Karnataka Bike Taxi: ಇಷ್ಟು ದಿನ ಆಟೋ ಕ್ಯಾಬ್ ನವರಿಗೂ ರಾಪಿಡೋ ಬೈಕ್ ಟ್ಯಾಕ್ಸಿನವರಿಗೂ ಜಟಾಪಟಿ ನಡೀತಾನೆ ಬಂತು, ಕಡೆಗೂ ಹೈಕೋರ್ಟ್ ಇದರ ಬಗ್ಗೆ ಒಂದು ತೀರ್ಪನ್ನ ಕೊಟ್ಟಿದೆ, ಅದೇನಪ್ಪಾ ಅಂದ್ರೆ ಕರ್ನಾಟಕ ರಾಜ್ಯ ಸರ್ಕಾರವು ಮೋಟಾರ್ ವಾಹನ ಕಾಯ್ದೆಯ 93 ಸೆಕ್ಷನ್ ಅಡಿಯಲ್ಲಿ ಹೊಸ ನಿಯಮಗಳು ಮಾರ್ಗಸೂಚಿಗಳನ್ನ ಹೊರಡಿಸುವ ತನಕ ಈ ಯಾವುದೇ ಬೈಕ್ ಟ್ಯಾಕ್ಸಿ ಕಂಪನಿಗಳು ಕಾರ್ಯ ನಿರ್ವಹಿಸುವಂತಿಲ್ಲ ಸೋ ಇನ್ನು ಆರು ವಾರದೊಳಗೆ ಈ ಕಂಪನಿಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳುವಂತೆ ನೋಡ್ಕೋಬೇಕು ಅಂತ ರಾಜ್ಯ ಸರ್ಕಾರಕ್ಕೆ ಹಾಗೂ ಸಾರಿಗೆ ಇಲಾಖೆಗೆ ಕೋರ್ಟ್ ತಿಳಿಸಿದೆ, ಹಾಗೆ ಈ ವಿಚಾರವಾಗಿ ಸರ್ಕಾರದಿಂದ ಸರಿಯಾದ ಮಾರ್ಗಸೂಚಿ ಬರೋ ತನಕ ಆರ್ಟಿಓ ಡಿಪಾರ್ಟ್ಮೆಂಟ್ ನವರು
ಬೈಕ್ಗಳಿಗೆ ಟ್ರಾನ್ಸ್ಪೋರ್ಟ್ ವೆಹಿಕಲ್ ಲೈಸೆನ್ಸ್ ಅಥವಾ ಕಾಂಟ್ರಾಕ್ಟ್ ಕ್ಯಾರೇಜ್ ಪರ್ಮಿಟ್ ಕೊಡೋದಾಗಲಿ ಮಾಡೋಹಂಗಿಲ್ಲ ಅಂತ ಕೋರ್ಟ್ ಹೇಳಿದೆ, ಹಂಗಂದ್ರೆ ಇನ್ಮೇಲೆ ಕಂಪ್ಲೀಟ್ ಆಗಿ ಬೈಕ್ ಟ್ಯಾಕ್ಸಿ ಸರ್ವಿಸ್ ಇರೋದೇ ಇಲ್ವಾ? ಈ ರಾಪಿಡೋ ಉಬರ್ ಇಲ್ಲ ಅಂದ್ರೆ ಪಾಪ ಯುವಕರ ಹೊಟ್ಟೆಪಾಡ್ ಹೆಂಗೆ ನಡಿಬೇಕು, ಎಷ್ಟೊಂದು ಜನ ನಿರುದ್ಯೋಗಿಗಳು ಬೈಕ್ ಟ್ಯಾಕ್ಸಿ ಅನ್ನೋದನ್ನ ಜೀವನಕ್ಕೆ ಆಧಾರ ಮಾಡಿಕೊಂಡಿದ್ರು, ಈಗ ಅವರ ಕಥೆಯಎಲ್ಲ ಏನಾಗಬೇಕು? ಅಂತ ಕೆಲವರು ಕೇಳಬಹುದು, ಆಕ್ಚುಲಿ ಇಲ್ಲಿ ಹೈಕೋರ್ಟ್ ಈ ಕಂಪನಿಗಳಿಗೆ ಹೇಗೆ ಸರ್ವಿಸ್ ನ್ನ ನಿಲ್ಲಿಸಲಿಕ್ಕೆ ಕಾಲಾವಕಾಶ ಕೊಟ್ಟಿದೆಯೋ ಹಂಗೆ ಸರ್ಕಾರಕ್ಕೂ ಆದಷ್ಟು ಬೇಗ ಮಾರ್ಗಸೂಚಿಗಳನ್ನ
