Breaking News
6 Aug 2025, Wed

Kohli Cries After Winning IPL For 1st Time | 18ನೇ ಆವೃತ್ತಿ….18 ವರ್ಷಗಳ ನೆನಪು…ಒಮ್ಮೆಲೆ ನೆನೆದು ಮೈದಾನದಲ್ಲೇ ಕಣ್ಣಿರಿಟ್ಟ ಕೊಹ್ಲಿ!

Kohli Cries After Winning IPL For 1st Time | 18ನೇ ಆವೃತ್ತಿ….18 ವರ್ಷಗಳ ನೆನಪು…ಒಮ್ಮೆಲೆ ನೆನೆದು ಮೈದಾನದಲ್ಲೇ ಕಣ್ಣಿರಿಟ್ಟ ಕೊಹ್ಲಿ! 1

Kohli Cries After Winning IPL For 1st Time | RCBಗೆ ಐತಿಹಾಸಿಕ ಗೆಲುವು | ಮಗುವಿನಂತೆ ಕಣ್ಣೀರಿಟ್ಟ ಕೊಹ್ಲಿ

ನಿಜಕ್ಕೂ ಕಾಯುವಿಕೆ ಅಂದ್ರೆ ಹೇಗಿರುತ್ತೆ ಎನ್ನೋದಕ್ಕೆ ಸಾಕ್ಷಿಯಾಗಿತ್ತು ವಿರಾಟ್ ಕೊಹಲಿಯ ಕಣ್ಣೀರು ಕಮಿಟ್ಮೆಂಟ್ ಎನ್ನೋದಕ್ಕೆ ಸಾಕ್ಷಿಯಾಗಿತ್ತು ಕ್ರಿಕೆಟ್ ದಿಗ್ಗಜನ ಕಣ್ಣೀರು ಕನಸು ನನಸಾಗುವ ಕ್ಷಣ ಹೇಗಿರುತ್ತೆ ಅನ್ನೋದಕ್ಕೆ ಸಾಕ್ಷಿಯಾಗಿತ್ತು ಕಿಂಗ್ ಕೋಹಿಲಿಯ ಕಣ್ಣೀರು, ಇನ್ನು ನಾಲ್ಕು ಬಾಲ್ ಬಾಕಿ ಉಳಿದಿತ್ತು ಆಗಲೇ ಆರ್ಸಿಬಿ ಗೆಲುವು ಕನ್ಫರ್ಮ್ ಆಗಿತ್ತು ಅಷ್ಟಾಗುತ್ತಿದ್ದಂತೆ ಕಣ್ಣೀರ ದಾರಿಯಲ್ಲಿ ಮಿಂದೆದಿದ್ದ ವಿರಾಟ್ ಕೋಹಿಲಿ ಮೈದಾನದಲ್ಲಿ ಎಲ್ಲ ಕ್ಯಾಮೆರಾ ಕಣ್ಣುಗಳು ತನ್ನ ಮೇಲೆ ಫೋಕಸ್ ಆಗಿರುತ್ತವೆ ಎಂದು ಗೊತ್ತಿದ್ರು, ಚಿಕ್ಕ ಮಗುವಿನಂತೆ ಅಳೋದಕ್ಕೆ ಶುರು ಮಾಡಿದರು

