“Gold News “ನೀವೇ ಯೋಚನೆ ಮಾಡಿ ಜನ ಜಂಗುಳಿ ಇರುವಂತಹ ಒಂದು ರೋಡಿನಲ್ಲಿ ಹೋಗ್ತಾ ಇರ್ತೀರಾ ಅಂತದರಲ್ಲಿ ರೋಡಿನ ಒಂದು ಮೂಲೆಯಲ್ಲಿ 500 ರೂಪಾಯ ನೋಟು ಬಿದ್ದಿದ್ದು ಕಾಣ್ತೀರಾ ವಿಚಿತ್ರ ಏನಂದ್ರೆ ಅದು ಈವರೆಗೆ ಅಲ್ಲಿ ಓಡಾಡುತ್ತಿರುವರು ಯಾರು ಕೂಡ ನೋಡಿರಲಿಲ್ಲ ಅಂತ ಸಂದರ್ಭದಲ್ಲಿ ನೀವು ಏನು ಮಾಡ್ತೀರಾ? ತಕ್ಷಣಕ್ಕೆ ಏನೋ ಒಂದು ಕಾರಣದಿಂದ ಆ ನೋಟಿನ ಬಳಿ ಹೋಗಿ ಕುಳಿತು ಮೆಲ್ಲಗೆ ಅದನ್ನ ಯಾರು ನೋಡದ ಹಾಗೆ ನಿಮ್ಮ ಜೇಬಿನಲ್ಲಿ ಹಾಕಿಕೊಳ್ಳುತ್ತೀರಾ ಯಾರದ್ದು 500 ರೂಪಾಯಿ ಸಿಕ್ಕ ಖುಷಿ ಮುಗಿಲುಮುಟ್ಟಿರುತ್ತೆ 500 ರೂಪಾಯಿಂದ ನಾನು ಏನೆಲ್ಲ ಖರೀದಿ ಮಾಡಬಹುದು ಏನೆಲ್ಲ ಮಾಡಬಹುದು ಅಂತ ಆಗಲೇ ಯೋಚನೆಗಳು ಪ್ರಾರಂಭವಾಗಿರುತ್ತವೆ ಆದರೆ ಸ್ನೇಹಿತರೆ ನಿಮ್ಮ
ಹೊಲದಲ್ಲಿ ಕೆಲಸ ಮಾಡುವಾಗ ಅಚಾನಕ್ಕಾಗಿ ಚಿನ್ನಭರಿತದ ಒಂದು ಮಡಿಕೆ ಸಿಕ್ರೆ ನಿಮ್ಮ ಪರಿಸ್ಥಿತಿ ಏನಾಗಬಹುದು ಅನ್ನೋದನ್ನ ಯಾವತ್ತಾದರೂ ಯೋಚನೆ ಮಾಡಿದ್ದೀರಾ ನಿಜಕ್ಕೂ ಅಷ್ಟೊಂದು ಚಿನ್ನ ಸಿಕ್ಕಾಗ ನಿಮ್ಮ ತಲೆಯಲ್ಲಿ ಎಷ್ಟೊಂದು ಯೋಚನೆಗಳು ಓಡಾಡುತ್ತವೆ ಅನ್ನೋದು ವಿಚಾರ ಮಾಡಿದ್ದೀರಾ ಹೌದು ಅಂತದೊಂದು ಘಟನೆ ಇತ್ತೀಚಿಗೆ ತೆಲಂಗಾಣ ರಾಜ್ಯದ ಒಂದು ಚಿಕ್ಕ ಹಳ್ಳಿಯಲ್ಲಿ ಒಂದು ಹೊಲದಲ್ಲಿ ಕೆಲಸ ಮಾಡುವಾಗ ಒಬ್ಬ ರೈತನಿಗೆ ಚಿನ್ನದ ಆಭರಣಗಳನ್ನು ನ್ನು ಒಳಗೊಂಡ ಒಂದು ಮಡಕೆ ಸಿಕ್ಕಿತ್ತು ಚಿನ್ನ ಏನೋ ಸಿಕ್ಕಿತ್ತು ನಿಜ ಆದರೆ ಅದರಿಂದ ಆಪತ್ತು ಏನೆಲ್ಲ ಬಂದಿತ್ತು ಅನ್ನೋ ವಿಚಾರ ನಿಮಗೆ ಗೊತ್ತಾದರೆ ನೀವು ನಿಜಕ್ಕೂ ಅಚ್ಚರಿ ಪಡೋದು ಗ್ಯಾರಂಟಿನೇ ಈ ಸತ್ಯ ಘಟನೆ ನಡೆದಿದ್ದು ತೆಲಂಗಾಣ
