Breaking News
6 Aug 2025, Wed

ಮೈಸೂರಿನ ಬಾಡಿಗೆ ಮನೆಗೆ ಬಂದ ಯುವಕ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ? ದೇವರೇ ಕಾಪಾಡಬೇಕು || Story of Mysore rent House |

ಮೈಸೂರಿನ ಬಾಡಿಗೆ ಮನೆಗೆ ಬಂದ ಯುವಕ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ? ದೇವರೇ ಕಾಪಾಡಬೇಕು || Story of Mysore rent House | 1

ಮನೆಯಲ್ಲಿ ಇರ್ತಾ ಇದ್ರು, ಪಟ್ಟಾಬಿ ಕೂಡ ಎಲ್ಲೂ ಹೋಗ್ತಾನೆ ಇರಲಿಲ್ಲ, ಸಣ್ಣ ಹುಡುಗ ಆಗಿದ್ದ ಕಾರಣ ಯಾರ ಜೊತೆನೂ ಆಟ ಆಡೋದಕ್ಕೂ ಬಿಡ್ತಾ ಇರ್ಲಿಲ್ಲ, ಪಟ್ಟಾಬಿ ಸ್ನೇಹಿತರು ಯಾರಾದ್ರೂ ಬಂದ್ರೆ ಮನೆಯೊಳಗೆ ಆಡ್ತಾ ಇದ್ರು, ಸ್ನೇಹಿತರೆ ಒಂದು ದಿನ ಏನಾಗುತ್ತೆ ಅಂತಂದ್ರೆ, ಪಟ್ಟಾಭಿ ಇದ್ದ ಮನೆ ಪಕ್ಕದಲ್ಲಿ ಒಂದು ಸಿಂಗಲ್ ಬೆಡ್ರೂಮ್ ಹೌಸ್ ಬಾಡಿಗೆಗೆ ಇರುತ್ತೆ, ಆರು ತಿಂಗಳ ತನಕ ಈ ಬಾಡಿಗೆ ಮನೆಗೆ ಯಾರು ಕೂಡ ಬಂದಿರಲ್ಲ, ಆರು ತಿಂಗಳಿಂದ ಖಾಲಿ ಇದ್ದ ಮನೆಗೆ ಒಬ್ಬ ಯುವಕ ಬರ್ತಾನೆ, ಈ ಬಾಡಿಗೆ ಮನೆಗೆ ಬಂದ ಯುವಕನ ವಯಸ್ಸು 28 ವರ್ಷ, ಆತನ ಹೆಸರು ಅಜಯ್ ಇವರ ಉದ್ಯೋಗ ಶೇರ್ ಬಿಸಿನೆಸ್ ಆಗಿರುತ್ತೆ, ಸ್ನೇಹಿತರೆ ಈ ಅಜಯ್ ಮೂಲತಹ ಮೈಸೂರು ನಗರದವನು ಅಲ್ಲವೇ ಅಲ್ಲ ಕರ್ನಾಟಕದವನಂತೂ ಮೊದಲೇ ಅಲ್ಲ ಈತ

