ನಮಸ್ತೆ ಸ್ನೇಹಿತರೆ, Story of IAS Officer ಇದ್ದಕ್ಕಿದ್ದ ಹಾಗೆ ಜಿಲ್ಲಾಧಿಕಾರಿ ಆ ಊರಿಗೆ ಬಂದಾಗ ಮೊದಲಿಗೆ ಭೇಟಿ ಕೊಟ್ಟಿದ್ದೆ ಆ ಒಂದು ಸ್ಲಮ್ ಏರಿಯಾದಲ್ಲಿ ಇದ್ದ ಆ ಟೀ ಅಂಗಡಿಗೆ, ಅದನ್ನ ಕಂಡಂತಹ ಜಿಲ್ಲೆಯ ಸೂಪರ್ಡೆಂಟ್ ಆಫ್ ಪೊಲೀಸ್ ಜಿಲ್ಲಾಧಿಕಾರಿಯ ಸಹಾಯಕ ಅಧಿಕಾರಿಗಳು ಆ ಸ್ಲಮ್ ಏರಿಯಾದಲ್ಲಿ ಇದ್ದ ಹಲವಾರು ಜನಸಾಮಾನ್ಯರು ಆ ಜಿಲ್ಲಾಧಿಕಾರಿ ಕಾರಿನಿಂದ ಇಳಿದು ನೇರವಾಗಿ ಆ ಟೀ ಅಂಗಡಿಗೆ ನುಗ್ಗಿದ್ದನ್ನ ಕಂಡು ಎಲ್ಲರೂ ಬೆಚ್ಚಿಬಿದ್ದಿದ್ರು, ಹೌದು ಆ ಸ್ಲಮ್ ಕಥೆ ಮುಗೀತು ಅಂತ ಎಲ್ಲರೂ ಭಾವಿಸಿದ್ರು, ಯಾಕಂದ್ರೆ ಸುಮಾರು ನಾಲ್ಕು ವರ್ಷಗಳಿಂದ ಆ ಸ್ಲಮ್ ಅನ್ನ ನಿರ್ಣಾಮ ಮಾಡಿ ಅಲ್ಲಿ ದೊಡ್ಡ ಶಾಪಿಂಗ್ ಕಾಂಪ್ಲೆಕ್ಸ್ ಕಟ್ಟಬೇಕು ಅನ್ನೋದು ಒಬ್ಬ ಶ್ರೀಮಂತ ಬಿಲ್ಡರ್ ನ ಆಸೆಯಾಗಿತ್ತು, ಈ ವಿಷಯ ತಿಳಿಯುತ್ತಿದ್ದ ಹಾಗೆ ಆ ಸ್ಲಮ್ ನಲ್ಲಿ ವಾಸಿಸುತ್ತಿದ್ದ ನೂರಾರು ಜನ ಆ ಟೀ ಅಂಗಡಿ ಹತ್ತಿರ ಧಾವಿಸುತ್ತಾರೆ,
ಆದರೆ ಆ ಟೀ ಅಂಗಡಿಯಲ್ಲಿ ಮುಂದೆ ಏನಾಯ್ತು ಅಂತ ಗೊತ್ತಾದಾಗ ಸೂಪರ್ಡೆಂಟ್ ಆಫ್ ಪೊಲೀಸ್ ದಿಗ್ಬ್ರಾಂತರಾಗುತ್ತಾರೆ, ಅಷ್ಟಕ್ಕೂ ಈ ಜಿಲ್ಲಾಧಿಕಾರಿ ಆ ಟೀ ಅಂಗಡಿಗೆ ನುಗ್ಗಿದ್ದು ಯಾಕೆ? ಆ ಟೀ ಅಂಗಡಿಯಲ್ಲಿ ನಡೆದದ್ದು ಏನು? ನೋಡೋಣ ಬನ್ನಿ.! ಹೌದು ಚೆನ್ನೈನ ಪ್ಲಾಟ್ಫಾರ್ಮ್ ನಂಬರ್ ಎರಡರಿಂದ ಬಿಳಿಗಿರಿ ಎಕ್ಸ್ಪ್ರೆಸ್ ತನ್ನ ನಿಗದಿತ ಸಮಯಕ್ಕೆ ಐದು ನಿಮಿಷ ಲೇಟಾಗಿ ಬಂದಿತ್ತು, ಅದು ಸುಮಾರು ಸಮಯ 9:00 ಗಂಟೆ 10 ನಿಮಿಷ, ಅದು ಕೊಯಂಬತ್ತೂರಿನ ಬೆಳಿಗ್ಗೆ ಐದು ಗಂಟೆಗೆ ತಲುಪಬೇಕಾಗಿತ್ತು, ರವಿ ಮತ್ತು ಭಾಗ್ಯ ಅದೇ ಟ್ರೈನಲ್ಲಿ ಕೊಯಂಬತ್ತೂರಿಗೆ ಹೋಗುತ್ತಿದ್ದರು, ಭಾಗ್ಯ ಕಿ’ಡ್ನಿ ಪ್ರಾ’ಬ್ಲಮ್ ಇದ್ದ ಕಾರಣ ಚೆನ್ನೈನ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಅವಳನ್ನ ಚಿಕಿತ್ಸೆಗಾಗಿ ರವಿ ಕರೆದುಕೊಂಡು ಹೋಗಿದ್ರು, ಹೀಗಾಗಿ ತಮ್ಮ ಐದು ವರ್ಷದ ಮಗ ರಂಜಿತ್ ನನ್ನ ಭಾಗ್ಯ ತಮ್ಮ ಮನೆಯಲ್ಲಿ ಬಿಟ್ಟು ಹೋಗಿದ್ದರು, ಆದರೆ ದುರಾದೃಷ್ಟ ರಾತ್ರಿ