ರಾಜ್ಯದ ಭುವನಗಿರಿ ಜಿಲ್ಲೆಯ ರಾಮನಪೇಟೆಯಲ್ಲಿ ಅದು 2021 ಡಿಸೆಂಬರ್ ಕೊನೆಯವರ ಲಿಂಗಯ್ಯ ಮತ್ತು ಮಲ್ಲಯ್ಯ ಅಣ್ಣ ತಮ್ಮಂದಿರು ತಮ್ಮ ಪಾಲಿಗೆ ಬಂದಂತಹ ಹೊಲಗಳಿಗೆ ಬೌಂಡರಿ ಹಾಕಲು ಕಲ್ಲುಗಳನ್ನ ಹಾಕಬೇಕೆಂದು ನಿರ್ಧಾರ ಮಾಡ್ತಾರೆ ಹೀಗಾಗಿ ಕೆಲವು ಕೆಲಸಗಾರರನ್ನ ಕರೆಸಿ ಹೊಲದಲ್ಲಿ ಲ್ಲಿ ಭೂಮಿಯನ್ನ ಅಗೆದು ಕಲ್ಲಿನ ಕಂಬಗಳನ್ನ ಹಾಕಬೇಕು ಆಮೇಲೆ ಅವುಗಳಿಗೆ ತಂತಿ ಹಾಕಿ ತಮ್ಮ ತಮ್ಮ ಹೊಲಗಳಿಗೆ ಬೇಲಿ ಹಾಕಬೇಕೆಂದು ಅವರು ಅಂದುಕೊಂಡ ಕೆಲಸವನ್ನ ಮುಂದುವರಿಸಿದ್ದರು ಸುಮಾರು ಒಂದು ವರ್ಷಗಳ ಹಿಂದೆ ಅವರ ತಂದೆಯ ಸಾವಿನ ನಂತರ ಇವರಿಬ್ಬರ ಮಧ್ಯೆ ತಕ್ಕಮಟ್ಟಿಗೆ ವಾದ ವಿವಾದ ನಂತರ ಕೋರ್ಟ್ನಲ್ಲಿ ಜಮೀನಿನ ವಿವಾದ ಬಗೆಹರೆದಿತ್ತು ಆದರೂ ಮಲ್ಲಯ್ಯ
ಮತ್ತು ಲಿಂಗಯ್ಯನ ಕುಟುಂಬದ ಮಧ್ಯೆ ಕೊಂಚಮಟ್ಟಿಗೆ ಭಿನ್ನಾಭಿಪ್ರಾಯ ಇದ್ದೆ ಇತ್ತು ಹೆಚ್ಚಾಗಿ ಈ ರೀತಿಯ ವಿವಾದಗಳು ಪ್ರತಿ ಕುಟುಂಬದಲ್ಲಿ ಮನೆ ಯಜಮಾನ ತೀರಿಕೊಂಡ ಮೇಲೆ ಅವರಿಗಿದ್ದ ಮಕ್ಕಳು ಈ ರೀತಿ ಜಮೀನಿಗಾಗಿ ಆಸ್ತಿಗಾಗಿ ಆಬಣೆಗಳಿಗಾಗಿ ದುಡ್ಡಿಗಾಗಿ ಜಗಳ ಬರೋದೇ ಸಹಜವೇ ಈ ಸಮಯದಲ್ಲಿ ಮಲ್ಲಯ್ಯನಿಗೆ ಸುಮಾರು ನಾಲ್ಕುವರೆ ಎಕರೆ ಜಮೀನು ಬಂದಿದ್ದರೆ ಲಿಂಗಯ್ಯನಿಗೆ ನಾಲ್ಕು ಎಕರೆ ಜಮೀನು ಮಾತ್ರ ಬಂದಿತ್ತು ಮನೆಯ ವಿಚಾರದಲ್ಲೂ ಕೂಡ ಇಬ್ಬರು ಜಗಳವನ್ನ ಆಡಿಕೊಂಡು ಮನೆಯಲ್ಲಿ ಸ್ವಲ್ಪ ಭಾಗದ ಜಾಗವನ್ನ ಲಿಂಗಯ್ಯನಿಗೆ ಹೆಚ್ಚಿಗೆನೇ ಕೊಡಲಾಗಿತ್ತು ಅದು ಡಿಸೆಂಬರ್ 2021 22ನೇ ತಾರೀಕು ಒಪ್ಪಿದಂತೆ ಇಬ್ಬರು ಅಣ್ಣ ತಮ್ಮಂದರು ಒಬ್ಬ ಕಾಂಟ್ರಾಕ್ಟರ್ಗೆ ಈ ಕಲ್ಲುಗಳನ್ನ ಹಾಕಿ