ವಿರಾಟ್ ಕೋಹಿಲಿ ತಾನು ಕಂಡ ಕನಸು ಐಪಿಎಲ್ ನಲ್ಲಿ ಕಾಲಿಟ್ಟ ಮೊದಲ ತಂಡ ಪ್ರತಿ ಬಾರಿ ಟೂರ್ನಿಮೆಂಟ್ ಶುರುವಾದಾಗಲೂ ಈ ಸಲ ಕಪ್ ನಮ್ದೆ ಅಂತ ಹೇಳ್ಕೊಂಡು ಚಿನ್ನಸ್ವಾಮಿ ಸ್ಟೇಡಿಯಂಗೆ ಬರ್ತಿದ್ದ ಆರ್ಸಿಬಿ ಅಭಿಮಾನಿಗಳು ಅದೇ ಅಭಿಮಾನಿಗಳ ಮಾತನ್ನೇ ತಂಡದ ಟ್ಯಾಗ್ ಲೈನ್ ರೀತಿಯಲ್ಲಿ ಬಳಸಿಕೊಂಡ ಟೀಮ್ ಮ್ಯಾನೇಜ್ಮೆಂಟ್ 18 ವರ್ಷಗಳ ಕಾಯುವಿಕೆ ಬಹುಶಃ ವಿರಾಟ್ ಕೊಹ್ಲಿಯ ಜರ್ಸಿ ನಂಬರ್ ಬರಲಿ ಅಂತಲೇ ಐಪಿಎಲ್ ಕಪ್ ಇಷ್ಟರವರೆಗೆ ಮರಚಿಕೆ ಆಗಿತ್ತೇನೋ ಪ್ರತಿ ಬಾರಿ ಹತ್ತಿರ ಬಂದಾಗಲೂ ದೂರ ಓಡ್ತಾ ಇತ್ತು ಮೂರು ಬಾರಿ ಫೈನಲ್ ನಲ್ಲಿ ಎಡವಿದ್ದು ಅದರ

ಜೊತೆಗೆ ಎರಡು ಬಾರಿ ಎಲಿಮಿನೇಟರ್ ಎಲಿಮಿನೇಟರ್ ಟು ನಲ್ಲಿ ಸೋಲು ಕಂಡಿದ್ದು ಹೀಗೆ ಐದು ಬಾರಿ ಕಪ್ನ ಹತ್ತಿರ ಹತ್ತಿರಕ್ಕೆ ಬಂದು ನಿಂತಿದ್ರು ಐಪಿಎಲ್ ಮತ್ತು ಅದೃಷ್ಟ ದೇವತೆ ಎರಡು ಕೋಹಿಲಿಯ ಜೊತೆ ಜೂಜಾಟ ಆಡಿದಂತೆ ಇತ್ತು ಇಲ್ದೆ ಹೋಗಿದ್ರೆ 18 ವರ್ಷ ಕಾಯುವುದಕ್ಕೆ ಕಾರಣವೇ ಇರಲಿಲ್ಲ ಕಡೆಗೂ ಮಹಾಭಾರತದ 18 ಪರ್ವಗಳ ರೀತಿಯಲ್ಲಿ ಐಪಿಎಲ್ ನ 18ನೇ ಪರ್ವದಲ್ಲಿ ಆರ್ಸಿಬಿಗೆ ಗೆಲುವಿನ ನಗಾರಿ ಬಾರಿಸಿದೆ ಇದುವರೆಗೂ ಈ ಸಲ ಕಪ್ ನಮ್ಮದೆ ಅಂತ ಹೇಳ್ತಿದ್ದ ಫ್ಯಾನ್ಸ್ ಈಗ ಈ ಸಲ ಕಪ್ ನಮ್ಮದು ಅಂತ ಹೆಮ್ಮೆಯಿಂದ ಅಭಿಮಾನದಿಂದ ಅತ್ಯುತ್ಸಾಹದಿಂದ ಅಮೋಘ ಹರ್ಷದಿಂದ ಹೇಳಿಕೊಳ್ಳುವಂತಾಗಿದೆ ಇದಕ್ಕೆಲ್ಲ ಕಾರಣ ಕೋಹಿಲಿ ಎಂಬ ಅದ್ಭುತ ಕೋಹಿಲಿ ಎಂಬ ಕ್ರಿಕೆಟ್ನ ಕಿಂಗ್ ಈ

