನ್ ಡೆಲಿವರಿಗಳನ್ನ ಕೂಡ ಸುಲಭದಲ್ಲೇ ತಲುಪಿಸಬಹುದು ಇನ್ನು ಫ್ರಾಡ್ ಆಗೋದನ್ನ ಕೂಡ ಇದರಿಂದ ತಪ್ಪಿಸಬಹುದು, ಫೇಕ್ ಡಾಕ್ಯುಮೆಂಟ್ಗಳನ್ನ ಸೃಷ್ಟಿ ಮಾಡಿ ಜಾಗ ಮಾರಾಟ ಮಾಡುವ ಜಾಲ ಕೂಡ ಇದೆ ಆದರೆ ಇನ್ನು ಮುಂದೆ ಅದು ನಡೆಯೋದಿಲ್ಲ ನಾವು ಜಾಗ ಖರೀದಿ ಮಾಡೋದಕ್ಕಿಂತ ಮುಂಚೆ ಡಿಜಿ ಪಿನ್ ಹಾಕಿ ಎಲ್ಲವನ್ನ ಚೆಕ್ ಮಾಡಿಕೊಳ್ಳಬಹುದು, ಇಷ್ಟೆಲ್ಲ ಆಗುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಪ್ರಶ್ನೆ ಮೂಡಿರಬಹುದು, ಎಲ್ಲವೂ ಡಿಜಿಟಲ್ ಆದರೆ ಪ್ರೈವೆಸಿ ಅನ್ನೋದು ಏನಿರುತ್ತೆ ಇದರಿಂದ ಪ್ರೈವಸಿಗೆ ದಕ್ಕೆ ಬರೋದಿಲ್ವಾ ಅಥವಾ ಪ್ರೈವೇಟ್ ಇನ್ಫಾರ್ಮೇಷನ್ ಗಳು ಲೀಕ್ ಆಗೋದಿಲ್ವಾ ಅಂತ ನೀವು ಕೇಳಬಹುದು, ಸ್ನೇಹಿತರೆ ನಿಮಗೆ ಗೊತ್ತಿರ್ಲಿ ಯಾವ ರೀತಿ ಆಧಾರ್ ಕಾರ್ಡ್ನ ಮಾಹಿತಿಯನ್ನ ನಿಮ್ಮ ಅನುಮತಿ ಇಲ್ಲದೆ ತೆಗೆಯೋದಕ್ಕೆ ಸಾಧ್ಯವಿಲ್ವೋ ಅದೇ ರೀತಿ ಈ ಪಿನ್ನ ಮಾಹಿತಿ ಕೂಡ ನಿಮ್ಮ ಕಂಟ್ರೋಲ್ ನಲ್ಲಿ ಇರುತ್ತೆ,

ನಿಮ್ಮ ಅನುಮತಿ ಇಲ್ಲದೆ ಅದನ್ನ ಯಾರಿಂದಲೂ ಚೆಕ್ ಮಾಡೋದಕ್ಕೆ ಸಾಧ್ಯವಿಲ್ಲ, ಪ್ರೈವೆಸಿ ವಿಚಾರವನ್ನ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸಿದೆ, ಹಾಗಂತ ಕೋಡ್ ನಾಳೆಯಿಂದಲೇ ಜಾರಿಯಾಗುತ್ತೆ ಅಂತ ಅಂದುಕೊಳ್ಳಬೇಡಿ ಇದು ಆರಂಭ ಅಷ್ಟೇ ಜಾರಿಗೆ ಬರೋದಕ್ಕೆ ತುಂಬಾ ಸಮಯ ತೆಗೆದುಕೊಳ್ಳಬಹುದು, ಹೇಳಿ ಕೇಳಿ ನಮ್ಮ ದೇಶದ ವಿಸ್ತೀರ್ಣ ತುಂಬಾ ತುಂಬಾನೇ ದೊಡ್ಡದಿದೆ ಹೀಗಾಗಿ ಇನ್ನೊಂದು ಎರಡು ವರ್ಷ ಅಂತೂ ಖಂಡಿತವಾಗಿಯೂ ಟೈಮ್ ತೆಗೆದುಕೊಳ್ಳುತ್ತೆ, ನಿಮ್ ಪ್ರಕಾರ ಇಂತದ್ದೊಂದು ಯೋಜನೆ ಜಾರಿಗೆ ಬರಬೇಕಾ ನಿಮಗೆ ಏನ ಅನ್ಸುತ್ತೆ ಕಾಮೆಂಟ್ ಮಾಡಿ..!

By Admin

Leave a Reply

Your email address will not be published. Required fields are marked *