ಬೇಲಿ ಕಟ್ಟಬೇಕೆಂದು ಕೆಲಸವನ್ನ ಶುರು ಮಾಡಿಸಿದ್ದಾರೆ ಹೊಲದಲ್ಲಿ ಅವತ್ತು ಸರಿಸುಮಾರು 12 ಜನ ಕೆಲಸಕ್ಕೆ ಬಂದಿದ್ದಾರೆ ಕೆಲಸವನ್ನ ಪ್ರಾರಂಭ ಮಾಡಿಸಿ ಲಿಂಗಯ್ಯ ತನ್ನ ಮಗನ ಅನಾರೋಗ್ಯದ ಕಾರಣ ಆಸ್ಪತ್ರೆಗೆ ಹೋಗಿದ್ದಾನೆ ಆದರೆ ಮಲ್ಲಯ್ಯ ಮಾತ್ರ ಬೇಲಿ ಹಾಕುವ ಕೆಲಸವನ್ನ ನೋಡಿಕೊಳ್ಳುತ್ತಾ ಹೊಲದಲ್ಲಿ ಇದ್ದಾನೆ ಕಲ್ಲಿನ ಕಂಬಗಳನ್ನು ನಡಲು ಸುಮಾರು ಮೂರು ಅಡಿಯಷ್ಟು ಗುಂಡಿಗಳನ್ನ ಹೊಲದಲ್ಲಿ ತೋಡಲಾಗುತ್ತಿತ್ತು ಹೀಗೆ ಸರಿಸುಮಾರು ಆಗಲೇ ನಾಲ್ಕು ಗುಂಡಿಗಳನ್ನ ತೋಡಲಾಗಿತ್ತು ಐದನೇ ಗುಂಡಿ ತೋಡುವಾಗ ಅದೇನಾಯ್ತೋ ಗೊತ್ತಿಲ್ಲ ಕೇವಲ ಎರಡು ಅಡಿಯಷ್ಟು ಗುಂಡಿಯನ್ನು ತೋಡಿದಾಗ ಏನೋ ಒಂದು ಕಬ್ಬಿಣದ ಸೌಂಡ್ ಬಂದಿದೆ ಕೆಲವರು ಅದೇನಾದರೂ ಕಲ್ಲು ಇರಬಹುದು ಅಥವಾ
ಕಬ್ಬಿಣದ ತುಂಡು ಏನಾದರೂ ಇರಬಹುದು ಅಂತ ಅಂದುಕೊಂಡಿದ್ದಾರೆ ಹೀಗಾಗಿ ಇನ್ನೊಬ್ಬ ಕೆಲಸಗಾರನ್ನ ಕರೆಸಿ ಮೂರು ಜನ ಆ ಗುಂಡಿಯನ್ನ ತೋಡಲು ಪ್ರಯತ್ನ ಪಟ್ಟಿದ್ದಾರೆ ಆದರೆ ಆ ಗುಂಡಿೆಯನ್ನು ತೋಡುತ್ತಾ ಹೋದಾಗ ಆ ಕೆಲಸಗಾರರಿಗೆ ಸಿಕ್ಕಿದ್ದೆ ಒಂದು ಕಬ್ಬಿಣದ ಬಾಕ್ಸ್ ಕಬ್ಬಿಣದ ಬಾಕ್ಸ್ನ್ನ ನೋಡುತ್ತಿದ್ದ ಹಾಗೆ ಕೆಲಸಗಾರರ ಕಣ್ಣುಗಳಲ್ಲಿ ಮಿಂಚು ಹೊಳೆಯಲು ಪ್ರಾರಂಭ ಮಾಡಿದ್ದವು ಎದೆ ಬಡಿತ ಜಾಸ್ತಿಯಾಗಿ ಒಂದು ಕಡೆ ಆತಂಕ ಇನ್ನೊಂದು ಕಡೆ ಸಂತೋಷ ಕೆಲಸಗಾರರಿಗೆ ಖಾತ್ರಿಯಾಗಿ ಹೋಗಿತ್ತು