ಕ್ರಿಕೆಟ್ ರಾಜನ ಕಿರೀಟದಲ್ಲಿ ಎಲ್ಲಾ ಗರಿಗಳು ಇದ್ವು ಒನ್ ಡೇ ವರ್ಲ್ಡ್ ಕಪ್ ಟಿ20 ವರ್ಲ್ಡ್ ಕಪ್ ಚಾಂಪಿಯನ್ ಟ್ರೋಫಿ ಆದರೆ ಇಷ್ಟು ವರ್ಷ ಮಿಸ್ ಆಗಿದ್ದು ಐಪಿಎಲ್ ಕಪ್ ಈಗ ಅದು ಸೇರಿಕೊಳ್ಳುವುದರೊಂದಿಗೆ ಕ್ರಿಕೆಟ್ ರಾಜನ ಕಿರೀಟ ಪೂರ್ಣಗೊಂಡಿದೆ ವಿರಾಟ್ ಕೊಹಲಿ ಪಂದ್ಯದ ನಂತರ ಹೇಳಿದ ಮಾತುಗಳು ಅವರೆಷ್ಟು ಬೆಂಗಳೂರಿಯನ್ ಆಗಿದ್ರು ಎನ್ನುದಕ್ಕೆ ಸಾಕ್ಷಿಯಾಗಿತ್ತು ಸಂಪೂರ್ಣ ಬೆಂಗಳೂರಿನವರೇ ಆಗಿದ್ರು ಬೆಂಗಳೂರಿನ ಹುಡುಗನೇ ಆಗಿಬಿಟ್ಟಿದ್ರು ಬೆಂಗಳೂರನ್ನೇ ತನ್ನ ಮಾತಿನ ಮೂಲಕ ಮಂತ್ರ ಮುಗ್ಧ ಮಾಡಿದ್ರು ನನ್ನ ಯವ್ವನವನ್ನ ನನ್ನ ಪ್ರೈಮ್ ಟೈಮ್ ಅನ್ನ ನನ್ನ ಅನುಭವವನ್ನ ನಾನು ಈ ತಂಡಕ್ಕೆ ಕೊಟ್ಟಿದ್ದೇನೆ ಎಂದು ಗೆಲುವಿನ ನಂತರ ಕೋಹಿಲಿಯ ಫಸ್ಟ್

ರಿಯಾಕ್ಷನ್ ಆಗಿತ್ತು. ಎಷ್ಟು ತೂಕದ ಮಾತುಗಳಿವು ಇನ್ನು ಅಂಡರ್ 19 ವರ್ಲ್ಡ್ ಕಪ್ ಮುಗಿಸಿ ಬಂದಿದ್ದ ವಿರಾಟ್ ಕೊಹಲಿಯನ್ನ ಮೊದಲ ಐಪಿಎಲ್ ಸೀಸನ್ ನಲ್ಲಿ ಹುಡುಗರನ್ನ ಅನುಭವಕ್ಕಾಗಿ ಒಂದೊಂದು ತಂಡಕ್ಕೆ ಹಂಚಿಕೆ ಮಾಡಿದಾಗ ಬೆಂಗಳೂರು ತಂಡ ಸೇರಿಕೊಂಡವರು ವಿರಾಟ್. ಆದರೆ ಅಂದು ಆಕಸ್ಮಿಕವಾಗಿ ತಂಡ ಸೇರಿದ ವಿರಾಟ್ ಕೊಹಲಿ ನಂತರ ತಂಡದ ಅವಿಭಾಜ್ಯ ಅಂಗವಾಗಿ ಬೆಳೆದಿದ್ದು ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಕ್ಷರಗಳಲ್ಲಿ ಬರೆದಿಡಬೇಕಾದ ದಾಖಲೆ ಅದೇ ಕಾರಣಕ್ಕೆ ಕಪ್ ಗೆದ್ದ ನಂತರ ವಿರಾಟ್ ಹೇಳಿದ ಒಂದೊಂದು ಮಾತು ಕೂಡ ಗಮನಹರ್ರ ಕೋಹಿಲಿ ಹೇಳಿದ ಮಾತುಗಳನ್ನೊಮ್ಮೆ ಗಮನಿಸಿ ನಾನು ಬೆಂಗಳೂರಿನ ಪರವಾಗಿ 18 ವರ್ಷದಿಂದ ಆಡಿದ್ದೇನೆ 18 ವರ್ಷಗಳಿಂದಲೂ ಕಪ್ ಗೆಲ್ಲಬೇಕು