ಜಾರ್ಖಂಡ್ ರಾಜ್ಯದವನು, ಈತ ಮೈಸೂರು ನಗರಕ್ಕೆ ಬಂದು ಎಂಟು ತಿಂಗಳಾಗಿರುತ್ತೆ, ಅಜಯ್ ಮೊದಲು ಸ್ನೇಹಿತನ ಮನೆಯಲ್ಲಿದ್ದ, ನಂತರ ಸ್ನೇಹಿತ ಬೇರೆ ಹೋದ ಕಾರಣ ಈತ ಮನೆ ಖಾಲಿ ಮಾಡಿಕೊಂಡು ಬಾಡಿಗೆ ಮನೆಗೆ ಶಿಫ್ಟ್ ಆಗ್ತಾನೆ, ಅಜಯ್ ಬಾಡಿಗೆ ಮನೆಗೆ ಬಂದು ಎರಡು ಮೂರು ತಿಂಗಳು ಆಗುತ್ತೆ, ಆದರೂ ಕೂಡ ಅಕ್ಕಪಕ್ಕ ಮನೆಯವರು ಮಾತಾಡ್ಸಿರಲ್ಲ, ಒಂದು ದಿನ ಏನಾಗುತ್ತೆ ಅಂತಂದ್ರೆ ಪಟ್ಟಾಭಿ ಹುಟ್ಟಿದ ಹಬ್ಬ ಬರುತ್ತೆ, ಅಮ್ಮ ಮಗ ಅಕ್ಕಪಕ್ಕದ ಮನೆಗೆ ಹೋಗಿ ಚಾಕ್ಲೇಟ್ ಕೊಟ್ಟು ಸಂಜೆ ಕೇಕ್ ಕಟಿಂಗ್ ಸೆಲೆಬ್ರೇಷನ್ ಇದೆ ಬನ್ನಿ ಅಂತ ಇನ್ವೈಟ್ ಮಾಡಿ ಬರ್ತಾರೆ, ಬಾಡಿಗೆ ಮನೆಗೆ ಹೊಸದಾಗಿ ಬಂದಿದ್ದ ಜಾರ್ಖಂಡ್ ಮೂಲದ ಅಜಯ್ ಗೆ ಕೂಡ ಚಾಕ್ಲೇಟ್ ಕೊಟ್ಟು ರಾತ್ರಿ ಕೇಕ್ ಕಟಿಂಗ್

ಗೆ ಸೆಲೆಬ್ರೇಶನ್ ಗೆ ಬನ್ನಿ ಎಂದು ಇನ್ವೈಟ್ ಮಾಡಿ ಬರ್ತಾರೆ, ಸ್ನೇಹಿತರೆ ರಾತ್ರಿ ಇಡೀ ಸೆಲೆಬ್ರೇಶನ್ ಗೆ ಅಜಯ್ ಕೂಡ ಬರ್ತಾನೆ, ಪಟ್ಟಾಭಿಗೆ ವಿವಿಧ ರೀತಿಯ ಗಿಫ್ಟ್ ಗಳನ್ನ ತರ್ತಾನೆ, ಅಜಯ್ ತಂದಿದ್ದ ಗಿಫ್ಟ್ ನೋಡಿ ಪಟ್ಟಾಭಿ ಫುಲ್ ಖುಷಿಯಾಗಿ ಬಿಡ್ತಾನೆ, ಸ್ನೇಹಿತರೆ ಈ ಒಂದು ಬರ್ತ್ಡೇ ಪಾರ್ಟಿಯಿಂದ ಅಜಯ್ ಪಟ್ಟಾಭಿ ಕುಟುಂಬದ ಜೊತೆ ಹತ್ರ ಆಗ್ತಾ ಬರ್ತಾನೆ, ಕೇವಲ ಎರಡು ತಿಂಗಳಲ್ಲಿ ಅಜಯ್ ಪಟ್ಟಾಭಿ ಕುಟುಂಬದ ಜೊತೆ ಎಷ್ಟರ ಮಟ್ಟಿಗೆ ಹತ್ರ ಆಗ್ತಾನೆ ಅಂದ್ರೆ ಪ್ರತಿದಿನ ಬೆಳಿಗ್ಗೆ ತಿಂಡಿ ಪಟ್ಟಾಭಿ ಮನೆಯಲ್ಲಿ ಬೆಳಿಗ್ಗೆ ತಿಂಡಿ ತಿಂತಾ ಹರಟೆ ಮಾತುಕಥೆ ಮಾಡಿಕೊಂಡು ಮತ್ತೆ ಮನೆಗೆ ವಾಪಸ್ ಹೋಗ್ತಾ ಇದ್ದ, ಹೀಗೆ ದಿನಗಳು ಕಳೆದಂತೆ ಪಟ್ಟಾಭಿ ತಂದೆ ತಾಯಿ