ಮೂರು ಗಂಟೆ ಆಸುಪಾಸು ಸೇಲಂ ನಡುವೆ ಆ ಟ್ರೈನ್ ಹಳಿತಪ್ಪಿ ದು’ರ್ಘಟನೆಯಾಗಿತ್ತು, ಅದರಲ್ಲಿ ಸರಿಸುಮಾರು ಒಂಬತ್ತು ಜನ ಸಾ’ವನ್ನಪ್ಪಿದ್ರು, ಮತ್ತು 50ಕ್ಕೂ ಹೆಚ್ಚು ಜನರಿಗೆ ಗಾ’ಯವಾಗಿತ್ತು ಈ ವಿಷಯ ತಿಳಿಯುತ್ತಿದ್ದ ಹಾಗೆ ಭಾಗ್ಯಳ ತಮ್ಮನಾದಂತಹ ಮಂಜುನಾಥ್ ಭಾಗ್ಯಾಳ ಮಗನನ್ನ ಕರೆದುಕೊಂಡು ಸೇಲಂ ಆಸ್ಪತ್ರೆಗೆ ಹೋಗಿದ್ದಾನೆ, ಆದರೆ ಭಾಗ್ಯ ಸ್ಥಳದಲ್ಲೇ ಸಾ’ವನ್ನಪ್ಪಿದ್ದರು, ಇನ್ನು ರವಿ ಆಸ್ಪತ್ರೆಯಲ್ಲಿ ಎರಡು ದಿನಗಳ ನಂತರ ತನ್ನ ಪ್ರಾಣವನ್ನು ಬಿಟ್ಟಿದ್ರು, ಈಗ ರಂಜಿತನನ್ನು ಸಾಕುವ ಸಂಪೂರ್ಣ ಜವಾಬ್ದಾರಿ ಮಂಜುನಾಥನ ಮೇಲೆ ಬಿದ್ದಿತ್ತು, ಮಂಜುನಾಥ್ ಮುಂದೆ ತಿರುಪುರ ಬಳಿ ಇರುವ ಒಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡಿಕೊಂಡು ತಾನೊಬ್ಬನೇ ಈ ರಂಜಿತ್ ನ ಸಾಕಿದ್ದಾನೆ, ಮುಂದೆ ಅವನಿಗೂ ಕೂಡ
ಮದುವೆ ಫಿಕ್ಸ್ ಆಗಿ ತದನಂತರ ಸುನೀತಾ ಅನ್ನುವ ಒಬ್ಬ ಹುಡುಗಿಯ ಜೊತೆ ಮದುವೆ ಮಾಡಿಕೊಳ್ಳುತ್ತಾನೆ, ಅವಳು ಕೂಡ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು, ಮದುವೆಯಾಗಿ ಒಂದೂವರೆ ವರ್ಷದಲ್ಲಿ ಮಂಜುನಾಥ್ ಗೆ ಒಂದು ಗಂಡು ಮಗು ಆಗಿದೆ, ಮದುವೆಯಾದ ಹೊಸದರಲ್ಲಿ ಸುನೀತಾ ರಂಜಿತ್ ನ ಚೆನ್ನಾಗಿ ನೋಡ್ಕೊಳ್ತಾ ಇದ್ಲು, ಮಗನ ಹಾಗೆ ಕಾಣ್ತಾ ಇದ್ಲು, ಆದರೆ ಯಾವಾಗ ತನಗೊಂದು ಗಂಡು ಮಗು ಆಯ್ತೋ ರಂಜಿತ್ ನನ್ನ ನಿರ್ಲಕ್ಷ ಮಾಡಿದ್ದಾಳೆ, ಅವನಿಗೆ ಸರಿಯಾಗಿ ಊಟ ತಿಂಡಿ ಬಟ್ಟೆಗಳ ಬಗ್ಗೆ ಅವಳಿಗೆ ಕಾಳಜಿನೇ ಇರಲಿಲ್ಲ, ಹೀಗಾಗಿ ರಂಜಿತ್ ಸುಮಾರು ಎಂಟು ವರ್ಷದವನಾಗಿದ್ದಾಗ ಮಂಜುನಾಥ ಮತ್ತು ಸುನೀತಾ ನಡುವೆ ಆಗಾಗ ರಂಜಿತ್ ನ ಸಲುವಾಗಿ ಜಗಳ ಪ್ರಾರಂಭ ಆಗ್ತಾ ಇತ್ತು, ಅವನನ್ನ ಯಾವುದೋ