ಹೊರಡಿಸಿ ಅಂತ ಹೇಳಿದೆ ಹಾಗೇನೇ ಗಡವು ಕೊಟ್ಟಿರೋ ದಿನಾಂಕದ ತನಕ ಕಂಪನಿಗಳ ಮೇಲೆ ಅಥವಾ ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಯಾವುದೇ ರೀತಿ ಅಡ್ವಾನ್ಸ್ ಆಕ್ಷನ್ ತಕೊಳ್ಳು ಹಂಗಿಲ್ಲ ಅಂತ ಆರ್ಟಿಓ ಗೆ ತಿಳಿಸಿದ್ದಾರೆ, ಹಂಗಾಗಿ ದಯವಿಟ್ಟು ಕ್ಯಾಬ್ ನವರು ಆಟೋದವರು ತಾಳ್ಮೆಯಿಂದ ವರ್ತಿಸಬೇಕು, ಕೊಟ್ಟಿರೋ ಟೈಮ್ ಮುಗಿಯೋದರೊಳಗೆ ಬೈಕ್ ಟ್ಯಾಕ್ಸಿ ಹುಡುಗರನ್ನ ಹಿಡಿದು ಹೊಡೆಯೋದು ಹೆದುರಿಸೋದು ಬೆದರಿಸೋದು ಮಾಡಬೇಡಿ, ಆ ಕೊಟ್ಟಿರೋ ಡೇಟ್ ಮುಗಿದಮೇಲು ಯಾರಾದ್ರೂ ಇನ್ನು ಬೈಕ್ ಟ್ಯಾಕ್ಸಿ ಮಾಡ್ತಿದ್ದಾರೆ ಅಂದ್ರೆ ಆಗ ಕಾನೂನು ಕ್ರಮ ಏನು ತಗೋಬಹುದು ತಗೊಳಿ, ನಮ್ಮ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಆರಂಭ ಆಗಿದ್ದು 2016ರಲ್ಲಿ ಆದರೆ ಈ ವಿಚಾರವಾಗಿ ಆಟೋ
ಕ್ಯಾಬ್ ಬೈಕ್ ಟ್ಯಾಕ್ಸಿ ನವರುಗಳ ನಡುವೆ ಜಟಾಪಟಿ ಶುರುವಾಗಿದ್ದು 2019 ರಲ್ಲಿ ಸೋ ಬರೋಬ್ಬರಿ ಐದಾರು ವರ್ಷಗಳಿಂದ ಹಗ್ಗ ಜಗ್ಗಾಟ ನಡ್ಕೊಂಡು ಬರ್ತಾನೆ ಇದೆ, ಒಂದು ಸಲ ಈ ಬೈಕ್ ಟ್ಯಾಕ್ಸಿ ಸರ್ವಿಸ್ ನಿಲ್ಲಿಸಬೇಕು ಅಂತ ನಮ್ಮ ಸರ್ಕಾರ ಆದೇಶ ಮಾಡಿತ್ತು ಆಮೇಲೆ ಗಾಡಿಗಳನ್ನ ಆರ್ಟಿಓ ದವರು ಸೀಸ್ ಮಾಡ್ತಿದ್ದಾರೆ, ಅನ್ನೋ ನ್ಯೂಸ್ಗಳು ಹರದಾಡಿತ್ತು ಅದಾದಮೇಲೆ ಈ ಬೈಕ್ ಟ್ಯಾಕ್ಸಿ ಕಂಪನಿಗಳು ಕೋರ್ಟ್ನಿಂದ ಸ್ಟೇ ತಗೊಂಡು ಬಂದ್ರು ಸೋ ಕೋರ್ಟ್ ಬೈಕ್ ಟ್ಯಾಕ್ಸಿ ಚಾಲಕರಿಗೆ ಆಟೋದವರು ಕ್ಯಾಬ್ ನವರು ತೊಂದರೆ ಕೊಡೋಹಂಗಿಲ್ಲ ಮುಂದಿನ ಆದೇಶದವರೆಗೆ, ಇದು ಹಿಂಗೆ ನಡ್ಕೊಂಡು ಹೋಗ್ತಾ ಇರ್ಲಿ ಅಂತ ಹೇಳಿತ್ತು ಇದರು ಮಧ್ಯಾನು ಆಟೋದವರು ಅಲ್ಲಲ್ಲಿ ಬೈಕ್ ಟ್ಯಾಕ್ಸಿಗಳ ಮೇಲೆ ಹಲ್ಲೆ