ಅಜಯ್ ಬಳಿ ಸಹಾಯ ಕೇಳಲು ಶುರು ಮಾಡ್ತಾರೆ, ಆದ್ರೆ ಅಜಯ್ ಬಳಿ ಏನು ಸಹಾಯ ಕೇಳ್ತಾರೆ ಅಂತ ಯೋಚನೆ ಮಾಡ್ತಾ ಇದ್ದೀರಾ? ತಂದೆ ತಾಯಿ ಇಬ್ಬರು ಹೊರಗಡೆ ದುಡಿಯೋಕೆ ಹೋಗ್ತಾರೆ ಸಂಜೆ ಬರೋದು 6:00 ಗಂಟೆ ಆಗಬಹುದು, 7:00 ಗಂಟೆನು ಆಗಬಹುದು, ಅಥವಾ 8:00 ಗಂಟೆ ಕೂಡ ಆಗಬಹುದು, ಪಟ್ಟಾಭಿ ಶಾಲೆಯಿಂದ ಬರೋದು ಐದು ಗಂಟೆಗೆ, ಪಟ್ಟಾಭಿ ತಂದೆ ತಾಯಿ ಹೇಳ್ತಾರೆ ನಮ್ಮ ಮಗ ಐದು ಗಂಟೆಗೆ ಶಾಲೆಯಿಂದ ಬರ್ತಾನೆ ಆದರೆ ನಾವು ಬರೋದು ಕೊಂಚ ಲೇಟ್ ಆಗುತ್ತೆ ಹಾಗಾಗಿ ನಾವು ಬರೋತನಕ ಪಟ್ಟಾಭಿಯನ್ನ ನಿಮ್ಮ ಮನೆಗೆ ಇಟ್ಕೊಳ್ತೀರಾ ಅಂತ ಅಜಯ್ಗೆ ಹೇಳ್ತಾರೆ,? ನೀವು ಯಾವುದಕ್ಕೂ ಯೋಚನೆ ಮಾಡಬೇಡಿ ನಿಮ್ಮ ಕೆಲಸ ಮುಗಿಸಿಕೊಂಡು ಆರಾಮಾಗಿ ಮನೆಗೆ ಬನ್ನಿ ಪಟ್ಟಾಭಿ

ನನ್ನ ಮನೆಯಲ್ಲೇ ಆಟ ಆಡ್ಕೊಂಡು ಹೋಂ ವರ್ಕ್ ಮಾಡ್ತಾ ಇರ್ಲಿ ಅಂತ ಈ ಕಡೆಯಿಂದ ಅಜ್ಜಯ್ ಹೇಳ್ತಾನೆ, ಸ್ನೇಹಿತರೆ ಇದು ಪ್ರತಿದಿನ ಹೀಗೆ ಮುಂದೆ ಸಾಗ್ತಾ ಹೋಗುತ್ತೆ, ಅಂದ್ರೆ ಪಟ್ಟಾಭಿ ಪ್ರತಿದಿನ ಶಾಲೆ ಮುಗಿಸಿಕೊಂಡು ಸಂಜೆ ಐದು ಗಂಟೆಗೆ ಬರ್ತಾನೆ, ಅಜಯ್ ಮನೆಗೆ ಹೋಗಿ ಸ್ನಾಕ್ಸ್ ತಿಂದು ಅಲ್ಲೇ ಹೋಂ ವರ್ಕ್ ಮಾಡೋದು ಪಟ್ಟಾಭಿ ತಂದೆ ತಾಯಿಗೂ ಇದು ಅಭ್ಯಾಸ ಆಗ್ಬಿಡುತ್ತೆ, ಹೇಗಿದ್ದರೂ ಶಾಲೆ ಮುಗಿಸಿದ ಮೇಲೆ ಅಜಯ್ ಮನೆಯಲ್ಲಿ ಪಟ್ಟಾಭಿ ಇರ್ತಾನೆ, ನಾವು ಆರಾಮಾಗಿ ಆಫೀಸ್ ಎಲ್ಲಾ ಮುಗಿಸಿಕೊಂಡು ಸುತ್ತಾಡಿಕೊಂಡು ಮನೆಗೆ ವಾಪಸ್ ಹೋಗಬಹುದು, ಅಜಯ್ ಇದರಿಂದ ಪಟ್ಟಾಭಿ ಬಗ್ಗೆ ಯೋಚನೆ ಮಾಡುವ ಅವಶ್ಯಕತೆನೇ ಇಲ್ಲ ಅಂತ ತಂದೆ ತಾಯಿ ಅಂದುಕೊಳ್ಳುತ್ತಾರೆ ,ಸ್ನೇಹಿತರೆ