ಒಂದು ಅನಾಥಾಶ್ರಮಕ್ಕೆ ಸೇರಿಸಿ ಅಂತ ಸುನೀತಾ ಪದೇ ಪದೇ ಹೇಳ್ತಾ ಇದ್ಲು, ಅಷ್ಟೇ ಅಲ್ಲದೆ ಸುನೀತಾ ತಾಯಿ ಕೂಡ ನಾವು ಬೇರೆಯವರ ಮಕ್ಕಳನ್ನು ಯಾಕೆ ನೋಡಿಕೊಳ್ಳಬೇಕು ಅಂತ ಸುನೀತಾಗೆ ಕಿವಿಯನ್ನು ಹಿಂಡುತ್ತಿದ್ರು, ಈ ಸಮಯದಲ್ಲಿ ರಂಜಿತ್ ಗೂ ಕೂಡ ಈ ಜಗಳಗಳು ಅರ್ಥವಾಗುತ್ತಿದ್ದವು, ತನ್ನನ್ನು ಈ ಮನೆಯಲ್ಲಿ ಯಾವ ರೀತಿ ನೋಡಿಕೊಳ್ಳಲಾಗುತ್ತಿದೆ ಅನ್ನೋದು ಆ ಚಿಕ್ಕ ಹುಡುಗನಿಗೆ ಆಗಲೇ ಗೊತ್ತಾಗೋಗಿತ್ತು, ಹೀಗಾಗಿ ಅವನು ಒಂಬತ್ತನೇ ವಯಸ್ಸಿಗೆ ಬಂದಾಗ ರಂಜಿತ್ ಯಾರಿಗೂ ಗೊತ್ತಾಗದ ಹಾಗೆ ಆ ಮನೆಯನ್ನು ಬಿಟ್ಟು ಹೋಗಿದ್ದಾನೆ, ಅವರ ಮನೆ ರೈಲ್ವೆ ಸ್ಟೇಷನ್ ಹತ್ರ ಇದ್ದ ಕಾರಣ ಯಾವ ಟ್ರೈನ್ ಯಾವ ಸಮಯಕ್ಕೆ ಎಲ್ಲಿಗೆ ಹೋಗುತ್ತದೆ ಅನ್ನೋದು ರಂಜಿತ್ ಗೆ ಚೆನ್ನಾಗಿ ಗೊತ್ತಿತ್ತು,
ಯಾಕಂದ್ರೆ ಅವನು ಹೆಚ್ಚಾಗಿ ಆಟವನ್ನು ಇದೆ ರೈಲ್ವೆಯ ಸ್ಟೇಷನ್ ಹಾಗೂ ರೈಲ್ವೆ ಹಳಿಗಳ ಸುತ್ತಮುತ್ತ ಆಡ್ತಾ ಇದ್ದ, ಹೀಗಾಗಿ ರಂಜಿತ್ ಒಂಬತ್ತನೇ ವಯಸ್ಸಿಗೆ ಎಲ್ಲವನ್ನು ಕಲಿತು ಬಿಟ್ಟಿದ್ದ, ಅವನು ನೇರವಾಗಿ ಒಂದು ಬ್ಯಾಗನ್ನು ಕೂಡ ಇಟ್ಟುಕೊಳ್ಳದೆ ಚೆನ್ನೈಗೆ ಹೋಗುವ ಟ್ರೈನನ್ನ ಹತ್ತಿ ಕುಳಿತಿದ್ದಾನೆ, ಸ್ವಲ್ಪ ಸಮಯದ ನಂತರ ಅವನಿಗೆ ನಿದ್ದೆ ಕೂಡ ಬಂದಿದೆ, ಸುಮ್ಮನೆ ಒಂದು ಸೀಟ್ ಕೆಳಗಡೆ ಹೋಗಿ ಮಲ್ಕೊಂಡಿದ್ದಾನೆ, ಟಿಟಿ ಕೂಡ ಈ ಹುಡುಗನನ್ನು ನೋಡಿಲ್ಲ ಟಿಕೆಟ್ ಕೂಡ ಕೇಳಿಲ್ಲ ಬೆಳಿಗ್ಗೆ ಆದಾಗ ಆ ಟ್ರೈನ್ ಚೆನ್ನೈ ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು ತಲುಪಿರುತ್ತೆ, ಆದರೆ ರಂಜಿತ್ ಮಾತ್ರ ಇನ್ನು ಆ ಸೀಟ್ ಕೆಳಗಡೆ ಮಲಗಿದ್ದ, ಆ ಟ್ರೈನ್ ಕ್ಲೀನ್ ಮಾಡಲು ಬಂದಂತಹ ಕೆಲವು