ಮಾಡೋದು ಅವರನ್ನ ಹೊಡೆಯೋದು ಹೆದುರಿಸೋದು ಮಾಡ್ತಾನೆ ಇದ್ರು ಲಿಟ್ರಲಿ ಆಟೋ ಕ್ಯಾಬ್ ನವರು ಹಾಗೂ ಬೈಕ್ ಟ್ಯಾಕ್ಸಿನವರು ಒಂತರ ಬದ್ದ ವೈರಿಗಳ ತರ ಆಗೋಗಿದ್ದಾರೆ ಕಾನೂನಾತ್ಮಕವಾಗಿ ನೋಡಿದಾಗ ಇವರು ಕೇಳೋದು ಸರಿ ಇದ್ರುವೇ ಮಾನವೀಯತೆ ದೃಷ್ಟಿಯಲ್ಲಿ ನೋಡಿದಾಗ ಇವರು ಕೇಳೋದು ಸರಿ ಅನ್ಸುತ್ತೆ ಅಂಡ್ ಜನಗಳು ಕೂಡ ಅತಿ ಹೆಚ್ಚು ಬೈಕ್ ಟ್ಯಾಕ್ಸಿಗೆ ಸಪೋರ್ಟ್ ಮಾಡ್ತಿದ್ರು ಮಾಡದೆ ಇನ್ನೇನು ಮಾಡ್ತಾರೆ ತಮಗೆ ಯಾವುದು ಕಡಿಮೆ ದರದಲ್ಲಿ ಸಿಗುತ್ತೋ ಯಾವುದರಲ್ಲಿ ಟೈಮ್ ಸೇವ್ ಆಗುತ್ತೋ ಅದನ್ನ ತಾನೇ ಇಷ್ಟ ಪಡ್ತಾರೆ, ಕರೆಕ್ಟ್ ಅಲ್ಟಿಮೇಟ್ಲಿ ಇಲ್ಲಿ ನಡೆಯೋದು ಕಾನೂನು ಸೋ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು,
ಎಲ್ಲಾ ರಾಜ್ಯದಲ್ಲಿ ಶುರುವಾಗೋಕೆ ಕಾರಣ ಕೇಂದ್ರ ಸರ್ಕಾರ ಮಿನಿಸ್ಟ್ರಿ ಆಫ್ ರೋಡ್ ಟ್ರಾನ್ಸ್ಪೋರ್ಟ್ ಅಂಡ್ ಹೈವೆ ಇವರು 2016ರಲ್ಲಿ ಒಂದು ಕಮಿಟಿ ರಚನೆ ಮಾಡಿ ಬೈಕ್ ಟ್ಯಾಕ್ಸಿ ಪಾಲಿಸಿ ಬಗ್ಗೆ ಒಂದಷ್ಟು ಸಲಹೆಗಳನ್ನ ಕೇಳ್ತಾರೆ, ಈ ಕಮಿಟಿ 2016 ರಲ್ಲಿ ತಮ್ಮ ವರದಿನ ಸಲ್ಲಿಸುತ್ತಾರೆ ಆ ವರದಿಯಲ್ಲಿ ಮುಖ್ಯವಾದ ಅಂಶಗಳೇನಂದ್ರೆ ರಾಜ್ಯ ಸರ್ಕಾರಗಳು ಬೈಕ್ ಶೇರಿಂಗ್ ಹಾಗೂ ಈ ರಿಕ್ಷಾ ಸೇವೆಗಳಿಗೆ ಉತ್ತೇಜನ ಕೊಡಬೇಕು ಹಾಗೂ ಮೋಟಾರ್ ಸೈಕಲ್ ಗಳಿಗೆ ಕಾಂಟ್ರಾಕ್ಟ್ ಕ್ಯಾರಿಯೇಜ್ ಪರ್ಮಿಷನ್ ಅಂದ್ರೆ ಬೈಕ್ ಟ್ಯಾಕ್ಸಿಗಳಿಗೆ ಪರ್ಮಿಷನ್ ಕೊಡಬೇಕು ಇದರ ಮೂಲಕ ಸಾರಿ ಸಾರಿಗೆ ಇಲಾಖೆಯ ಸಾಮರ್ಥ್ಯ ಏನು ಅನ್ನೋ ಬಗ್ಗೆ ಅವೇರ್ನೆಸ್ ಹೆಚ್ಚಾಗಬೇಕು ಅಂತ
