ನಮಸ್ತೆ ಸ್ನೇಹಿತರೆ, RCB IPL 2025 ಕ್ರಿಕೆಟ್ ಜಗತ್ತಿನ ಶ್ರೀಮಂತ ಲೀಗ್ (IPL) ಐಪಿಎಲ್ ನಲ್ಲಿ ಚಾಂಪಿಯನ್ಸ್ ಪಟ್ಟ ಅಲಂಕರಿಸುವುದು ಸುಲಭವಲ್ಲ, ಕೆಲವೊಮ್ಮೆ ಎಲ್ಲಾ ತಂಡಗಳನ್ನ ಹೊಡೆದುಹಾಕಿ ಟಾಪ್ ನಲ್ಲಿದ್ದರೂ ಕಪ್ ಒಲಿಯಲ್ಲ, ಆದರೆ ಅದೊಂದು ಪಂದ್ಯವನ್ನ ಗೆದ್ದುಬಿಟ್ಟರೆ ಚಾಂಪಿಯನ್ಸ್ ಪಟ್ಟ ಫಿಕ್ಸ್, ಕಳೆದ ಏಳು ವರ್ಷಗಳಿಂದಲೂ ಇದೇ ಸಂಪ್ರದಾಯ ನಡೆದುಕೊಂಡು ಬಂದಿದೆ, ಹೌದು ಆರ್ಸಿಬಿ RCB ಫೈನಲ್ ಹಂತಕ್ಕೆರಿದೆ ಐಪಿಎಲ್ IPL ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್ ತಲುಪಿದ ಸಾಧನೆ ಮಾಡಿದೆ, ಈ ಹಿಂದಿನ ಮೂರಕ್ಕೆ ಮೂರು ಫೈನಲ್ ನಲ್ಲೂ ಸೋತು ಕಪ್ ಎತ್ತಿ ಹಿಡಿಯುವ ಅವಕಾಶವನ್ನ ಆರ್ಸಿಬಿ (RCB) ಕೈ ಚೆಲ್ಲಿತ್ತು, ಆದರೆ ಈ ಬಾರಿ (RCB) ಆರ್ಸಿಬಿಗೆ ಕಪ್ ಮಿಸ್ಸೇ ಇಲ್ಲ ಯಾಕಂದರೆ ಈ ಸಲ ಆರ್ಸಿಬಿ ತಂಡ ಎಲ್ಲಾ ವಿಭಾಗದಲ್ಲೂ
ಬಲಿಷ್ಠವಾಗಿದೆ, ಅಲ್ಲದೆ ಐಪಿಎಲ್ IPL ಏಳು ವರ್ಷಗಳ ಇತಿಹಾಸವು ಈ ಸಲ ಆರ್ಸಿಬಿಯ ಚಾಂಪಿಯನ್ಸ್ ಅಂತ ಹೇಳ್ತಿದೆ ಹೌದು ಕಳೆದ ಏಳು ಐಪಿಎಲ್ ಸೀಸನ್ಗಳಲ್ಲಿ ಮೊದಲ ಕ್ವಾಲಿಫೈಯರ್ ಗೆದ್ದ ತಂಡವೇ ಫೈನಲ್ ನಲ್ಲಿ ಗೆದ್ದು ಕಪ್ ಗೆದ್ದುಕೊಂ ದೆ 2018 ರಿಂದ 2024ರವರೆಗೂ ಅದೇ ನಡೆದಿದೆ. ಈ ಬಾರಿ ಆರ್ಸಿಬಿಯು ಕ್ವಾಲಿಫೈಯರ್ ಒನ್ ಫೈಟ್ ನಲ್ಲೇ ಗೆದ್ದು ಫೈನಲ್ ಗೆ ಎಂಟ್ರಿ ನೀಡಿದೆ. ಇದರಿಂದ ಆರ್ಸಿಬಿ ಅಭಿಮಾನಿಗಳ ಕಪ್ ಕನಸು ನನಸಾಗುವ ಸಮಯ ಹತ್ತಿರವಾಗಿದೆ. 2018ರ ಐಪಿಎಲ್ ಮೊದಲ ಕ್ವಾಲಿಫಯರ್ ನಲ್ಲಿ ಎಸ್ಆರ್ಎಚ್ ವಿರುದ್ಧ ಸಿಎಸ್ಕೆ ಗೆಲುವು ಸಾಧಿಸಿತ್ತು ಫೈನಲ್ ನಲ್ಲೂ ಎಸ್ಆರ್ಎಚ್ ವಿರುದ್ಧವೇ ಗೆದ್ದು ಮೂರನೇ ಸಲ ಕಪ್ಗೆ ಮುತ್ತಿಕ್ಕಿತ್ತು. 2019ರ ಐಪಿಎಲ್ ನಲ್ಲಿ