ರೈಲ್ವೆ ಕಾಮಚಾರಿಗಳು ಯಾವುದೋ ಒಬ್ಬ ಚಿಕ್ಕ ಹುಡುಗ ಸೀಟ್ ಕೆಳಗೆ ಮಲಗಿದ್ದಾನೆ ಅಂತ ಎಬ್ಬಿಸಿದ್ದಾರೆ, ಹಾಗೇ ಅವನನ್ನ ವಿಚಾರಿಸುತ್ತಾರೆ, ರಂಜಿತ್ ತನ್ನೆಲ್ಲ ಮಾಹಿತಿಯನ್ನ ಅಲ್ಲಿ ಅವರಿಗೆ ಹೇಳಿಕೊಳ್ಳುತ್ತಾನೆ, ಯಾಕೆ ಅವನು ಮನೆ ಬಿಟ್ಟು ಬಂದ ಅಂತ ಕೂಡ ಆ ಮಹಿಳೆಗೆ ಹೇಳಿದ್ದಾನೆ, ಆ ಮಹಿಳೆಗೂ ಕೂಡ ಈ ರಂಜಿತ್ ಮೇಲೆ ಕರುಣೆ ಬಂದಿತ್ತು, ಹೌದು ಆ ಮಹಿಳೆಯೇ ಮಂಜಮ್ಮ, ಮಂಜಮ್ಮ ತನ್ನ ಗಂಡನ ಕೆಲಸ ಹೋದಮೇಲೆ ಈ ರೈಲ್ವೆ ಭೋಗಿಗಳನ್ನ ಕ್ಲೀನ್ ಮಾಡುವ ಕೆಲಸವನ್ನ ಮಾಡಿಕೊಂಡಿದ್ಳು, ಅವಳಿಗೆ ಮಕ್ಕಳಿರಲಿಲ್ಲ ವಿಧವೆ ಬೇರೆ, ರಂಜಿತ್ ನನ್ನ ತನ್ನ ಜೊತೆ ಕರೆದುಕೊಂಡು ಹೋಗಿದ್ದಾಳೆ, ಹಾಗೂ ಅವಳ ಮನೆಯಲ್ಲಿ ಅವನಿಗೆ ಆಸರೆಯನ್ನು ಕೂಡ ಕೊಟ್ಟಿದ್ದಾಳೆ, ಮುಂದೆ ರಂಜಿತ್ ನ ಶಾಲೆಗೆ
ಸೇರಿಸಬೇಕೆಂದರೆ ದುಡ್ಡಿರಲಿಲ್ಲ ಹೀಗಾಗಿ ಮೊದ ಮೊದಲು ಅವರ ಮನೆಯ ಅಕ್ಕಪಕ್ಕದಲ್ಲಿ ಇದ್ದಂತಹ ಒಂದು ಟೀ ಅಂಗಡಿಯಲ್ಲಿ ರಂಜಿತ್ ನನ್ನ ಕೆಲಸಕ್ಕೆ ಸೇರಿಸುತ್ತಾಳೆ, ಹೌದು ರಂಜಿತ್ ನ ಜೀವನದಲ್ಲಿ ಬರಿ ಸಮಸ್ಯೆಗಳೇ ಇದ್ದವು ಹುಟ್ಟಿದಾಗಿಂದಲೂ ಸಮಸ್ಯೆಗಳನ್ನ ಒಂದೊಂದಾಗಿ ಬಗೆಹರಿಸಿಕೊಂಡು ಬರುವುದೇ ಆ ಹುಡುಗನ ಜೀವನವಾಗಿತ್ತು, ರೈಲ್ವೆ ಸ್ಟೇಷನ್ ಪಕ್ಕದಲ್ಲಿ ಟೀ ಅಂಗಡಿಯಲ್ಲಿ ಬಂದವರಿಗೆ ಟೀ ಸಪ್ಲೈ ಮಾಡುವುದು ರಂಜಿತ್ ನ ಕೆಲಸವಾಗಿತ್ತು, ವೀಕ್ಷಕರೇ ಮಧ್ಯಾಹ್ನದ ಸಮಯದಲ್ಲಿ ಅವನಿಗೆ ಸ್ವಲ್ಪ ಮಟ್ಟಿಗೆ ಸಮಯ ಸಿಗುತ್ತಿತ್ತು ಅಷ್ಟೇ ಪಕ್ಕದಲ್ಲಿದ್ದ ರೈಲ್ವೆ ಸ್ಕೂಲ್ಗೆ ಹೋಗಿ ಹೊರಗಿನಿಂದಲೇ ಪಾಠವನ್ನು ಕೇಳುತ್ತಿದ್ದ, ಹಾಗೂ ಹಲವಾರು ವಿಷಯಗಳನ್ನ ಅರಿತುಕೊಂಡಿದ್ದ ಒಮ್ಮೆ