ಹೇಳ್ತಾರೆ ಇದರ ಆಧಾರದ ಮೇಲೆನೇ ಕೆಲವೊಂದು ಬೈಕ್ ಟ್ಯಾಕ್ಸಿ ಕಂಪನಿಗಳು 2016ರಲ್ಲಿ ಲೈಸೆನ್ಸ್ ಪಡ್ಕೊಂಡು ನಮ್ಮ ರಾಜ್ಯದಲ್ಲಿ ಪ್ರಥಮ ಬಾರಿಗೆ ತಮ್ಮ ಸೇವೆಯನ್ನ ಆರಂಭ ಮಾಡ್ತಾರೆ ಈಗ ನಾನು ನಿನ್ನ ನಂಬಕೊಂಡು ಟ್ರಾವೆಲ್ಸ್ ನ ಶುರು ಮಾಡಿದ್ದೀನಿ ಇದಾದಮೇಲೆ ನಮ್ಮ ರಾಜ್ಯ ಸರ್ಕಾರ ಕೂಡ 2018ರಲ್ಲಿ ಒಂದು ಕಮಿಟಿ ರಚನೆ ಮಾಡಿ ಬೆಂಗಳೂರಲ್ಲಿ ಬೈಕ್ ಟ್ಯಾಕ್ಸಿ ಅವಶ್ಯಕತೆ ಇದೆಯಾ ಇಲ್ವಾ ಅನ್ನೋದರ ಬಗ್ಗೆ ವರದಿ ಕೊಡಿ ಅಂತ ಹೇಳುತ್ತೆ 2019 ರಲ್ಲಿ ಈ ಕಮಿಟಿ ಒಂದು ವರದಿ ಕೊಡ್ತಾರೆ ಈ ವರದಿ ಪ್ರಕಾರ ಬೈಕ್ ಟ್ಯಾಕ್ಸಿಗೆ ಪರ್ಮಿಷನ್ ಕೊಡೋದ್ರಿಂದ ಅಡ್ವಾಂಟೇಜಸ್ ಗಳು ಬಂದು ಕಡಿಮೆ ಬೆಲೆ ಕಡಿಮೆ ಸಮಯ ಹಾಗೂ ನಗರದ ಮೂಲೆ ಮೂಲೆಗೂ ಈ ಸರ್ವಿಸ್ ತಲುಪುತ್ತೆ ಅನ್ನೋದು ಅದೇ
ಈ ವರದಿ ಪ್ರಕಾರ ಡಿಸ್ಅಡ್ವಾಂಟೇಜಸ್ ಗಳು ಏನಂದ್ರೆ ಬೈಕ್ ಟ್ಯಾಕ್ಸಿಗಳಿಂದ ಬೇರೆ ಎಲ್ಲಾ ಪಬ್ಲಿಕ್ ಟ್ರಾನ್ಸ್ಪೋರ್ಟ್ ಗಳಿಗೆ ಹೊಡೆತಾ ಬೀಳುತ್ತೆ ಪಾರ್ಕಿಂಗ್ ಸಮಸ್ಯೆ ಆಗುತ್ತೆ ಒಂದು ವಾಹನದಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಕೂರಬಹುದಾದ್ದರಿಂದ ಅನಾವಶ್ಯಕವಾಗಿ ರಸ್ತೆಯಲ್ಲಿ ವೆಹಿಕಲ್ಗಳ ಓಡಾಟ ಇದರಿಂದ ರಸ್ತೆಯಲ್ಲಿ ಅಡಚಣೆ ಉಂಟಾಗೋದು ವಾಯುಮಾಲಿನ್ಯ ಹೆಚ್ಚಾಗೋದು ಇದಲ್ಲದೆ ಬೈಕ್ ಟ್ಯಾಕ್ಸಿನ ನಲ್ಲಿ ಸುರಕ್ಷತೆ ಹಾಗೂ ಭದ್ರತೆ ಇಲ್ಲ ಅಂತ ಹೇಳ್ತಾರೆ ಫೈನಲ್ ಆಗಿ ಈ ಕಮಿಟಿಯ ಸಾರಾಂಶ ಏನಾಗಿರುತ್ತೆ ಅಂದ್ರೆ ಬೈಕ್ ಟ್ಯಾಕ್ಸಿ ಸರ್ವಿಸಿನ ಅವಶ್ಯಕತೆ ಬೆಂಗಳೂರಂತ ನಗರಕ್ಕೆ ಇರೋದಿಲ್ಲ ಈಗಾಗಲೇ ಅನೇಕ ರೀತಿಯ ಸಂಚಾರಿ ವ್ಯವಸ್ಥೆಗಳು ಇರೋದ್ರಿಂದ ಈ ಸೇವೆ ಇಲ್ಲಿಗೆ
ಅನಾವಶ್ಯಕ ಇದರಿಂದ ಅನುಕೂಲಕ್ಕಿಂತ ಅನಾನುಕೂಲ ಜಾಸ್ತಿ ಸೋ ಬೈಕ್ ಟ್ಯಾಕ್ಸಿಗಳಿಗೆ ಪರ್ಮಿಷನ್ ಕೊಡಬೇಡಿ ಹಾಗೂ ಈಗಾಗಲೇ ನಡೀತಾ ಇರೋ ಬೈಕ್ ಟ್ಯಾಕ್ಸಿ ಸೇವೆಗಳನ್ನ ಸ್ಥಗಿತಗೊಳಿಸಿ ಅಂತ ಹೇಳ್ತಾರೆ ಇದಾದಮೇಲೆ ನಮ್ಮ ರಾಜ್ಯ ಸರ್ಕಾರ ಇದೆಲ್ಲದಕ್ಕೂ ಒಂದು ಪರಿಹಾರ ಅನ್ನೋ ರೀತಿ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಸ್ಕೀಮ್ ಅನ್ನ 2021 ರಲ್ಲಿ ಜಾರಿ ಮಾಡ್ತಾರೆ ಬಟ್ ಈ ಸ್ಕೀಮ್ ಅನ್ವಯ ಆಗೋದು ಕೇವಲ ಎಲೆಕ್ಟ್ರಿಕ್ ಬೈಕ್ ಗಳಿಗೆ ಮಾತ್ರ ಅಂದ್ರೆ ಈ ಬೈಕ್ಗಳನ್ನ ಹೊರತುಪಡಿಸಿ ಬೇರೆ ಬೈಕ್ಗಳಿಗೆ ಲೈಸೆನ್ಸ್ ಕೊಡೋದಿಲ್ಲ ಬೇರೆ ಬೈಕ್ಗಳನ್ನ ಟ್ಯಾಕ್ಸಿ ಸೇವೆಗೆ ಬಳಸುವಂತಿಲ್ಲ ಅಂತ ಹೇಳ್ತಾರೆ ಇಲ್ಲಿ ತನಕ ಹೇಗೋ ತಮ್ಮ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸಿಕೊಂಡು ಬಂದಿದ್ದ
ಕಂಪನಿಗಳಿಗೆ ನಮ್ಮ ರಾಜ್ಯ ಸರ್ಕಾರದ ಈ ಟ್ಯಾಕ್ಸಿ ಸ್ಕೀಮ್ ತೊಡಕಾಗುತ್ತೆ ನಮ್ಮ ರಾಜ್ಯ ಸರ್ಕಾರನೇ ಬೈಕ್ಗಳನ್ನ ಟ್ಯಾಕ್ಸಿಗಳನ್ನಾಗಿ ಬಳಸೋಹಂಗಿಲ್ಲ ಅಂತ ಹೇಳ್ತಿದ್ರುವೆ ಅದು ಹೆಂಗೆ ಈ ಕಂಪನಿಗಳು ಇನ್ನು ಆಪರೇಟ್ ಮಾಡ್ತಿದ್ದಾರೆ ಅಂತ ರೊಚ್ಚಿಗೆದ್ದ ಆಟೋ ಹಾಗೂ ಕ್ಯಾಬ್ ಯೂನಿಯನ್ ಅವರು ಇದನ್ನ ಹಿಂಗೆ ಬಿಟ್ಟರೆ ಸರಿ ಹೋಗೋದಿಲ್ಲ ನಾವೇ ಏನಾದ್ರೂ ಮಾಡಬೇಕು ಅಂತ ಹೇಳಿ ಅಲ್ಲಲ್ಲಿ ಬೈಕ್ ಟ್ಯಾಕ್ಸಿಗಳನ್ನ ನಿಲ್ಿಸಿ ಹೆದುರಿಸೋದು ಗಾಡಿಗಳನ್ನ ಹಿಡಿದು ಆರ್ಟಿಓಗೆ ಒಪ್ಪಿಸೋದು ಹುಡುಗರಿಗೆ ಭಯ ಹುಟ್ಸೋದು ಈ ರೀತಿ ಮಾಡೋಕೆ ಶುರು ಮಾಡಿದ್ರು ಯಾವಾಗ ಈ ರೀತಿ ಜಗಳಗಳು ಹೆಚ್ಚಾದ್ವೋ ದಿನ ಈ ರೀತಿ ನ್ಯೂಸ್ಗಳು ಬರೋಕೆ ಶುರುವಾದದ್ವೋ ಯಾವಾಗ ಜನ ಸರ್ಕಾರಕ್ಕೆ ಉಗಿಯೋಕೆ ಶುರು