ಎಂದು ಸಂಪೂರ್ಣ ಪರಿಶ್ರಮ ಹಾಕಿದ್ದೇನೆ ಗೆದ್ದರೆ ಇದೇ ತಂಡದಲ್ಲಿ ಗೆಲ್ಲಬೇಕು ಎಂದು ನಿರ್ಧರಿಸಿದ್ದೆ ಕೆಲವೊಮ್ಮೆ ಮನಸ್ಸು ಬದಲಾಗುವುದು ಸಹಜ ಬೇರೆ ತಂಡಗಳಿಗೆ ಹೋಗುವ ಯೋಚನೆಗಳು ಬರುವುದು ಸಹಜ ಆದರೆ ಬೆಂಗಳೂರಿನ ಅಭಿಮಾನಿಗಳು ನೀಡಿದ ಅಭಿಮಾನಕ್ಕೆ ನಾನು ಕಪ್ ಗೆಲ್ಲುವುದಿದ್ದರೆ ಇದೇ ತಂಡದಲ್ಲಿದ್ದು ಗೆಲ್ಲಬೇಕು ಎಂದು ನಿರ್ಧರಿಸಿದ್ದೆ ಇದೇ ತಂಡದ ಮೂಲಕ ಮಾತ್ರ ಐಪಿಎಲ್ ಕಪ್ ಎತ್ತಿ ಹಿಡಿಯಬೇಕು ಎಂದು ನಿರ್ಧರಿಸಿದ್ದೆ ಇಂದು ರಾತ್ರಿ ನಾನು ಮಗುವಿನಂತೆ ನಿದ್ರಿಸಬಹುದು ಇದು ಕೋಹಿಲಿಯ ಕಮಿಟ್ಮೆಂಟ್ ಇದು ಬೆಂಗಳೂರಿನ ಬಗ್ಗೆ ಕೋಹಿಲಿ ಹೊಂದಿದ್ದ ಹೆಮ್ಮೆ ಇದು ಕೋಹಿಲಿ ಎಂಬ ದಿಗ್ಗಜನ ಒಳಗಿದ್ದ ಪುಟ್ಟ ಮಗುವಿನ ಮಾತು ನಿಜಕ್ಕೂ ವಿರಾಟ್ ಕೊಹಲಿ ಎಂಬ

ವಿರಾಟ ರೂಪದ ಕ್ರಿಕೆಟ್ ದಿಗ್ಗಜ ಐಪಿಎಲ್ ಟೂರ್ನಿಯನ್ನ ತನ್ನ ಬದುಕಿನ ಅತಿ ದೊಡ್ಡ ಪ್ರತಿಷ್ಠೆಯಾಗಿ ಇಟ್ಟುಕೊಂಡಿದ್ರು ಬೆಂಗಳೂರು ತಂಡಕ್ಕೆ ತನ್ನನ್ನ ಸಂಪೂರ್ಣವಾಗಿ ದಾರೆ ಎರೆದಿದ್ರು ಬೆಂಗಳೂರು ತಂಡದ ಕನಸನ್ನ ತನ್ನ ಕನಸಾಗಿ ಕಂಡಿದ್ರು ಬೆಂಗಳೂರಿನ ಜನರ ಬೆಂಬಲವನ್ನ ತನ್ನ ಮೇಲಿನ ಋಣಭಾರ ಎಂಬಂತೆ ಹೊತ್ತು ಸಾಗಿದ್ರು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ಆ ಋಣವನ್ನ ಕೋಹಿಲಿ ತೀರಿಸಿದ್ದಾರೆ ತಂಡದ ಪರವಾಗಿ ಅತಿ ಹೆಚ್ಚು ರನ್ 18ನೇ ಸೀಸನ್ ನಲ್ಲೂ ಬಾರಿಸಿದ್ದಾರೆ ಅಂದರೆ ಕೋಹಿಲಿ ಯಾವ ರೀತಿಯಲ್ಲಿ ತಂಡವನ್ನ ಗೆಲ್ಲಿಸುವ ಭಾರವನ್ನ ತನ್ನ ಹೆಗಲ ಮೇಲೆ ಹೊತ್ತು ಬಂದಿದ್ರು ಎನ್ನೋದನ್ನ ಅರ್ಥವಾಗುತ್ತದೆ. ಹೇಗೆ 2011ರ ವರ್ಲ್ಡ್ ಕಪ್ ಅನ್ನ ಸಚಿನ್

ತೆಂಡೂಲ್ಕರ್ ಗಾಗಿ ಗೆಲ್ಲಬೇಕು ಎಂದು ಇಡೀ ಟೀಮ್ ಇಂಡಿಯಾ ಬಯಸಿತ್ತು ಅದೇ ಸ್ವರೂಪದಲ್ಲಿ 18ನೇ ಸೀಸನ್ನ ಐಪಿಎಲ್ ಅನ್ನ ವಿರಾಟ್ ಕೊಹಲಿಗಾಗಿ ಗೆಲ್ಲಬೇಕು ಎಂದು ಆರ್ಸಿಬಿ ತಂಡದ ಆಟಗಾರರು ಬಯಸಿದ್ರು. ಕಡೆಗೂ ಆರು ರನ್ಗಳ ಅಂತರದಿಂದ ಪಂಜಾಬನ್ನ ಸೋಲಿಸಿ ಐಪಿಎಲ್ ನ ಚಾಂಪಿಯನ್ ಆಗಿ ಆರ್ಸಿಬಿ ಮೆರೆದಿದೆ ಕಿಂಗ್ ಕೋಹಿಲಿ ತನ್ನ ಕುಚಿಕು ಗೆಳೆಯರಾದ ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೆಲ್ ಜೊತೆ ಪುಟ್ಟ ಮಗುವಿನಂತೆ ಕಪ್ ಗೆದ್ದಿದ್ದನ್ನ ಸಂಭ್ರಮಿಸಿದ್ದಾರೆ ತಾವು ಮೂವರು ಕೂಡ ಐಪಿಎಲ್ ಚಾಂಪಿಯನ್ ಆಗುವುದಕ್ಕೆ ಎಲ್ಲ ಸ್ವರೂಪದಲ್ಲೂ ಆಡಿದ್ದೇವೆ ನಮ್ಮ ತಂಡದಲ್ಲಿ ಯಾವುದೇ ಕೊರತೆ ಇರಲಿಲ್ಲ ಆದರೂ ಕಪ್ ಗೆಲ್ಲೋದಕ್ಕೆ ಸಾಧ್ಯವಾಗಿರಲಿಲ್ಲ ನಾವು ಮೂವರು

ನಮ್ಮ ಪ್ರೈಮ್ ಟೈಮ್ ಅನ್ನ ಆರ್ಸಿಬಿ ಗಾಗಿ ಕೊಟ್ಟಿದ್ದೇವೆ ಎಂದು ಕೋಹಿಲಿ ತನ್ನಿಬ್ಬರ ಗೆಳೆಯರ ಜೊತೆ ಸೇರಿ ಹೇಳಿದ್ರು ದಿಗ್ಗಜ ಆಟಗಾರ ವಿರಾಟ್ ಕೊಹಲಿ ಕಡೆಗೂ ಐಪಿಎಲ್ ಬರ ನೀಗಿಸಿಕೊಂಡಿದ್ದಾರೆ ಇಷ್ಟು ದಿನ ಈ ಸಲ ಕಪ್ ನಮ್ದೆ ಅಂತ ಆರ್ಸಿಬಿ ಹೇಳ್ತಿದ್ದಾಗ ತಮಾಷೆ ಮಾಡ್ತಿದ್ದವರು ಎದುರು ಈ ಸಲ ಕಪ್ ನಮ್ದು ಅಂತ ವಿರಾಟ್ ಕೊಹಲಿ ಎಬಿಡಿ ಮತ್ತು ಗೇಲ್ ಹೇಳಿದ್ದು ನಿಜಕ್ಕೂ ಆರ್ಸಿಬಿ ಅಭಿಮಾನಿಗಳಿಗೆ ಸಂತಸದ ಕಣ್ಣೀರು ತರಿಸಿತ್ತು ಅಂತೂ ಕೋಹಿಲಿ ಕಪ್ ಎತ್ತಿ ಹಿಡಿದಿದ್ದಾರೆ ಆರ್ಸಿಬಿ ಅಭಿಮಾನಿಗಳು ಕಂಡ ಸುದೀರ್ಘ ಕನಸು ನನಸಾಗಿದೆ ಅದನ್ನ ಕೋಹಿಲಿಯ ಜರ್ಸಿ ನಂಬರ್ 18ರ ಜೊತೆಗೆ ಆಚರಿಸಿಕೊಂಡಿದ್ದು ಮಾತ್ರ ರಿಯಲಿ ವೆರಿ ಸ್ಪೆಷಲ್.!

By Admin

Leave a Reply

Your email address will not be published. Required fields are marked *