ಜಿಲ್ಲಾಧಿಕಾರಿಗಳು ಆ ಪ್ರದೇಶವನ್ನ ಸರ್ವೆ ಮಾಡಲು ಬಂದಾಗ ಅವರು ಕೂಡ ಈ ಟೀ ಅಂಗಡಿಗೆ ಹೋಗಿ ಟೀಯನ್ನ ಕುಡಿದಿದ್ದರು, ಅವರಿಗೆ ಸಿಗುತ್ತಿದ್ದ ರಾಜಮರ್ಯಾದೆ ಅವರ ಹಿಂದೆ ಮುಂದೆ ಇದ್ದ ಹತ್ತಾರು ಪೊಲೀಸ್ ಅಧಿಕಾರಿಗಳು ಅವರು ಬಂದು ಇಳಿದಂತಹ ಆ ಕಾರು ಅವರ ಹಿಂದೆ ಎಸ್ ಸರ್, ಎಸ್ ಸರ್ ಅಂತ ತಿರುಗಾಡುತ್ತಿದ್ದ ಹತ್ತಾರು ಅಧಿಕಾರಿಗಳ ದಂಡನ್ನ ಕಂಡು ಈ ವ್ಯಕ್ತಿ ಈ ಊರಿನ ರಾಜ ಇರಬೇಕೆಂದು ರಂಜಿತ್ ಅಂದುಕೊಂಡಿದ್ದ, ನಿಜಕ್ಕೂ ಆ ಜಿಲ್ಲಾಧಿಕಾರಿಯನ್ನ ನೋಡಿ ರಂಜಿತ್ ಗೆ ಒಂತರ ಖುಷಿಯಾಗಿತ್ತು, ಜೀವನದಲ್ಲಿ ಈ ತರ ಒಬ್ಬ ವ್ಯಕ್ತಿ ಆಗಬೇಕೆಂದು ಅವನ ಮನಸ್ಸಿನಲ್ಲಿ ಮೊಳಕೆ ಹೊಡೆದಿದ್ದೆ ಆ ಒಂದು ಸಮಯದಲ್ಲಿ ಅಂತಾನೆ ಹೇಳಬಹುದು, ಈ ಜಿಲ್ಲಾಧಿಕಾರಿಗಳು ಹೋದ ನಂತರ
ರಂಜಿತ್ ಆ ಟೀಮ್ ಅಂಗಡಿ ಮಾಲಿಕ ನೀಲಕಂಠನಿಗೆ ಆ ಅಧಿಕಾರಿಯ ಬಗ್ಗೆ ಕೇಳಿದ್ದಾನೆ, ಆ ವ್ಯಕ್ತಿ ಯಾರು? ಯಾಕೆ ಅಷ್ಟೊಂದು ಆ ವ್ಯಕ್ತಿಗೆ ಮರ್ಯಾದೆ, ಯಾಕೆ ಅವನ ಹಿಂದೆ ಪೊಲೀಸರು ಓಡಾಡುತ್ತಾರೆ, ಅಧಿಕಾರಿಗಳು ಓಡಾಡುತ್ತಾರೆ ಅಂತ ಕೇಳ್ತಾನೆ, ಆಗ ಟೀ ಅಂಗಡಿ ಮಾಲಿಕ ನೀಲ್ಕಂಠ ಹೇಳಿದ್ದು ಆ ವ್ಯಕ್ತಿ ಬೇರೆ ಯಾರು ಅಲ್ಲ ಈ ಭಾಗದ ಜಿಲ್ಲಾಧಿಕಾರಿ ಡೆಪ್ಯೂಟಿ ಡಿಸ್ಟ್ರಿಕ್ಟ್ ಕಲೆಕ್ಟರ್ ಅಂತ ಹೇಳಿದ್ದಾನೆ, ಆಗ ರಂಜಿತ್ ಒಂದು ವೇಳೆ ಈ ರೀತಿಯಾಗಲು ನಾನು ಏನು ಮಾಡಬೇಕು ಅಂತ ಒಂದು ಸಿಂಪಲ್ ಆದಂತಹ ಪ್ರಶ್ನೆಯನ್ನ ನೀಲಕಂಠನಿಗೆ ಕೇಳಿದ್ದಾನೆ, ಆಗ ನೀಲಕಂಠ ಜೋರಾಗಿ ನಗ್ನ ನೀನು ಈ ಜನ್ಮದಲ್ಲಿ ಎಲ್ಲಾ ಮುಂದಿನ ಏಳು ಜನ್ಮಕ್ಕೂ ಇತರ ವ್ಯಕ್ತಿಯಾಗಲು ಜಿಲ್ಲಾಧಿಕಾರಿಯಾಗಲು

ಸಾಧ್ಯವಿಲ್ಲ ಅಂತ ಹೇಳಿ ಸುಮ್ನೆ ನೀನು ಈಗ ಹೋಗಿ ಟೇಬಲ್ ಕ್ಲೀನ್ ಮಾಡು ಅಂತ ಗದರಿಸುತ್ತಾನೆ, ಆದರೆ ಆ ಚಿಕ್ಕ ವಯಸ್ಸಿನ ಹುಡುಗನ ಮನಸ್ಸಿನಲ್ಲಿ ಯಾವ ರೀತಿ ಹಸಿ ಗೋಡೆಯಲ್ಲಿ ಕಲ್ಲು ನಾಟುತ್ತದೆಯೋ ಅದೇ ರೀತಿಯಲ್ಲಿ ಅವನ ಮನಸ್ಸಿನಲ್ಲಿ ಅವನ ಹೃದಯದಲ್ಲಿ ತಾನು ಕೂಡ ಒಬ್ಬ ಜಿಲ್ಲಾಧಿಕಾರಿ ಆಗಬೇಕೆನ್ನುವ ಕನಸು ತುಂಬಿಕೊಂಡಿದ್ದ ರಂಜಿತ್ ಜೀವನದಲ್ಲಿ ಈಗ ಒಂದೇ ಗುರಿಯಾಗಿತ್ತು, ಅದು ಹೇಗಾದರೂ ಮಾಡಿ ತಾನು ಕೂಡ ಒಂದಲ್ಲ ಒಂದು ದಿವಸ ಜಿಲ್ಲಾಧಿಕಾರಿ ಆಗಬೇಕೆಂದು, ಆದರೆ ಅವನಿಗೆ ಈಗಲೂ ಕೂಡ ಶಾಲೆಗೆ ಹೋಗಲು ಅವಕಾಶವಿರಲಿಲ್ಲ, ಇದೇ ಸಮಯದಲ್ಲಿ ಅವನ ಜೀವನದಲ್ಲಿ ಇನ್ನೊಂದು ಬಿರುಗಾಳಿ ಬಂದು ಬಡಿಯುತ್ತೆ ಅಂತಾನೆ ಹೇಳಬಹುದು, ಹೌದು ಗೆಳೆಯರೆ ಅವನನ್ನ ಸಾಕಿದಂತಹ ಮಂಜಮ್ಮ ಉಸಿರಾಟದ
ತೊಂದರೆಯಿಂದ ಮತ್ತು ತಕ್ಕ ಸಮಯಕ್ಕೆ ಚಿಕಿತ್ಸೆ ಸಿಗದಿದ್ದ ಕಾರಣ ಸಾ’ವನಪ್ಪುತ್ತಾಳೆ, ಇದು ರಂಜಿತ್ ನ ಜೀವನದಲ್ಲಿ ದೊಡ್ಡದಾದಂತಹ ಒಂದು ಆ’ಘಾತವೇ ಆಗಿತ್ತು, ಈ ನಡುವೆ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮಾಲಿಕ ಕೂಡ ಅವನನ್ನ ಕೆಲಸದಿಂದ ಹೊರಗೆ ಹಾಕಿದ್ದಾನೆ, ಯಾಕಂದ್ರೆ ರಂಜಿತ್ ಓದಿನ ಕಡೆಗೆ ಜಾಸ್ತಿ ಗಮನ ಇತ್ತು, ಕೆಲಸದ ಮೇಲೆ ಇರಲಿಲ್ಲ, ಮುಂದೆ ಅಲ್ಲಿ ಇಲ್ಲಿ ಸಿಕ್ಕ ಸಿಕ್ಕ ಕೆಲಸಗಳನ್ನ ಮಾಡುತ್ತಾ ಓದಿನ ಕಡೆಗೆ ರಂಜಿತ್ ಜಾಸ್ತಿ ಗಮನ ಕೊಟ್ಟಿದ್ದಾನೆ, “ಇದಕ್ಕೆ ಹೇಳ್ತಾರೆ ಸ್ನೇಹಿತರೆ ಮನಸ್ಸಿದ್ದರೆ ಮಾರ್ಗ ಅಂತ” ರಂಜಿತ್ ತಾನು ಅಂದುಕೊಂಡ ಹಾಗೆ ಜಿಲ್ಲಾಧಿಕಾರಿ ಆಗಬೇಕೆಂದು ಅದಕ್ಕೆ ಏನು ಬೇಕು ಏನು ಮಾಡಬೇಕು ಅನ್ನೋದನ್ನ ಒಂದೊಂದಾಗಿ ತಿಳಿದುಕೊಂಡಿದ್ದಾನೆ
ಅಷ್ಟೇ ಅಲ್ಲದೆ ಕೆಲವು ಸ್ನೇಹಿತರ ಜೊತೆ ಪಕ್ಕದಲ್ಲಿದ್ದ ಶಾಲೆಯ ಮಿನಿಸ್ಟರ್ ಗಳ ಹತ್ತಿರ ಕೂಡ ಮಾತಾಡಿದ್ದಾನೆ, ಅವರು ಕೊಟ್ಟ ಮಾರ್ಗದರ್ಶನದ ನಂತರ 10ನೇ ತರಗತಿಯನ್ನ ಪಾಸ್ ಮಾಡಿಕೊಂಡಿದ್ದಾನೆ, ಮುಂದೆ ಸ್ಕಾಲರ್ಶಿಪ್ ಪಡೆದು ಡಿಗ್ರಿಯನ್ನು ಕೂಡ ಮುಗಿಸಿದ್ದಾನೆ, ಹೀಗೆ ಯಾವುದೇ ಕೋಚಿಂಗ್ ಇಲ್ಲದೆ ಸ್ವಂತ ಬಲದಿಂದ ರಂಜಿತ್ ಮುಂದೆ ಓದಿ ಎರಡು ಅಟೆಂಪ್ಟ್ ಅಲ್ಲೇ ಯುಪಿಎಸ್ಸಿ ಎಕ್ಸಾಮ್ ಅಂದ್ರೆ ಐಎಎಸ್ ಎಕ್ಸಾಮ್ ಬರೆಯಲು ಬೇಕಾದ ಪರೀಕ್ಷೆಯ ಸಂದರ್ಶನವನ್ನು ಕೂಡ ಒಳ್ಳೆಯ ಮಾರ್ಕ್ಸ್ ಪಡೆದು ಇಡೀ ದೇಶಕ್ಕೆ 91ನೇ ರಾಂಕ್ ಪಡೆದು ಒಬ್ಬ ಜಿಲ್ಲಾಧಿಕಾರಿಯಾಗಲು ಸಜ್ಜಾಗಿದ್ದ, ಹೌದು ಮನಸ್ಸು ಮಾಡಿದರೆ ದೇವರು ತನ್ನನ್ನು ತಾನೇ ದಾರಿಯನ್ನು ತೋರಿಸ್ತಾನೆ ಅನ್ನೋದಕ್ಕೆ ಇದಕ್ಕಿಂತ ದೊಡ್ಡ