ಮಾಡಿದ್ರೋ ಆಗ ನಮ್ಮ ರಾಜ್ಯ ಸರ್ಕಾರ ಒಂದು ನಿರ್ಧಾರಕ್ಕೆ ಬರ್ತಾರೆ ಈ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿ ಅವಕಾಶ ಕೊಟ್ಟಿರೋದಕ್ಕೆ ಅಲ್ವೇ ಕೆಲವರು ಈ ಸ್ಕೀಮ್ ಅನ್ನ ದುರುಪಯೋಗ ಪಡಿಸಿಕೊಂಡು ಎಲ್ಲಾ ಬೈಕ್ಗಳನ್ನು ಟ್ಯಾಕ್ಸಿಗೆ ಬಳಸ್ತಾ ಇರೋದು ಸೋ ಇನ್ಮೇಲೆ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳು ಕೂಡ ಇರೋಹಂಗಿಲ್ಲ ಅಂತ ಹೇಳಿ ಕಳೆದ ವರ್ಷ ಈ ಬೈಕ್ ಟ್ಯಾಕ್ಸಿ ಸ್ಕೀಮ್ ನ್ನ ರದ್ದು ಮಾಡಿಬಿಟ್ರು ಈ ರೀತಿ ಆಗಿರೋದು ನಮ್ಮ ರಾಜ್ಯದಲ್ಲೇ ಮೊದಲೇನಲ್ಲ 2022 ರಲ್ಲಿ ಇದೇ ರೀತಿ ಮಹಾರಾಷ್ಟ್ರ ಸರ್ಕಾರ ಕೂಡ ಬೈಕ್ ಟ್ಯಾಕ್ಸಿಯನ್ನ ರದ್ದು ಮಾಡಿತ್ತು ಅದಾದಮೇಲೆ ರಾಪಿಡೋನ್ ಅವರು ಬಾಂಬೆ ಹೈಕೋರ್ಟ್ನಲ್ಲಿ ಈ ವಿಚಾರದ ಬಗ್ಗೆ ಅಪೀಲ್ ಹೋಗಿದ್ರು ಆದರೆ 2023 ರಲ್ಲಿ ಬಾಂಬೆ ಹೈಕೋರ್ಟ್
ಇವರ ಅರ್ಜಿಯನ್ನ ವಜಾ ಮಾಡಿತ್ತು ಕಾರಣ ಯಾವುದೇ ಪ್ರಾಪರ್ ಲೈಸೆನ್ಸ್ ಇಲ್ಲದೆ ಬಿಳಿಬೋರ್ಡ್ ವಾಹನವನ್ನ ಟ್ಯಾಕ್ಸಿಯಾಗಿ ಬಳಸೋದು ನಿಷಿದ್ಧ ಇದಕ್ಕೆ ಆ ರಾಜ್ಯದ ಮೋಟಾರ್ ವಾಹನ ಕಾಯ್ದೆ ಒಪ್ಪೋದಿಲ್ಲ ಅಂತ ನಂತರ ಅದೇ ಅದೇ ವರ್ಷ ಮಹಾರಾಷ್ಟ್ರ ಸರ್ಕಾರ ಈ ವಿಚಾರದ ಬಗ್ಗೆ ಒಂದು ವರದಿ ಕೊಡಿ ಅಂತ ಒಂದು ಕಮಿಟಿಯನ್ನ ರಚನೆ ಮಾಡಿತ್ತು ಆದರೆ ಅಲ್ಲಿಯ ಆಟೋ ಹಾಗೂ ಕಾರ್ ಟ್ಯಾಕ್ಸಿ ಯೂನಿಯನ್ ಗಳಿಂದ ಈ ವಿಚಾರದ ಬಗ್ಗೆ ತುಂಬಾನೇ ಆಕ್ರೋಶ ವಿರೋಧ ವ್ಯಕ್ತ ಆಗಿತ್ತು ಅದು ಹೇಗೆ ವೈಟ್ ಬೋರ್ಡ್ ವಾಹನಗಳಿಗೆ ಟ್ಯಾಕ್ಸಿ ಸೇವೆ ಪರ್ಮಿಷನ್ ಕೊಡ್ತಿದ್ದೀರಾ ನಮ್ಮ ವಾಹನಗಳಿಗೆ ಟ್ಯಾಕ್ಸ್ ಆಗಿರಬಹುದು ಪರ್ಮಿಟ್ ಆಗಿರಬಹುದು ಎಲ್ಲಾದಕ್ಕೂ ಅತಿಯಾದ ಹಣ ಇಸ್ಕೊಂತೀರಾ ಇದು
ಯಾವುದು ಇವರಿಗೆ ಅಪ್ಲಿಕೇಬಲ್ ಆಗಲ್ಲ ಸೋ ನಾವ್ ಯಾಕೆ ಇಷ್ಟು ಹೆಚ್ಚುವರಿ ಹಣ ಕಟ್ಟಬೇಕು ಸಾಲದಕ್ಕೆ ಬೈಕ್ ಟ್ಯಾಕ್ಸಿಗಳಲ್ಲಿ ಯಾವುದೇ ರೀತಿ ಸೇಫ್ಟಿ ಇಲ್ಲ ಪ್ಯಾಸೆಂಜರ್ಗಳಿಗೆ ಇನ್ಶೂರೆನ್ಸ್ ಇರೋದಿಲ್ಲ ಇವರಿಂದ ಅನಾವಶ್ಯಕ ಪೊಲ್ಯೂಷನ್ ಹೆಚ್ಚಾಗ್ತಿದೆ ಅಂತ ವಿರೋಧ ಮಾಡಿದ್ರು ಇಷ್ಟೆಲ್ಲ ವಿರೋಧದ ನಡುವೆ ಕೂಡ ಮಹಾರಾಷ್ಟ್ರ ಸರ್ಕಾರ ಬೈಕ್ ಟ್ಯಾಕ್ಸಿಗೆ ಮತ್ತೆ ಪರ್ಮಿಷನ್ ಕೊಟ್ಟಿದೆ ಆದರೆ ಸದ್ಯಕ್ಕೆ ಕೇವಲ ಎಲೆಕ್ಟ್ರಿಕ್ ಬೈಕ್ ಟ್ಯಾಕ್ಸಿಗಳಿಗೆ ಮಾತ್ರ ಪರ್ಮಿಷನ್ ಕೊಟ್ಟಿದ್ದಾರೆ ಇದನ್ನೆಲ್ಲ ಗಮನದಲ್ಲಿ ಇಟ್ಟಕೊಂಡು ನಮ್ಮ ಹೈಕೋರ್ಟ್ ಕೂಡ ಬೈಕ್ ಟ್ಯಾಕ್ಸಿ ಸೇವೆಯನ್ನ ಸಂಪೂರ್ಣವಾಗಿ ನಿಲ್ಲಿಸಿಬಿಡೋದು ಸರಿಯಲ್ಲ ಟೆಕ್ನಾಲಜಿ ಮುಂದುವರೆದಂತೆ ಅಪ್ಡೇಟ್ ಆಗ್ತಾ ಹೋಗಬೇಕು ಸೋ ಈ
ವಿಚಾರದಲ್ಲಿ ಸ್ವಲ್ಪ ಆಲೋಚನೆ ಮಾಡಿ ಅಂತ ರಾಜ್ಯ ಸರ್ಕಾರಕ್ಕೆ ಸಲಹೆ ಕೊಟ್ಟಿದೆ ಈಗ ನಮ್ಮ ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿಗೆ ಮತ್ತೆ ಅವಕಾಶ ಕೊಡ್ತಾರಾ ಒಂದುವೇಳೆ ಕೊಟ್ಟರೆ ಮಹಾರಾಷ್ಟ್ರ ಸರ್ಕಾರದ ತರ ಕೇವಲ ಎಲೆಕ್ಟ್ರಿಕ್ ಬೈಕ್ ಗಳಿಗೆ ಅವಕಾಶ ಕೊಡ್ತಾರಾ ಅಥವಾ ಎಲ್ಲಾ ಬೈಕ್ ಗಳಿಗೂ ಕೊಡ್ತಾರಾ ಪರ್ಮಿಷನ್ ಕೊಟ್ಟಲ್ಲಿ ಏನೆಲ್ಲ ಗೈಡ್ಲೈನ್ಸ್ ತರಬಹುದು ಅಂಡ್ ಇದಕ್ಕೆಲ್ಲ ಕಂಪನಿಗಳು ಒಪ್ಪಿಗೆ ನೀಡ್ತಾರಾ ಅನ್ನೋದನ್ನ ಕಾದು ನೋಡಬೇಕಾಗುತ್ತೆ ಇನ್ನು ಕೆಲವರ ಪ್ರಶ್ನೆ ಏನಂದ್ರೆ ಕೇಂದ್ರ ಸರ್ಕಾರನೇ ಬೈಕ್ ಟ್ಯಾಕ್ಸಿಗಳ ಬಗ್ಗೆ ಅತಿಯಾದ ಆಸಕ್ತಿ ತೋರಿಸ್ತಿದ್ರು ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ಮಾಡಿಕೊಡಿ ಅಂತ ರಾಜ್ಯ ಸರ್ಕಾರಗಳಿಗೆ ಹೇಳಿದ್ರು ಕೂಡ ನಮ್ಮ ರಾಜ್ಯ