ಪಟ್ಟಾಭಿ ತಂದೆ ತಾಯಿ ಆಫೀಸ್ ಕೆಲಸ ಮುಗಿಸಿಕೊಂಡು ಸಿನಿಮಾಗೆ ಹೋಗಿ ಹೋಟೆಲ್ಗೆ ಹೋಗಿ ಮನೆಗೆ ಬರುವಷ್ಟರಲ್ಲಿ ರಾತ್ರಿ ಎಂಟು ಮುಕ್ಕಾಲು ಆಗೋಗಿರುತ್ತೆ, ಅಜಯ್ ಮನೆಗೆ ಹೋಗಿ ಪಟ್ಟಾಭಿಯನ್ನ ಕಳಿಸಿಕೊಡಿ ನಾವು ಬಂದಿದ್ದೇವೆ ಅಂತ ಕೇಳ್ತಾರೆ, ಆದರೆ ಅಜಯ್ ಹೇಳ್ತಾನೆ ನಾನು ಇವತ್ತು ಮನೆಯಲ್ಲಿ ಇರಲಿಲ್ಲ ಹೊರಗಡೆ ಹೋಗಿದ್ದೆ ಪಟ್ಟಾಭಿ ಬಗ್ಗೆ ನನಗೆ ಗೊತ್ತಿಲ್ಲ ಅಂತ ಹೇಳ್ತಾನೆ, ಪಟ್ಟಾಭಿಗೆ ನೆನ್ನೆನೇ ಹೇಳಿದ್ದೆ ನಾನು ಮನೆಯಲ್ಲಿ ಇರಲ್ಲ ಅಂತ ನಾನು ಯೋಚನೆ ಮಾಡಿದ್ದೆ, ಪಟ್ಟಾಭಿ ಇವತ್ತು ನಿಮ್ಮ ಜೊತೆನೆ ಇರ್ತಾನೆ ಅಂತ ಅಂದುಕೊಂಡಿದ್ದೆ ಪಟ್ಟಾಭಿ ತಂದೆ ತಾಯಿಗೆ ಶಾಕ್ ಆಗುತ್ತೆ, ಪಟ್ಟಾಭಿ ಸ್ನೇಹಿತರಿಗೆ ಕರೆ ಮಾಡಿ ವಿಚಾರಿಸುತ್ತಾರೆ,

ಪಟ್ಟಾಭಿ ನಮ್ಮ ಮನೆಗೆ ಬಂದಿಲ್ಲ ಅವನ ಬಗ್ಗೆ ನನಗೆ ಗೊತ್ತಿಲ್ಲ ಅಂತ ಸ್ನೇಹಿತರು ಹೇಳ್ತಾರೆ, ಪಟ್ಟಾಭಿ ಶಿಕ್ಷಕರಿಗೂ ಕೂಡ ಕರೆ ಮಾಡಿ ವಿಚಾರಿಸಲಾಗುತ್ತೆ, ನಮಗೆ ಗೊತ್ತಿಲ್ಲ ಅಂತ ಪಟ್ಟಾಭಿಯ ಶಿಕ್ಷಕರು ಕೂಡ ಹೇಳ್ತಾರೆ, ತಕ್ಷಣ ಪೊಲೀಸ್ ಅಧಿಕಾರಿಗಳ ಹತ್ತಿರ ಹೋಗ್ತಾರೆ ಕಂಪ್ಲೇಂಟ್ ಕೊಡ್ತಾರೆ, ಪೊಲೀಸ್ ಅಧಿಕಾರಿಗಳು ಪಟಾಪಟ್ ಅಂತ ಇನ್ವೆಸ್ಟಿಗೇಶನ್ ಆರಂಭ ಮಾಡೇ ಬಿಡ್ತಾರೆ, ವೀಕ್ಷಕರೇ ಅಧಿಕಾರಿಗಳು ಶಾಲೆಗೆ ಹೋಗಿ ವಿಚಾರಿಸುತ್ತಾರೆ ಶಾಲೆ ಬಿಟ್ಟಿದ್ದು ಸಂಜೆ 4:30ಕ್ಕೆ , ಪಟ್ಟಾಭಿ ಶಾಲೆ ಬಿಟ್ಟ ತಕ್ಷಣ ಶಾಲೆ ಬಸ್ ಒಳಗೆ ಹೋಗಿರೋದು ಕೂಡ ಗೊತ್ತಾಗುತ್ತೆ, ಮನೆಯಿಂದ ಕೇವಲ 100 ಮೀಟರ್ ದೂರದಲ್ಲಿ ಬಸ್ ನಿಲ್ಲುತ್ತೆ, ಪಟ್ಟಾಭಿ 100 m ಇಂದ ನಡೆದುಕೊಂಡು ಮನೆಗೆ