ಉದಾಹರಣೆ ಇಲ್ಲ, ವೀಕ್ಷಕರೇ ತನ್ನ ಐಎಎಸ್ ಟ್ರೈನಿಂಗ್ ಮುಗಿಸಿದ ಮೇಲೆ ರಂಜಿತ್ ಮೊದಲು ಅಪಾಯಿಂಟ್ಮೆಂಟ್ ಸಿಕ್ಕಿದ್ದೆ ಕನ್ಯಾಕುಮಾರಿಯಲ್ಲಿ, ಎರಡುವರೆ ವರ್ಷ ಕೆಲಸ ಮಾಡಿದಮೇಲೆ ಚೆನ್ನೈಗೆ ರಂಜಿತ್ ಗೆ ಟ್ರಾನ್ಸ್ಫರ್ ಆಗುತ್ತೆ, ಹೌದು ನನಗೆ ರೆಕ್ಕೆಪುಕ್ಕ ಕೊಟ್ಟಿದ್ದೆ ಈ ಊರು ಅಂತ ಆತನಿಗೆ ತುಂಬಾ ಖುಷಿಯಾಗುತ್ತೆ, ಹೀಗಾಗಿ ಚೆನ್ನೈನ ಜಿಲ್ಲಾಧಿಕಾರಿ ಆದ ತಕ್ಷಣ ಮೊದಲಿಗೆ ಭೇಟಿ ಕೊಟ್ಟಿದ್ದೆ ತಾನು ಕೆಲಸ ಮಾಡುತ್ತಿದ್ದಂತಹ ಆ ಒಂದು ಟೀ ಅಂಗಡಿಗೆ, ಹಿಂದೆ ಹೇಗೆ ಒಬ್ಬ ತನ್ನ ಟೀ ಅಂಗಡಿಗೆ ಒಬ್ಬ ಜಿಲ್ಲಾಧಿಕಾರಿ ಬಂದು ಟೀ ಕುಡಿಯಲು ಬಂದಿದ್ನೋ ಅದೇ ರೀತಿ ಅದೇ ಶೈಲಿಯಲ್ಲಿ ಅದೇ ರೀತಿ ಪೊಲೀಸರೊಂದಿಗೆ ಅದೇ ರೀತಿ ಅಧಿಕಾರಿಗಳೊಂದಿಗೆ ಆ

ಟೀ ಅಂಗಡಿಗೆ ನುಗ್ಗಿದ್ದಾನೆ, ನುಗ್ಗುತ್ತಿದ್ದ ಹಾಗೆ ಆ ಟೀ ಅಂಗಡಿ ಟೇಬಲ್ ಅನ್ನ ಕ್ಲೀನ್ ಮಾಡಲು ರಂಜಿತ್ ಪ್ರಾರಂಭಿಸಿದ್ದಾನೆ, ಇದನ್ನ ನೋಡಿದಂತಹ ಆ ಟೀ ಅಂಗಡಿ ಮಾಲಿಕ ನೀಲಕಂಠ ಕೂಡ ಶಾಕ್ ಆಗ್ತಾನೆ, ಯಾಕೆ ಈ ಒಬ್ಬ ಜಿಲ್ಲಾಧಿಕಾರಿ ಈ ರೀತಿ ಬಂದು ತನ್ನ ಅಂಗಡಿಯಲ್ಲಿ ಕೆಲಸ ಮಾಡ್ತಿದ್ದಾನೆ ಅಂತ, ಮೆಲ್ಲಗೆ ಹೋಗಿ ಅಧಿಕಾರಿಗಳ ಬಳಿ ನಿಂತು ಯಾಕ್ ಸರ್ ನನ್ನ ಅಂಗಡಿಯಲ್ಲಿ ನೀವು ಕೆಲಸ ಮಾಡ್ತಿದ್ದೀರಾ ಅಂತ ಕೇಳಿದ್ದಾನೆ, ರಂಜಿತ್ ತಿರುಗಿ ನೀಲಕಂಠನನ್ನ ಜೋರಾಗಿ ಅಪ್ಪಿಕೊಂಡಿದ್ದಾನೆ, ಯಾವಾಗ ರಂಜಿತ್ ನೀಲಕಂಠನನ್ನ ಅಪ್ಪಿಕೊಂಡನೋ ಆಗ ನೀಲಕಂಠನಿಗೆ ಗೊತ್ತಾಗಿ ಹೋಗುತ್ತೆ ಇದು ಬೇರೆ ಯಾರು ಅಲ್ಲ, ಹಿಂದೆ ತಾನು ಗದರಿಸಿ ಓಡಿಸಿದಂತಹ ಹುಡುಗ ರಂಜಿತ್ ಅಂತ,