ಆ ಗುಂಡಿಯಲ್ಲಿ ಏನೋ ಒಂದು ಇದೆ ಅಂತ ಆ ಸಮಯದಲ್ಲಿ ಚಹಾ ಕುಡಿದುಕೊಂಡು ಆರಾಮವಾಗಿ ಅಲ್ಲೇ ನಿಂತಿದ್ದ ಮಲ್ಲಯ್ಯ ಇವರ ಮುಖದ ಆವ ಭಾವನ ನೋಡಿ ಏನಾಯ್ತು ಅಂತ ಕೇಳಿದ್ದಾನೆ ಏನಿಲ್ಲ ಸ್ವಾಮಿ ಏನೋ ಕಲ್ಲು
ಬಂದಿರಬಹುದು ಅಥವಾ ಕಬ್ಬಿಣದ ತುಂಡು ಇರಬಹುದು ಅಂತ ಆ ಕೆಲಸಗಾರರು ಹೇಳಿದ್ದಾರೆ ಅಷ್ಟೇ ಮಲ್ಲಯ್ಯ ಬೇಗ ಬೇಗ ಆದಷ್ಟು ಕೆಲಸ ಮಾಡಿ ಕಲ್ಲನ್ನ ತೆಗೆದು ಬಿಸಾಕಿ ಅಂತ ಹೇಳಿದ್ದಾನೆ. ಆದರೆ ಕೆಲಸಗಾರರು ಅಲ್ಲಿಂದ ಎದ್ದು ನೀರು ಕುಡಿಯಬೇಕು ಅಂತ ಮೂರು ಜನ ಒಂದು ಕಡೆ ಹೋಗಿ ಏನೋ ತಮ್ಮ ತಮ್ಮಲ್ಲಿ ಮಾತನಾಡುತ್ತಿರುವುದನ್ನ ಮಲ್ಲಯ್ಯ ಕೂಡ ಗಮನಿಸಿದ್ದಾನೆ. ಮಲ್ಲಯ್ಯನಿಗೆ ಯಾಕೋ ಈ ರೀತಿ ಇವರು ಆಡುತ್ತಿದ್ದಾರೆ ಅನ್ನೋದು ಅವನಿಗೆ ವಿಚಿತ್ರ ಅನಿಸುತ್ತದೆ. ಐದು ನಿಮಿಷಗಳಾದರೂ ಕೂಡ ಅಲ್ಲಿಯೇ ಮಾತನಾಡುತ್ತಿದ್ದು ನೀರನ್ನು ಕುಡಿಯುವ ನಾಟಕ ಮಾಡುವುದನ್ನ ಕಂಡು ಮಲ್ಲಯ್ಯನಿಗೆ ಆ ಕೆಲಸಗಾರನ ಮೇಲೆ ಸಿಟ್ಟು ಬಂದಿದೆ. ಕೆಲಸ ಪ್ರಾರಂಭ ಮಾಡಿ ಒಂದು ಗಂಟೆ ಆಗಿಲ್ಲ. ಆಗಲೇ ನೀವು
ಇಷ್ಟು ಸುಸ್ತಾದರೆ ಹೇಗೆ ಅಂತ ಕೇಳಿದ್ದಾನೆ. ಇಲ್ಲದನಿ ಕೆಲಸ ಪ್ರಾರಂಭ ಮಾಡ್ತೀವಿ ಅಂತ ಆ ಕೆಲಸಗಾರರು ಹೇಳಿದ್ದಾರೆ. ಮೂರರಲ್ಲಿ ಒಬ್ಬ ಕೆಲಸವನ್ನ ನಿಲ್ಲಿಸಿ ನಾಳೆ ಮಾಡ್ತೀವಿ ಅಂತ ಹೇಳೋಣ ಅಂತ ಮಾತಾಡಿಕೊಂಡಿದ್ದಾರೆ. ಇಲ್ಲ ಅಂದ್ರೆ ಆ ಗುಂಡಿಯನ್ನ ಮುಚ್ಚಿ ಆ ಗುಂಡಿಯಲ್ಲಿ ಕಲ್ಲಿದೆ ಪಕ್ಕದಲ್ಲಿ ಇನ್ನೊಂದು ಗುಂಡಿಯನ್ನ ತೊಡುತ್ತೇವೆ ಅಂತ ಹೇಳೋಣ ನಾಳೆ ಬಂದು ಆ ಕಬ್ಬಿಣದ ಬಾಕ್ಸ್ ಎತ್ತುಕೊಂಡು