ಮೈಸೂರಿನ ಬಾಡಿಗೆ ಮನೆಗೆ ಬಂದ ಯುವಕ ಎಂಥ ಕೆಲಸ ಮಾಡಿದ್ದಾನೆ ಗೊತ್ತಾ? ದೇವರೇ ಕಾಪಾಡಬೇಕು || Story of Mysore rent House | 3

ಬರಬೇಕು, ಮನೆಯಿಂದ ಕೇವಲ 20 ಮೀಟರ್ ದೂರದಲ್ಲಿ ಒಂದು ಕಿರಾಣಿ ಅಂಗಡಿ ಇದೆ ಕಿರಾಣಿ ಅಂಗಡಿಯಲ್ಲಿ ಒಂದು ಕಚ್ಚಾ ಮ್ಯಾಂಗೋ ಬೈಟ್ ಚಾಕ್ಲೇಟ್ ಕೂಡ ತಗೊಳ್ತಾನೆ, ಮನೆಯ 20 m ವ್ಯಾಪ್ತಿಯಲ್ಲಿ ಪಟ್ಟಾಭಿಗೆ ಏನೋ ಒಂದು ಸಮಸ್ಯೆ ಆಗಿದೆ, ಅಧಿಕಾರಿಗಳು ಕಿರಾಣಿ ಅಂಗಡಿ ಮಾಲಿಕನಿಗೆ ಒಂದು ಪ್ರಶ್ನೆ ಕೇಳ್ತಾರೆ, ಪಟ್ಟಾಭಿ ಚಾಕ್ಲೇಟ್ ತಗೊಂಡು ಮನೆಗೆ ವಾಪಸ್ ಹೋಗುವಾಗ ಯಾರಾದ್ರೂ ಯುವಕರು ಈ ರೋಡಲ್ಲಿ ಓಡಾಡ್ತಾ ಇದ್ರಾ ಅಂತ ಕಿರಾಣಿ ಮಾಲಿಕನಿಗೆ ಕೇಳ್ತಾರೆ, ಕಿರಾಣಿ ಮಾಲಿಕ ಹೇಳ್ತಾನೆ, ಪಟ್ಟಾಭಿ ಚಾಕ್ಲೇಟ್ ತಗೊಂಡು ಹೋಗುವಾಗ ನಮ್ಮ ಅಂಗಡಿಯಲ್ಲೂ ಯಾರು ಇಲ್ಲ ಮತ್ತು ಇಡೀ ರಸ್ತೆಯಲ್ಲಿ ಯಾರು ಕೂಡ ಓಡಾಡಿಲ್ಲ ಅಂತ ನಂತರ ಪೊಲೀಸ್ ಅಧಿಕಾರಿಗಳು ಅಜಯ್ ಮನೆಗೆ ಬಂದು