ನೀಲಕಂಠನ ಕಣ್ಣಲ್ಲಿ ನದಿ ಹರಿದ ಹಾಗೆ ಪನ್ನೀರು ಹರಿದು ಬರುತ್ತೆ, ರಂಜಿತ್ ಆ ನೀಲಕಂಠನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ್ದಾನೆ, ನೀವು ಅಂದು ಆ ರೀತಿ ಬೈದಿದ್ದಕ್ಕೆ ನನ್ನ ಮನಸ್ಸಿನಲ್ಲಿ ಛಲ ಹುಟ್ಟಿತ್ತು ಅದನ್ನೇ ನಾನು ಪ್ರೇರಣೆಯಾಗಿ ತೆಗೆದುಕೊಂಡು ಇವತ್ತು ಜಿಲ್ಲಾಧಿಕಾರಿಯಾಗಿದ್ದೇನೆ, ಅದಕ್ಕೆ ನಿಮಗೆ ಧನ್ಯವಾದ ಹೇಳೋಕೆ ಅಂತಾನೆ ಬಂದಿದ್ದೇನೆ ಅಂತ ರಂಜಿತ್ ಹೇಳ್ತಾ ಇದ್ದಾನೆ, ಇದನ್ನು ನೋಡಿದ ಅಕ್ಕಪಕ್ಕದ ಜನ ಹಾಗೂ ಅಧಿಕಾರಿಗಳೆಲ್ಲ ಬೆಚ್ಚಿಬಿದ್ದಿದ್ರು ಹೌದು ವೀಕ್ಷಕರೇ ನಾವು ಯಾವುದೇ ಒಂದು ಕೆಲಸವನ್ನ ಮಾಡುವಾಗ ಹಲವಾರು ಜನ ನಮ್ಮನ್ನು ಹೀಯಾಳಿಸುವುದು ಸಾಮಾನ್ಯ ಅದನ್ನ ನಾವು ತಪ್ಪು ತಿಳಿಯದೆ ನಾವು ಮಾಡುವ ಮಾರ್ಗದಲ್ಲಿ ಮುನ್ನುಗ್ಗಬೇಕು ಆಗ ನಾವು ಅಂದುಕೊಂಡ ಕನಸು ನನಸಾಗುತ್ತೆ ಅನ್ನೋದಕ್ಕೆ ಈ ಒಂದು ಸತ್ಯ ಘಟನೆಯೇ ಸಾಕ್ಷಿಯಾಗಿದೆ,
“ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.? ಮತ್ತೊಬ್ಬರಿಗೂ ಶೇರ್ ಮಾಡಿ..!”
- Air India Plane ಗಣಪತಿ ಪೂಜೆ ಮಾಡಿ ಹೋದಳು ಬದುಕಿ ಬಂದಳು.! ಪೂರ್ತಿ ವಿಮಾನ ಸುಟ್ಟರು ಪವಾಡದಂತೆ ಬದುಕಿದ್ದು ಹೇಗೆ? |
- ನಡುಕ ಹುಟ್ಟಿಸುವಂತಹ ವಿಮಾನ ಅ’ಪಘಾ’ತ ..! ಈ ಒಂದು ಚಿಕ್ಕ ಕಾರಣಕ್ಕೆ ನಡೆಯಿತು ನೋಡಿ | Ahmedabad Plane Crash LIVE |
- ತಮ್ಮನ ಹೊಲದಲ್ಲಿ ಅಣ್ಣನಿಗೆ ಸಿಕ್ತು ಚಿನ್ನದ ಭಂಡಾರ | ಆದ್ರೆ ಅಣ್ಣ ಮಾಡಿದ್ದು ಕೇಳಿದರೆ ನೀವು ಕೂಡ…! Gold News
- Kohli Cries After Winning IPL For 1st Time | 18ನೇ ಆವೃತ್ತಿ….18 ವರ್ಷಗಳ ನೆನಪು…ಒಮ್ಮೆಲೆ ನೆನೆದು ಮೈದಾನದಲ್ಲೇ ಕಣ್ಣಿರಿಟ್ಟ ಕೊಹ್ಲಿ!
- RCBಗೆ ಹೊಸ ನಾಯಕನೇ ಅದೃಷ್ಟ ತಂದುಕೊಟ್ಟನಾ? ಕ್ಯಾಪ್ಟನ್ ಆಗಿ ಸಕ್ಸಸ್ ಪ್ಲೇಯರ್ ಆಗಿ ಫೇಲ್.!