ಹೋಗೋಣ ಅಂತ ಅವರು ಮಾತನಾಡಿಕೊಂಡಿದ್ದಾರೆ. ಈ ನಡುವೆ ಮಲ್ಲಯ್ಯ ಚಹಾವನ್ನ ಕುಡಿಯುತ್ತಾ ಯಾಕೆ ಆ ಗುಂಡಿೆಯಲ್ಲಿ ಏನಾಗಿದೆ ಅಂತ ಸುಮ್ಮನೆ ಬಂದು ನೋಡೋಕೆ ಮುಂದೆ ಬಂದಿದ್ದಾನೆ. ಅವನು ಗುಂಡಿಯನ್ನು ನೋಡಿ ಅದರಲ್ಲಿದ್ದ ಕಬ್ಬಿಣದ ಬಾಕ್ಸ್ ನೋಡಿ ಮಲ್ಲಯ್ಯ
ಕೂಡ ಬೆಚ್ಚೆ ಬಿದ್ದಿದ್ದ. ಆ ಗುಂಡಿಯಲ್ಲಿ ಏನೋ ಒಂದು ನಿಗೂಡ ಕಬ್ಬಿಣದ ಬಾಕ್ಸ್ ಇದೆ. ಇದೇ ಕಾರಣ ಆ ಕೆಲಸಗಾರರು ಈ ರೀತಿ ಆಟವಾಡುತ್ತಿದ್ದಾರಂತ ಮಲ್ಲಯ್ಯನಿಗೆ ಖಾತ್ರಿಯಾಗಿ ಹೋಗಿತ್ತು. ತಕ್ಷಣವೇ ಬಾಕಿ ಕೆಲಸವನ್ನ ನಿಲ್ಲಿಸಿ ಕೇವಲ ಆ ಗುಂಡಿಯಲ್ಲಿದ್ದ ಬಾಕ್ಸ್ ತೆಗೆಯಲು ಆ ಕೆಲಸಗಾರರಿಗೆ ಹೇಳಿದ್ದಾನೆ. ಆ ಬಾಕ್ಸ್ ಅನ್ನ ಹೊರಗೆ ತೆಗೆದು ನೋಡಿದಾಗ ಅಲ್ಲಿದ್ದ ಕೆಲಸಗಾರರು ಅಲ್ಲದೆ ಮಲ್ಲಯ್ಯ ಕೂಡ ಇನ್ನೇನೋ ಮೂರ್ಚೆ ಹೋಗಿ ಬೀಳಬೇಕಅನ್ನೋ ಮಟ್ಟಿಗೆ ಎಲ್ಲರಿಗೂ ಕೂಡ ಆಶ್ಚರ್ಯವಾಗಿತ್ತು. ಹೌದು ಆ ಒಂದು ಕಬ್ಬಿಣದ ಬಾಕ್ಸ್ನಲ್ಲಿ ಬರೊಬ್ಬರಿ 38 ಬೆಳ್ಳಿಯ ನಾಣೆಗಳು ಐದು ಬೆಳ್ಳಿಯ ಪಟ್ಟಿಗಳು 14 ಕತ್ತರಿಸಿದ ಬೆಳ್ಳಿಯ ಉಂಗುರಗಳು ಒಂದು ಬಾಕ್ಸ್ನಲ್ಲಿ ಇದ್ದರೆ
ಅದೇ ಬಾಕ್ಸ್ನ ಇನ್ನೊಂದು ಮಡಿಕೆಯಲ್ಲಿ ಕಬ್ಬಿಣದ ಬಾಕ್ಸ್ನಲ್ಲಿ 14 ಕತ್ತರಿಸಿದ ಬೆಳ್ಳಿಯ ಉಂಗುರಗಳು ಆ ಬಾಕ್ಸ್ನಲ್ಲಿ ಇದ್ದಂತಹ ಒಂದು ಮಡಿಕೆಯಲ್ಲಿ ಸಿಕ್ಕಿದ್ದವು ಅಷ್ಟೇ ಅಲ್ಲದೆ ಆ ಕಬ್ಬಿಣದ ಬಾಕ್ಸ್ನಲ್ಲಿ 19 ಚಿನ್ನದ ನಾಣ್ಯ ಮತ್ತು ಐದು ಗುಂಡಿನ ಮಂಗಳಸೂತ್ರದ ಚಿನ್ನದ ಚೈನುಗಳು ಕೂಡ ಸಿಕ್ಕಿದ್ದವು ಇದನ್ನು ನೋಡುತ್ತಿದ್ದ ಹಾಗೆ ಅಕ್ಕಪಕ್ಕದ ಆಳುಗಳು ರು ಕೂಡ ಅಲ್ಲಿ ಜಮಾಯಿಸಿದ್ದಾರೆ. ಮಲ್ಲಯ್ಯನಿಗೆ ಏನು ಮಾಡಬೇಕು ಅನ್ನೋದು ಗೊತ್ತಾಗಿಲ್ಲ. ತಕ್ಷಣವೇ ಎಲ್ಲ ಕೆಲಸವನ್ನ ನಿಲ್ಲಿಸಿ ಎಲ್ಲರಿಗೂ ಅಲ್ಲಿಂದ ಹೋಗಲು ಹೇಳಿದ್ದಾನೆ. ಅಷ್ಟೇ ಅಲ್ಲದೆ ಯಾರು ಕೂಡ ಆ ಬಾಕ್ಸ್ನ್ನ ಮುಟ್ಟಬಾರದು ಅದರ ಬಗ್ಗೆ ಮಾತನಾಡೋದಾಗಲಿ ಮಾಡಬಾರದು ಅಂತ ತಾಕಿತು
ಮಾಡಿದ್ದಾನೆ. ಅವರೆಲ್ಲರಿಗೂ ಮುಂದಿನ ವಾರ ಭಕ್ಷಿಸಿ ಕೊಡುತ್ತೇನೆ ಅಂತ ಕೂಡ ಮಾತು ಕೊಟ್ಟಿದ್ದಾನೆ. ಆದರೆ ವಿಚಿತ್ರ ಏನೆಂದರೆ ಅಲ್ಲಿಂದ ಯಾವ ಆಳು ಕೂಡ ಹೊಲದಿಂದ ಕಾಲನ್ನ ಕಿತ್ತುವುದಿಲ್ಲ. ಆ ಎಲ್ಲಾ ಕಬ್ಬಿಣದ ಬಾಕ್ಸ್ನ್ನ ಮತ್ತು ಚಿನ್ನಾಭರಣಗಳನ್ನ ಮಲ್ಲಯ್ಯ ತಾನು ತಂದಿದ್ದ ಬೈಕ್ನಲ್ಲಿ ಇಟ್ಟುಕೊಂಡು ಮನೆಗೆ ಹೋಗಬೇಕೆಂದು ನಿರ್ಧಾರ ಮಾಡಿದ್ದಾನೆ ಆದರೆ ಅದೇನಾಯ್ತೋ ಗೊತ್ತಿಲ್ಲ ಮುಂದೆ ಕೇವಲ ಅರ್ಧ ಗಂಟೆಯಲ್ಲಿ ಮಲ್ಲಯ್ಯನ ಸಹೋದರ ಲಿಂಗಯ್ಯ ಕೂಡ ಹೊಲಕ್ಕೆ ಬಂದೇ ಬಿಟ್ಟಿದ್ದ ಅಂದರೆ ಅಲ್ಲಿಯೇ ಇದ್ದ ಯಾರೋ ಒಬ್ಬವರು ಲಿಂಗಯ್ಯನಿಗೂ ಕೂಡ ಈ ವಿಷಯವನ್ನ ಫೋನಿನ ಮೂಲಕ ತಿಳಿಸಿ ಬಿಟ್ಟಿದ್ದರು ಮಲ್ಲಯ್ಯ ಹಾಗೋ ಹೀಗೋ ಮಾಡಿ ಸಿಕ್ಕಂತ ನಿಧಿಯನ್ನ
ತನ್ನದಾಗಿಸಬೇಕೆಂದು ಒಳಒಳಗೆ ನಿರ್ಧಾರವನ್ನ ಮಾಡಿದ್ದ ಆದರೆ ಅವನ ಅವನ ಸೋದರ ಅಲ್ಲಿಗೆ ಬಂದಿದ್ದರಿಂದ ಇಬ್ಬರ ನಡುವೆ ಸಿಕ್ಕಂತಹ ನಿಧಿಯನ್ನ ಡಿವೈಡ್ ಮಾಡಬೇಕೆಂದು ಲಿಂಗಾಯ ಕೇಳುತ್ತಾನೆ ಅದಕ್ಕೆ ಮಲ್ಲಯ್ಯ ಅದೇಗೆ ಸಾಧ್ಯ ಈ ಎಲ್ಲ ಆಭರಣಗಳ ಮತ್ತು ಚಿನ್ನ ಸಿಕ್ಕಿದ್ದು ನನ್ನ ಪಾಲಿಗೆ ಬಂದಂತ ಹೊಲದಲ್ಲಿ ನಾನು ಸಿಕ್ಕಂತಹ ಈ ನಿಧಿಯನ್ನು ಯಾರಪ್ಪನಿಗೂ ಕೊಡೋದಿಲ್ಲ ಅಂತ ಖಡಾಖಂಡಿತವಾಗಿ ಹೇಳುತ್ತಾನೆ ಇವರಿಬ್ಬರ ನಡುವೆ ವಾದ ವಿವಾದ ನಡೆದಿದೆ ಜಗಳವನ್ನ ಆ ಹಳ್ಳಿಯ ಹಿರಿಯರಲ್ಲಿ ಅಂದರೆ ಪಂಚಾಯಿತಿಯಲ್ಲಿ ತೆಗೆದುಕೊಂಡು ಹೋಗಲಾಗುತ್ತೆ ಪಂಚಾಯಿತಿಯಲ್ಲಿ ಈ ವಿಷಯದ ಬಗ್ಗೆ ಮಾತುಕಥೆ ನಡೆದಾಗ ಇವರಿಬ್ಬರಿಗೂ ಸಮಪಾಲು ಕೊಡಬೇಕೆಂದು ಹಳ್ಳಿಯ ಹಿರಿಯರು
ಹೇಳುತ್ತಾರೆ ರೆ ಆದರೆ ಮಲ್ಲಯ್ಯ ಮಾತ್ರ ಸಮಪಾಲ ಕೊಡಲು ಮಾತ್ರ ಸಾಧ್ಯವಿಲ್ಲ ತಮ್ಮನಿಗೆ ಕೇವಲ 20% ಸಿಕ್ಕಂತಹ ನಿಧಿಯಲ್ಲಿ ಕೊಡುತ್ತೇನೆ ಅಂತ ಹೇಳುತ್ತಾನೆ ಆದರೆ ಲಿಂಗಯ್ಯ ಮಾತ್ರ ಅದಕ್ಕೆ ಒಪ್ಪಿಕೊಳ್ಳುವುದಿಲ್ಲ ತನಗೂ ಅರ್ಧ ಪಾಲು ಬೇಕೇ ಬೇಕು ಅಂತ ಹಠ ಹಿಡಿಯುತ್ತಾನೆ ಈ ವಿಷಯ ಸುಮಾರು ಒಂದು ತಿಂಗಳ ಕಾಲ ವಾದ ವಿವಾದ ಪಂಚಾಯಿತಿಯಲ್ಲಿ ನಡುತ್ತದೆ ಕೊನೆಗೆ ಇಬ್ಬರಿಗೂ ಬೇಡ ಅಂತ ಹೇಳಿ ಸಿಕ್ಕಂತಹ ಆಭರಣವನ್ನ ಕೋರ್ಟೆ ನಿರ್ಧಾರ ಮಾಡಲಿ ಅಂತ ಆ ನಿಧಿಯನ್ನ ಪಂಚಾಯಿತಿ ವತಿಯಿಂದಲೇ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ ವಿಚಿತ್ರ ಏನೆಂದರೆ ಇಷ್ಟು ವರ್ಷಗಳಾದರೂ ಕೂಡ ಆ ಕೇಸು ಮಾತ್ರ ಈಗಲೂ ಕೂಡ ಕೋರ್ಟ್ನಲ್ಲೇ ನಡೀತಾ ಇದೆ ನೋಡಿದೀರಾ ಯಾರೋ ಬಚ್ಚಿಟ್ಟಂತಹ ದುಡ್ಡು ಯಾರಿಗೂ
ಕೂಡ ಸಿಗದೆ ಕೋರ್ಟ್ನಲ್ಲಿ ಇದು ಈಗಲೂ ನ್ಯಾಯಕ್ಕಾಗಿ ಇಬ್ಬರು ಅಣ್ಣ ತಮ್ಮಂದರು ಪರದಾಡುತ್ತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ ಹೌದು ಸ್ನೇಹಿತರೆ ಮಾತಿನಲ್ಲಿ ಅಥವಾ ಹಿರಿಯರ ಜೊತೆ ಮಾತನಾಡಿ ಅಲ್ಲಿಯ ವಿಷಯವನ್ನ ಮುಗಿಸಿದರೆ ಎಲ್ಲರೂ ಅದನ್ನ ಅನುಭವಿಸಬಹುದಾಗಿತ್ತು ಇಲ್ಲವಾದರೆ ಇಂತಹ ಕೇಸುಗಳು ತಲೆ ತಲಾಂತರಗಳಿಂದ ಕೋರ್ಟ್ನಲ್ಲಿ ನಡೆಯುತ್ತಾನೆ ಇರುತ್ತವೆ ಎಲ್ಲಿಯೂ ಇದಕ್ಕೆ ಒಂದು ತಾರ್ಕಿಕ ನ್ಯಾಯ ಸಿಗೋದು ತುಂಬಾನೇ ಕಡಿಮೆ ಏನೋ ಒಂದು ಹೆಚ್ಚು ಕಡಿಮೆ ಮಾಡಿಕೊಂಡು ಅಣ್ಣ ತಮ್ಮಂದಿರು ಅಥವಾ ಬಂಧು ಬಾಂಧವರು ಸಿಕ್ಕಂತಹ ನಿಧಿಯನ್ನ ಹಂಚಿಕೊಂಡರೆ ಕೋರ್ಟು ಕಚೇರಿಗೆ ಹೋಗೋದು ಕೂಡ ತಪ್ಪಿಸಬಹುದು,
ಗೆಳೆಯರೇ ಅದಕ್ಕೆ ಹೇಳೋದು ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಅಂತ ಸ್ನೇಹಿತರೆ ಈ ಘಟನೆಯ ಬಗ್ಗೆ ನೀವೇನಂತೀರಾ ಅನ್ನೋದನ್ನ ದಯವಿಟ್ಟು ಕಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡಿ..!
- Air India Plane ಗಣಪತಿ ಪೂಜೆ ಮಾಡಿ ಹೋದಳು ಬದುಕಿ ಬಂದಳು.! ಪೂರ್ತಿ ವಿಮಾನ ಸುಟ್ಟರು ಪವಾಡದಂತೆ ಬದುಕಿದ್ದು ಹೇಗೆ? |
- ನಡುಕ ಹುಟ್ಟಿಸುವಂತಹ ವಿಮಾನ ಅ’ಪಘಾ’ತ ..! ಈ ಒಂದು ಚಿಕ್ಕ ಕಾರಣಕ್ಕೆ ನಡೆಯಿತು ನೋಡಿ | Ahmedabad Plane Crash LIVE |
- ತಮ್ಮನ ಹೊಲದಲ್ಲಿ ಅಣ್ಣನಿಗೆ ಸಿಕ್ತು ಚಿನ್ನದ ಭಂಡಾರ | ಆದ್ರೆ ಅಣ್ಣ ಮಾಡಿದ್ದು ಕೇಳಿದರೆ ನೀವು ಕೂಡ…! Gold News
- Kohli Cries After Winning IPL For 1st Time | 18ನೇ ಆವೃತ್ತಿ….18 ವರ್ಷಗಳ ನೆನಪು…ಒಮ್ಮೆಲೆ ನೆನೆದು ಮೈದಾನದಲ್ಲೇ ಕಣ್ಣಿರಿಟ್ಟ ಕೊಹ್ಲಿ!
- RCBಗೆ ಹೊಸ ನಾಯಕನೇ ಅದೃಷ್ಟ ತಂದುಕೊಟ್ಟನಾ? ಕ್ಯಾಪ್ಟನ್ ಆಗಿ ಸಕ್ಸಸ್ ಪ್ಲೇಯರ್ ಆಗಿ ಫೇಲ್.!