ವಿಚಾರಣೆ ಮಾಡೋಕೆ ಶುರು ಮಾಡ್ತಾರೆ, ಆದರೆ ಅಜಯ್ ನಾನು ಸಂಜೆ ಬೈಕಲ್ಲಿ ಕೆಲಸದ ಮೇಲೆ ಹೊರಗಡೆ ಹೋಗಿದ್ದೆ ಹಾಗಾಗಿ ಪಟ್ಟಾಭಿ ಬಗ್ಗೆ ನನಗೆ ಸ್ವಲ್ಪನು ಗೊತ್ತಿಲ್ಲ ಅಂತ ಹೇಳ್ತಾನೆ, ಪಟ್ಟಾಭಿ ಧರಿಸಿದ ಸ್ಕೂಲ್ ಶೂಸ್ ಯುನಿಫಾರ್ಮ್ ಕೂಡ ಅಜಯ್ ಮನೆ ಹೊರಗಡೆ ಕಂಡುಬರುತ್ತೆ, ಪೊಲೀಸರಿಗೆ ಅನುಮಾನ ಬರೋಕೆ ಶುರುವಾಗುತ್ತೆ, ಯಾಕಪ್ಪಾ ಅಂತಂದ್ರೆ ಪಟ್ಟಾಭಿ ಖರೀದಿ ಮಾಡಿದ ಕಚ್ಚಾ ಮ್ಯಾಂಗೋ ಬೈಟ್ ಚಾಕ್ಲೇಟ್ ಕವರ್ ಅಜಯ್ ಮನೆ ಗೇಟ್ ಒಳಗಡೆ ಬಿದ್ದಿರುತ್ತೆ, ಅಜಯ್ ಮನೆ ಒಳಗೆ ಬಂದ ಪೊಲೀಸ್ ಅಧಿಕಾರಿಗಳು ಒಂದು ವಿಚಾರವನ್ನ ಗಮನಿಸುತ್ತಾರೆ, ಪಟ್ಟಾಭಿಗೆ ಇಷ್ಟ ಆದ ಓರಿಯೋ ಬಿಸ್ಕತ್ ಆಲೂಗಡ್ಡೆ ಚಿಪ್ಸ್ ಮತ್ತು ಅರ್ಧ ತಿಂದು ಬಿಟ್ಟಿದ್ದ ಬೂಸ್ಟ್ ಇರುತ್ತೆ, ಆಗ ಅಜಯ್ ಇದೆಲ್ಲ ನಂದೇ ಅಂತ ಪೊಲೀಸ್

ಅಧಿಕಾರಿಗಳಿಗೆ ಹೇಳ್ತಾನೆ, ಅಜಯ್ ಹೆದರಿಕೊಂಡು ಪೊಲೀಸರಿಗೆ ಏನು ಹೇಳ್ತಾನೆ ಅಂದ್ರೆ, ಸಂಜೆ ನಾನು ಓರಿಯೋ ಬಿಸ್ಕತ್ ಮತ್ತು ಆಲೂ ಚಿಪ್ಸ್ ತಿನ್ನುತ್ತಾ ಟಿವಿ ನೋಡ್ತಾ ಇದ್ದೆ, ಅದರ ಜೊತೆ ಬೂಸ್ಟ್ ಕೂಡ ಕುಡಿತಾ ಇದ್ದೆ ಅಂತ ಹೇಳ್ತಾನೆ, ಅಧಿಕಾರಿಗಳು ಅಜಯ್ ಗೆ ಹೇಳ್ತಾರೆ, ಈಗ ತಾನೇ ಸಂಜೆ ನೀವು ಇರಲಿಲ್ಲ ಅಂತ ಹೇಳಿದ್ರಿ ಬೈಕ್ ತಗೊಂಡು ಯಾವುದೋ ಕೆಲಸದ ಮೇಲೆ ಹೋಗಿದ್ದೆ ಅಂತಾನೂ ಸಹ ಹೇಳಿದ್ರಿ, ಈಗೇನೋ ಹೊಸತರ ಹೇಳ್ತಾ ಇದ್ದೀರಾ ಅಂತ ಅಜಯ್ ನ ಕೇಳೋಕೆ ಪೊಲೀಸರು ಶುರು ಮಾಡ್ತಾರೆ, ಪೊಲೀಸರ ಈ ಮಾತಿಗೆ ಅಜಯ್ ನಿಜಕ್ಕೂ ಬೆವರಲು ಶುರು ಮಾಡ್ತಾನೆ, ಅಜಯ್ ಹೇಳಿದ್ದು ನಾನು ಬೈಕ್ ನಲ್ಲಿ ಹೊರಗಡೆ ಹೋಗಿದ್ದೆ ಅಂತ ಆದರೆ ಬೈಕ್ ದೂಳಲ್ಲಿ ಮುಳುಗಿ ಹೋಗಿದ್ದೆ ಬೈಕಿನ ಎರಡು ಟೈರ್ ಕೂಡ