ಮುಂಬೈ ಇಂಡಿಯನ್ಸ್ ಮೊದಲ ತಂಡವಾಗಿ ಫೈನಲ್ ಗೆ ತಲುಪಿತ್ತು. ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು ನಾಲ್ಕನೇ ಬಾರಿಗೆ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು. 2020ರ ಐಪಿಎಲ್ ನಲ್ಲೂ ಮುಂಬೈ ಮೊದಲ ಕ್ವಾಲಿಫೈಯರ್ ಗೆದ್ದು ಫೈನಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಮಣಿಸಿತ್ತು ಆ ಮೂಲಕ ಐದನೇ ಬಾರಿ ಕಪ್ ಗೆದ್ದುಕೊಂಡಿತ್ತು. 2021ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕ್ವಾಲಿಫೈಯರ್ ಒನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅನ್ನ ಮಣಿಸಿ ಫೈನಲ್ ಗೆ ಲಗ್ಗೆ ಇಟ್ಟಿತ್ತು. ಫೈನಲ್ ನಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆದ್ದು ನಾಲ್ಕನೇ ಬಾರಿ ಚಾಂಪಿಯನ್ ಆಗಿತ್ತು. 2022 ರಲ್ಲಿ ಗುಜರಾತ್ ಟೈಟನ್ಸ್ ಮೊದಲ
ಅರ್ಹತಾ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮಣಿಸಿ ಕಪ್ ಗೆದ್ದಿತ್ತು. ಇನ್ನು 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟನ್ಸ್ ಅನ್ನ ಮಣಿಸಿ ಫೈನಲ್ ಗೇರಿತ್ತು. ಫೈನಲ್ ನಲ್ಲೂ ಟೈಟನ್ಸ್ ಮಕಾಡೆ ಮಲಗಿಸಿ ಚಾಂಪಿಯನ್ಸ್ ಪಟ್ಟ ಅಲಂಕರಿಸಿತ್ತು. ಒಟ್ಟನಲ್ಲಿ ಈವರೆಗೂ ಮೊದಲ ತಂಡವಾಗಿ ಫೈನಲ್ಗೆ ಎಂಟ್ರಿ ನೀಡಿದ ತಂಡವೇ ಕಪ್ ಜಯಿಸಿದೆ 2025ರಲ್ಲೂ ಅದೇ ಸಂಪ್ರದಾಯ ಮುಂದುವರೆದರೆ ಆರ್ಸಿಬಿ ಕಪ್ ಎತ್ತಿ ಹಿಡಿಯುವುದನ್ನ ತಪ್ಪಿಸುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ ಇದು ಒಂದು ಇತಿಹಾಸವಾದರೆ ಮತ್ತೊಂದು ಕಡೆ ಆರ್ಸಿಬಿಯ ಬೆಂಕಿ ಚಂಡು ಹೇಸಲ್ವುಡ್ ಫೈನಲ್ ಪಂದದಲ್ಲಿ ಸೋತ ಇತಿಹಾಸವೇ ಇಲ್ಲ ತಾನಾಡಿದ ಎಲ್ಲಾ ಫೈನಲ್ ನಲ್ಲೂ ಹೇಸಲ್ವುಡ್ ತಂಡಕ್ಕೆ ಗೆಲುವು
ಲಭಿಸಿದೆ ತಮ್ಮ ಕ್ರಿಕೆಟ್ ಜೀವನದಲ್ಲಿ ಹೇಸಲ್ವುಡ್ ಈವರೆಗೂ ಹಲವು ಕಪ್ಗಳನ್ನ ಎತ್ತಿ ಹಿಡಿದಿದ್ದಾರೆ ಇನ್ಫ್ಯಾಕ್ಟ್ ಹೇಸಲ್ವುಡ್ ತಮ್ಮ ನಮ್ಮ ಕರಿಯರ್ನಲ್ಲಿ ಒಂದೇ ಒಂದು ಫೈನಲ್ ಪಂದ್ಯ ಸೋತಿಲ್ಲ ಆ ಟ್ರ್ಾಕ್ ರೆಕಾರ್ಡ್ ಅನ್ನೊಮ್ಮೆ ನೋಡೋದಾದರೆ 2021 ರಲ್ಲಿ ಚಾಂಪಿಯನ್ಸ್ ಲೀಗ್ ಟಿ20 ಫೈನಲ್ ನಲ್ಲಿ ಸಿಡ್ನಿ ಸಿಕ್ಸರ್ಸ್ ಪರ ಹೇಸಲ್ವುಡ್ ಆಡಿದ್ರು ಚೆನ್ನೈನಲ್ಲಿ ನಡೆದ ಫೈನಲ್ ನಲ್ಲಿ ಆರ್ಸಿಬಿ ವಿರುದ್ಧವೇ ಸಿಡ್ನಿ ಸಿಕ್ಸರ್ಸ್ 31 ರನ್ಗಳಿಂದ ಗೆದ್ದು ಬೀಗಿತ್ತು ನಂತರ 2015ರ ಏಕದಿನ ವಿಶ್ವಕಪ್ ಫೈನಲ್ 2020ರ ಬಿಗ್ ಬ್ಯಾಶ್ ಲೀಗ್ನಲ್ಲಿ ಸಿಡ್ನಿ ಸಿಕ್ಸರ್ಸ್ 2021ರ ಐಪಿಎಲ್ ನಲ್ಲಿ ಸಿಎಸ್ಕೆ ಪರ ಮತ್ತು 2021ರ ಟಿ20 ವಿಶ್ವಕಪ್ ಫೈನಲ್ ನಲ್ಲೂ ಆಸಿಸ್ ಪರ ಹೇಸಲ್ವುಡ್
ಕಣಕೆಳೆದಿದ್ರು 2023ರ ಏಕದಿನ ವಿಶ್ವಕಪ್ ಫೈನಲ್ ನಲ್ಲೂ ಗೆದ್ದು ಬೀಗಿದ್ರು. ಒಟ್ಟನಲ್ಲಿ ಈವರೆಗೂ ಹೇಸಲ್ವುಡ್ ಆರು ಫೈನಲ್ ಗಳನ್ನ ಆಡಿದ್ದು ಆರಕ್ಕೆ ಆರರಲ್ಲೂ ಗೆಲುವಿನ ಬಾವುಟ ಹಾರಿಸಿದ್ದಾರೆ. ಈ ಬಾರಿ ಆರ್ಸಿಬಿಗೂ ಹೇಸಲ್ವುಡ್ ಅದೃಷ್ಟ ತಂದುಕೊಡ್ತಾರ ಕಾದು ನೋಡಬೇಕು ಇತಿಹಾಸವೇನು ಆರ್ಸಿಬಿಯ ಗೆಲುವಿನ ಬಗ್ಗೆ ಹೇಳ್ತಾ ಇದೆ ಆದರೆ ಪಂಜಾಬ್ ಇತಿಹಾಸವನ್ನೇ ಬರೆಯೋದಕ್ಕೆ ಹೊರಟಿದೆ ಸೇಡಿಗಾಗಿ ಕಾದುಕೊಳ್ಳುತ್ತಿದೆ, ನಿಮ್ಮ ಪ್ರಕಾರ ಈ ಬಾರಿಯ IPL ಐಪಿಎಲ್ ಚಾಂಪಿಯನ್ ಯಾರಾಗಬಹುದು ಕಾಮೆಂಟ್ ಮಾಡಿ