ಸರ್ಕಾರ ಯಾಕೆ ಇದನ್ನ ತಿರಸ್ಕರಿಸುತ್ತಿದೆ ಯಾಕೆ ಇದನ್ನ ಪರಿಗಣಿಸತಾ ಇಲ್ಲ ಅನ್ನೋದು ಇಲ್ಲಿ ಕೇಂದ್ರ ಸರ್ಕಾರ ಇದರ ಬಗ್ಗೆ ಸಲಹೆ ಕೊಡಬಹುದೇ ವಿನಹ ಟ್ರಾನ್ಸ್ಪೋರ್ಟ್ ವಿಚಾರದಲ್ಲಿ ರಾಜ್ಯ ಸರ್ಕಾರದ ಡಿಸಿಷನ್ ಅಲ್ಟಿಮೇಟ್ ಆಗಿರುತ್ತೆ ಹಂಗಂತ ಇದನ್ನ ಬಿಟ್ಟು ಈ ಕಂಪನಿಗಳಿಗೆ ಇನ್ನೊಂದು ಅವಕಾಶ ಇದೆ ಅದೇನಂದ್ರೆ ಹೈಕೋರ್ಟ್ ಕೊಟ್ಟಿರೋ ಆದೇಶವನ್ನ ಪ್ರಶ್ನೆ ಮಾಡಿ ಮೇಲ್ಮನವಿ ಸಲ್ಲಿಸಬಹುದು ನಿಮಗೆ ಗೊತ್ತಿರುತ್ತೆ ಎಷ್ಟೋ ಕೇಸ್ಗಳಲ್ಲಿ ಹೈಕೋರ್ಟ್ ಕೊಟ್ಟಂತ ತೀರ್ಪುಗಳನ್ನ ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟ್ಗೆ ಅರ್ಜಿ ಹಾಕಿ ಅಲ್ಲಿ ತೀರ್ಪು ಉಲ್ಟಾ ಆಗಿರೋ ಉದಾಹರಣೆಗಳಿದಾವೆ ಸೋ ಈ ಕಂಪನಿಗಳು ಇಂತದ್ದೇನಾದ್ರೂ ಮಾಡೋ ಪ್ರಯತ್ನ ಮಾಡ್ತಾರಾ ಕಾದು ನೋಡಬೇಕು ಒಟ್ಟಿನಲ್ಲಿ ಆಟೋದವರು
ಕ್ಯಾಬ್ನವರು ಹಾಗೂ ಬೈಕ್ ಟ್ಯಾಕ್ಸಿಗಳು ಈ ಎಲ್ಲರನ್ನು ತಲೆಯಲ್ಲಿ ಇಟ್ಕೊಂಡು ಎಲ್ಲರಿಗೂ ನ್ಯಾಯ ಸಲ್ಲೋ ರೀತಿ ಎಲ್ಲರ ಜೀವನಕ್ಕೂ ಒಳ್ಳೆದಾಗುವ ರೀತಿ ನಮ್ಮ ರಾಜ್ಯ ಸರ್ಕಾರ ಒಂದು ಪರಿಹಾರ ಕಂಡುಹಿಡಿಬೇಕಾಗಿದೆ ಸೋ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನು ಯಾವ ಸೇವೆ ಉತ್ತಮ ಅಂಡ್ ಸರ್ಕಾರ ಏನೆಲ್ಲ ಚೇಂಜಸ್ ಅನ್ನ ತರಬಹುದು ಅನ್ನೋದರ ಬಗ್ಗೆ ದಯವಿಟ್ಟು ಕಮೆಂಟ್ಸ್ ಮಾಡಿ
ಗೆಳೆಯರೇ ಸರ್ಕಾರ ಕೈಗೊಂಡ ಈ ನಿರ್ಧಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಪ್ಪದೆ ಕಾಮೆಂಟ್ ಮಾಡಿ ಹಾಗು ಮಾತೋಬರಿಗೂ ಶೇರ್ ಮಾಡಿ