ಪಂಚರ್ ಆಗಿದೆ ಅಂತ ಹೇಳ್ತಾನೆ, ತಕ್ಷಣ ಅಧಿಕಾರಿಗಳು ಅಜಯ್ ನ ಅರೆಸ್ಟ್ ಮಾಡಿ ವಿಚಾರಿಸುತ್ತಾರೆ, ಪೊಲೀಸರ ಹೆದರಿಕೆಗೆ ಎಲ್ಲಾ ಸತ್ಯ ಬಾಯಿ ಬಿಟ್ಟುಬಿಡ್ತಾನೆ, ವೀಕ್ಷಕರೇ ಅಜಯ್ ಮಾಡುತ್ತಿದ್ದ ಶೇರ್ ಮಾರ್ಕೆಟ್ ಅಲ್ಲಿ ಲಾಸ್ ಆಗುತ್ತೆ, ಆ ದುಡ್ಡನ್ನ ರಿಕವರ್ ಮಾಡೋದಕ್ಕೆ ಪಟ್ಟಾಭಿಯನ್ನ ಕಿಡ್ನಾಪ್ ಮಾಡಿ ಪಟ್ಟಾಭಿ ನ ತಂದೆ ತಾಯಿಗೆ 10 ಲಕ್ಷ ಡಿಮ್ಯಾಂಡ್ ಮಾಡುವ ಸಾಧ್ಯತೆ ಇತ್ತಂತೆ, ಆದರೆ ಸಿಕ್ಕಾಕೊಂಡ ನಂತರ ಪೊಲೀಸ್ ಅಧಿಕಾರಿಗಳು ಮಗುವನ್ನು ಹುಡುಕಿ ತಂದೆ ತಾಯಿಗೆ ಒಪ್ಪಿಸುತ್ತಾರೆ, ವೀಕ್ಷಕರೇ ನಮ್ಮ ಮೈಸೂರು ನಗರದ ಪೊಲೀಸ್ ಅಧಿಕಾರಿಗಳು ಕೆಲವೇ ಗಂಟೆಗಳಲ್ಲಿ ಕೇಸನ್ನ ಸಾಲ್ವ್ ಮಾಡಿಬಿಡ್ತಾರೆ, ಇಲ್ಲಿ ತಪ್ಪಿರೋದು ತಂದೆ ತಾಯಿಯದ್ದು ಪಟ್ಟಾಭಿಯನ್ನ

ಸಂಬಂಧ ಇಲ್ಲದ ಮೂರನೇ ವ್ಯಕ್ತಿ, ಅದು ಈ ರಾಜ್ಯದವರೇ ಅಲ್ಲ ಬೇರೆ ರಾಜ್ಯದ ವ್ಯಕ್ತಿಯ ಜೊತೆ ಬಿಟ್ಟು ಹೋಗ್ತಾರೆ, ಅಂದ್ರೆ ಇದು ಖಂಡಿತವಾಗಿಯೂ ಮೂರ್ಖತನ, ಚೆನ್ನಾಗಿ ಮಾತನಾಡಿಸುತ್ತಿರುವ, ಬರ್ತಡೇಗೆ ಒಳ್ಳೆ ಒಳ್ಳೆ ಗಿಫ್ಟ್ ಕೊಟ್ರು ಅಂತ ಸಂಪೂರ್ಣವಾಗಿ ನಂಬಿದ್ದು ಪಟ್ಟಾಭಿ ಅವರ ತಂದೆ ತಾಯಿ ಮಾಡಿದ ಮೊದಲ ತಪ್ಪು, ಪಟ್ಟಾಭಿ ಕಿಡ್ನ್ಯಾಪ್ ಆಗೋದಕ್ಕೆ ಸಂಪೂರ್ಣ ಹೊಣೆ ತಂದೆ ತಾಯಿನೇ, ಪಟ್ಟಾಭಿಯ ತಂದೆ ಸಂಜೆ ಸಿನಿಮಾ ಹೋಟೆಲ್ ಅಂತ ಮಜಾ ಮಾಡ್ತಾರೆ, ಇವರ ಮಜಕ್ಕೆ ಬಲಿಯಾಗಿದ್ದು ಪಟ್ಟಾಭಿ, ನಿಮ್ಮ ಪ್ರಕಾರ ಇದರಲ್ಲಿ ಯಾರದ್ದು ತಪ್ಪು ಕಾಮೆಂಟ್ ಮಾಡಿ.?

Leave a Reply

Your email address will not be published. Required fields are marked *